ಈ ನಾಲ್ಕು ರಾಶಿಯವರು ಸಿಕ್ಕಾಪಟ್ಟೆ ಚಿಂತಿಸುತ್ತಾರೆ, ದುಃಖಿಸುತ್ತಾರೆ..

Spiritual: ಜೀವನ ಎಂದ ಮೇಲೆ ಅಲ್ಲಿ ಸುಖ-ದುಃಖ, ಕಷ್ಟ-ನಷ್ಟ ಎಲ್ಲವೂ ಇರುತ್ತದೆ. ಯಾವ ಮನುಷ್ಯನೂ ಸದಾ ಖುಷಿಯಾಗಿ ಇರುವುದಿಲ್ಲ. ಅದೇ ರೀತಿ ಯಾವ ಮನುಷ್ಯನೂ ಸದಾ ದುಃಖಿಯಾಗಿಯೂ ಇರುವುದಿಲ್ಲ. ಆದರೆ ಕೆಲ ರಾಶಿಯವರು ಹೆಚ್ಚಾಗಿ ದುಃಖದಲ್ಲಿಯೇ ಇರುತ್ತಾರೆ. ಚಿಂತೆಯಲ್ಲಿಯೇ ಮುಳುಗಿರುತ್ತಾರೆ. ಹಾಗಾದ್ರೆ ಯಾವುದು ಆ ರಾಶಿ ಅಂತಾ ತಿಳಿಯೋಣ ಬನ್ನಿ..

ಮಿಥುನ. ಮಿಥುನ ರಾಶಿಯವರಿಗೆ ಬಯಕೆ ಜಾಸ್ತಿ. ಹಾಗಾಗಿ ಇವರಿಗೆ ನಿರಾಸೆ, ದುಃಖ, ಚಿಂತೆಯೂ ಜಾಸ್ತಿ. ಅಲ್ಲದೇ, ಯಾವುದಾದರೂ ವಿಷಯದ ಬಗ್ಗೆ ಚಿಂತೆ ಮಾಡಲು, ಅಥವಾ ದುಃಖಿಸಲು ಶುರು ಮಾಡಿದರೆ, ಅದರ ಬಗ್ಗೆಯೇ ಯೋಚಿಸುತ್ತಾರೆ. ಹಲವಾರು ಬಾರಿ, ಸಮಯ ವ್ಯರ್ಥ ಮಾಡವಷ್ಟು ಚಿಂತಿಸುತ್ತಾರೆ. ಆದರೆ ಇವರು ಒಬ್ಬರನ್ನು ನಿರ್ಲಕ್ಷಿಸಲು ಶುರು ಮಾಡಿದರೆ, ಎಂದಿಗೂ ಅವರನ್ನು ತಮ್ಮ ಜೀವನಕ್ಕೆ ಬರಲು ಬಿಡುವುದಿಲ್ಲ.

ಕರ್ಕ. ಕರ್ಕ ರಾಶಿಯವರು ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುತ್ತಾರೆ. ಏಕೆಂದರೆ, ಇವರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಲು ಬಯಸುತ್ತಾರೆ. ಪ್ರೀತಿಪಾತ್ರರೊಂದಿಗೆ ಜಗಳವಾದರೆ, ಮನಸ್ತಾಪವಾದರೆ, ಅದರ ಬಗ್ಗೆಯೇ ಚಿಂತಿಸುತ್ತಾರೆ. ಮತ್ತೆ ಹೇಗೆ ಒಂದಾಗುವುದು ಎಂದು ಯೋಚಿಸುತ್ತಾರೆ. ಆದರೆ ಒಮ್ಮೆ ಇವರು ದೂರವಾಗುವುದರ ಬಗ್ಗೆ ಗಟ್ಟಿ ನಿರ್ಧಾರ ಮಾಡಿದರೆ, ಅದೆಂಥದ್ದೇ ಸಂಬಂಧವಾಗಲಿ, ಮರೆತೇ ಬಿಡುತ್ತಾರೆ. ಅಷ್ಟು ಗಟ್ಟಿ ಮನಸ್ಸಿನವರು.

ಕನ್ಯಾ. ಕನ್ಯಾ ರಾಶಿಯವರು ಪ್ರತೀ ವಿಚಾರದ ಬಗ್ಗೆ ಅತೀಯಾಗಿ ಚಿಂತಿಸುತ್ತಾರೆ. ಅದೆಷ್ಟರ ಮಟ್ಟಿಗೆ ಎಂದರೆ, ಇವರ ತಲೆಯಲ್ಲಿ ಇನ್ನೊಬ್ಬರ ಬಗ್ಗೆ ಬರೀ ನಕಾರಾತ್ಮಕ ಯೋಚನೆಯೇ ಬರುತ್ತದೆ. ಅಲ್ಲದೇ, ತಮ್ಮ ಜೀವನವನ್ನು ಇನ್ನೊಬ್ಬರೊಂದಿಗೆ ಹೋಲಿಸುವುದೇ ಈ ಚಿಂತೆಗೆ ಪ್ರಮುಖ ಕಾರಣವಾಗಿದೆ. ಇದ್ದುದರಲ್ಲೇ ಜೀವನ ಸಾಗಿಸುವ ಗುಣ ನಿಮ್ಮದಾಗಿಸಿಕೊಂಡಲ್ಲಿ, ನೀವು ಜೀವನದಲ್ಲಿ ನೆಮ್ಮದಿಯಾಗಿರಬಹುದು.

ವೃಶ್ಚಿಕ. ವೃಶ್ಚಿಕ ರಾಶಿಯವರಿಗೆ ಹೆಚ್ಚಾಗಿ ಜವಾಬ್ದಾರಿಯ ಕಾರಣಕ್ಕಾಗಿಯೇ ಚಿಂತೆ, ದುಃಖ ಇರುತ್ತದೆ. ಆದರೆ ಇವರು ಜೀವನದಲ್ಲಿ ಕಷ್ಟಪಟ್ಟು ದುಡಿಯುವ ಕಾರಣಕ್ಕೆ, ಚಿಂತೆಯನ್ನು ದೂರ ಮಾಡಿಕೊಳ್ಳುವ ದಾರಿ ಹುಡುಕುತ್ತಾರೆ. ವೃಶ್ಚಿಕ ರಾಶಿಯವರಿಗೆ ಬರೀ ಚಿಂತೆ, ದುಃಖವಲ್ಲ. ಬದಲಾಗಿ, ಕೋಪವೂ ಹೆಚ್ಚು. ಅದರಂತೆ, ಪ್ರೀತಿ, ಕಾಳಜಿಯೂ ಮಾಡುತ್ತಾರೆ.

ಜರ್ಮನಿಯ ಬರ್ಲಿನ್‌ನಲ್ಲಿರುವ ಗಣೇಶ ದೇವಸ್ಥಾನದ ವಿಶೇಷತೆಗಳೇನು ಗೊತ್ತಾ..?

ನೀವು ಜೀವನದಲ್ಲಿ ನೆಮ್ಮದಿಯಾಗಿರಬೇಕು ಎಂದರೆ, ಭಗವದ್ಗೀತೆಯಲ್ಲಿ ಹೇಳಿದ ಈ ಮಾತುಗಳನ್ನು ಕೇಳಿ..

ಈ ಅಂಶವನ್ನು ನೀವು ತಿಳಿದರೆ, ನಿಮ್ಮ ಭವಿಷ್ಯ ಉತ್ತಮವಾಗಿರುತ್ತದೆ..

About The Author