Health Tips: ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬಿಸಿ ಬಿಸಿಯಾದ ನೀರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಹಿತವೆನ್ನಿಸುತ್ತದೆ. ಆದರೆ ಆರೋಗ್ಯಕ್ಕೆ ಇದು ತುಂಬಾ ಹಾನಿಕಾರಕವೆಂದು ಹೇಳಲಾಗಿದೆ. ಬೇಸಿಗೆ, ಮಳೆಗಾಲ, ಮತ್ತು ಚಳಿಗಾಲ ಎಲ್ಲ ಕಾಲದಲ್ಲೂ, ಉಗುರು ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಬೇಕು. ಅಥವಾ ತಣ್ಣಿರಿನಿಂದ ಸ್ನಾನ ಮಾಡಿದರೂ ಉತ್ತಮ. ಆದರೆ ತಣ್ಣೀರಿನಿಂದ ಸ್ನಾನ ಮಾಡಿದರೆ, ಕೆಲವರಿಗೆ ಅಲರ್ಜಿಯಾಗುತ್ತದೆ. ಅಂಥವರು, ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಹಾಗಾದ್ರೆ ಯಾಕೆ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಬಿಸಿ ಬಿಸಿ ನೀರಿನ ಸ್ನಾನ ಮಾಡುವವರ ಚರ್ಮ, ಬೇಗ ಸುಕ್ಕುಗಟ್ಟಿ ಹೋಗುತ್ತದೆ. ಅವರು ಬೇಗ ವಯಸ್ಸಾದವರಂತೆ ಕಾಣುತ್ತಾರೆ. ಅಲ್ಲದೇ, ಬಿಸಿ ನೀರಿನ ಸ್ನಾನದಿಂದ ಚರ್ಮ ಸುಕ್ಕುಗಟ್ಟುತ್ತದೆ. ಗುಳ್ಳೆ, ಅಲರ್ಜಿಯಾಗುವ ಸಾಧ್ಯತೆ ಇದೆ.
ಅಲ್ಲದೇ ಬಿಸಿ ನೀರಿನಿಂದ ತಲೆಸ್ನಾನ ಮಾಡಿದರೆ, ಡ್ಯಾಂಡ್ರಫ್ ಇನ್ನೂ ಹೆಚ್ಚಾಗುತ್ತದೆ. ಕೂದಲು ಬೇಗ ಉದುರುತ್ತದೆ. ಬೊಕ್ಕು ತಲೆಯಾಗುವ ಸಂಭವವಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಸಿ ನೀರಿನಿಂದ ತಲೆಸ್ನಾನ ಮಾಡಬೇಡಿ. ಉಗುರು ಬೆಚ್ಚಗಿನ ನೀರು ಅಥವಾ ತಣ್ಣೀರಿನಿಂದ ತಲೆಸ್ನಾನ ಮಾಡುವುದು ಉತ್ತಮ.
ಬಿಸಿ ನೀರಿನ ಸ್ನಾನ ಮಾಡುವುದರಿಂದ ಬಿಪಿ ಬರುವ ಸಾಧ್ಯತೆ ಇರುತ್ತದೆ. ಅಲ್ಲದೇ, ಹೃದಯ ಸಂಬಂಧಿ ಖಾಯಿಲೆ ಬರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಬಿಸಿ ನೀರಿನ ಸ್ನಾನ ಮಾಡುವುದರಿಂದ ರಕ್ತದೊತ್ತಡ ಹೆಚ್ಚುತ್ತದೆ. ಈ ವೇಳೆ ಹೃದಯ ನಾಳಗಳಿಗೆ ಸರಿಯಾಗಿ ರಕ್ತ ಸಂಚಾರವಾಗದೇ, ಹೃದಯಾಘಾತವಾಗುವ ಸಂಭವವಿರುತ್ತದೆ.
ಇನ್ನು ನೀವು ಊಟ ಮಾಡಿದ ಮೇಲೆ ಸ್ನಾನ ಮಾಡುವವರಾಗಿದ್ದರೆ, ಅರ್ಧ ಗಂಟೆ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ಆಗ ಆರೋಗ್ಯಕ್ಕೇನು ತೊಂದರೆಯಾಗುವುದಿಲ್ಲ. ಅದನ್ನು ಬಿಟ್ಟು ಊಟ ಮಾಡಿದ ತಕ್ಷಣ, ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ, ನಿಮಗೆ ಜೀರ್ಣಕ್ರಿಯೆ ಸಮಸ್ಯೆ ಉದ್ಭವಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಹದಗೆಡುತ್ತದೆ.
ಆಲಿವ್ ಎಣ್ಣೆ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟು ಅತ್ಯುತ್ತಮ ಲಾಭಗಳಾಗುತ್ತದೆ ಗೊತ್ತಾ..?