Health Tips: ಶಾಲೆಗೆ ಹೋಗುವ ಮಕ್ಕಳ ತಲೆಯಲ್ಲಿ ಹೇನಿನ ಓಡಾಟ ಇದ್ದೇ ಇರುತ್ತದೆ. ಈ ಹೇನಿನಿಂದಲೇ, ತಲೆಗೂದಲು ಉದುರುವುದು, ಡ್ಯಾಂಡ್ರಫ್ ಆಗುವ ಸಮಸ್ಯೆ ಉದ್ಭವಿಸುತ್ತದೆ. ಅಲ್ಲದೇ, ಕೆಲವರಿಗೆ ಇದು ಮರ್ಯಾದೆ ಪ್ರಶ್ನೆ. ತಮ್ಮ ಮಕ್ಕಳ ತಲೆಯಿಂದ ಹೇಗಾದರೂ ಮಾಡಿ, ಹೇನನ್ನು ಸಂಪೂರ್ಣವಾಗಿ ನಾಶ ಮಾಡಲೇಬೇಕು ಅಂತಾ ಅಂದುಕೊಳ್ತಾರೆ. ಅಂಥವರಿಗಾಗಿ ನಾವಿಂದು ಕೆಲ ಟಿಪ್ಸ್ ತಂದಿದ್ದೇವೆ.
ಮೊದಲನೇಯದಾಗಿ ಮಕ್ಕಳು ಟ್ರಿಪ್, ಕ್ಯಾಂಪ್ಗಳಿಗೆ ಹೋದಾಗ, ಖಂಡಿತವಾಗಿಯೂ ಹೇನು ಹಿಡಿದು ಬರುತ್ತಾರೆ. ಅದಕ್ಕಾಗಿ ನೀವು ಬೇರೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ಯಾವುದೇ ಸ್ನೇಹಿತೆಯ ತಲೆಗೆ ತಲೆ ಕೊಟ್ಟು ಕೂರಬಾರದು ಎಂದು ನಿಮ್ಮ ಮಕ್ಕಳಿಗೆ ಹೇಳಿಕೊಡಿ. ನಿಮ್ಮ ಮಕ್ಕಳು ಬಾಚುವ ಬಾಚಣಿಕೆ, ತಲೆ ದಿಂಬು, ಹ್ಯಾಟ್, ಟವೆಲ್ ಎಲ್ಲವೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ.
ಕೆಮಿಕಲ್ ಯುಕ್ತವಾದ ಶ್ಯಾಂಪೂ, ಸೋಪ್, ಎಣ್ಣೆ ಬಳಸುವ ಬದಲು, ತೆಂಗಿನ ಎಣ್ಣೆ ಬಳಸಿ. ಸೀಗೇಕಾಯಿ ಪುಡಿ, ಸೋಪ್ ನಟ್ನಂಥ ನ್ಯಾಚುರಲ್ ವಸ್ತು ಬಳಸಿ, ತಲೆ ಸ್ನಾನ ಮಾಡಿ. ಒಂದು ಮುಷ್ಠಿ ಬೇವಿನ ಎಲೆಗಳನ್ನು ನೀರಿನಲ್ಲಿ ಹಾಕಿ, ಚೆನ್ನಾಗಿ ಕುದಿಸಿ. ತಣಿದ ಬಳಿಕ, ಸೋಸಿ. ಈ ನೀರಿನಿಂದ ಮಸಾಜ್ ಮಾಡಿಕೊಳ್ಳಿ. ಅರ್ಧ ಗಂಟೆ ಬಳಿಕ, ತಲೆಸ್ನಾನ ಮಾಡಿ. ಇದರಿಂದ ಹೇನುಗಳು ಸಾಯುತ್ತದೆ. ತಲೆ ತುರಿಸುತ್ತಿದ್ದರೆ ಕಡಿಮೆಯಾಗುತ್ತದೆ.
ನೀವು ಕಂಡೀಶ್ನರ್ ಬಳಸುವಾಗ, ಅದು ನಿಮ್ಮ ಕೂದಲ ಬುಡಕ್ಕೆ ತಾಕದಿರುವಂತೆ ಅಪ್ಲೈ ಮಾಡಿ. ಬಳಿಕ ಬಾಚಣಿಕೆ ತೆಗೆದುಕೊಂಡು ಬಾಚಿ. ಆಗ ಈಸಿಯಾಗಿ ಹೇನು ಕೆಳಗೆ ಬೀಳುತ್ತದೆ. ಇನ್ನು ನಿಮ್ಮ ತಲೆಯಲ್ಲಿ ಹೇನು ಕೂರಬಾರದು ಅಂದ್ರೆ, ನೀವು ವಾರಕ್ಕೆ ಎರಡು ಬಾರಿಯಾದರೂ ಸ್ವಚ್ಛವಾಗಿ ತಲೆ ಸ್ನಾನ ಮಾಡಬೇಕು. ಮೊದಲು ಚೆನ್ನಾಗಿ ಎಣ್ಣೆ ಮಸಾಜ್ ಮಾಡಿಕೊಂಡು, ತಲೆಗೂದಲು ಬಾಚಿಕೊಂಡು. ಬಳಿಕ ಸ್ವಚ್ಛವಾಗಿ ತಲೆಗೂದಲನ್ನು ತೊಳೆಯಬೇಕು. ಆಗ ತಲೆಯಲ್ಲಿರುವ ಕಸ, ಧೂಳೆಲ್ಲ ದೂರವಾಗುತ್ತದೆ. ಆಗ ನಿಮ್ಮ ತಲೆ ಸ್ವಚ್ಛವಾಗುತ್ತದೆ. ಮತ್ತು ಸ್ವಚ್ಛವಾದ ತಲೆಗೂದಲು ಇರುವ ಜಾಗದಲ್ಲಿ ಹೇನು ಹೆಚ್ಚು ಹೊತ್ತು ಉಳಿಯುವುದಿಲ್ಲ.
ಇನ್ನು ನೀವು ಬಳಸುವ ಬಾಚಣಿಕೆ, ಟವೆಲ್ ಬೇರೆಯವರು ಬಳಸದಿರುವಂತೆ ನೋಡಿಕೊಳ್ಳಿ. ನೀವು ಸಪರೇಟ್ ಆಗಿರುವ ಹೇರ್ ಕೇರ್ ವಸ್ತುಗಳನ್ನು ಬಳಸಿ. ಇದರಿಂದ ನಿಮ್ಮ ತಲೆಗೆ ಹೇನು ಹರಡುವುದು ತಪ್ಪುತ್ತದೆ.
ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..
ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?




