Health Tips: ಹೆಣ್ಣು ಮಕ್ಕಳು ಪ್ರತೀ ತಿಂಗಳು ಮುಟ್ಟಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಪರೂಪಕ್ಕೆ ಸಾವಿರಕ್ಕೆ ಒಬ್ಬರಿಗೆ ಮುಟ್ಟಿನ ವೇಳೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಹಲವರು ಬೇರೆ ಬೇರೆ ರೀತಿಯ ಸಮಸ್ಯೆ ಎದುರಿಸುತ್ತಾರೆ. ಹೊಟ್ಟೆ ನೋವು, ಬೆನ್ನು ನೋವು, ಸೊಂಟ ನೋವು, ಕಡಿಮೆ ಬ್ಲೀಡಿಂಗ್, ಹೆಚ್ಚು ಬ್ಲೀಡಿಂಗ್ ಹೀಗೆ ಹಲವು ರೀತಿಯ ಸಮಸ್ಯೆ ಇರುತ್ತದೆ. ಇಂದು ನಾವು ಮುಟ್ಟಿನ ದಿನದಲ್ಲಿ ಹೆಚ್ಚು ಬ್ಲೀಡಿಂಗ್ ಆದಾಗ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಲಿದ್ದೇವೆ.
ಮೊದಲನೇಯದಾಗಿ ಹೆಚ್ಚು ಬ್ಲೀಡಿಂಗ್ ಆಗುವುದನ್ನು ತಡೆಯಲು ನೀವು ಪ್ರತಿದಿನ ಮಜ್ಜಿಗೆ, ಮೊಸರು, ತುಪ್ಪ, ಎಳನೀರು, ಹಣ್ಣು, ತರಕಾರಿಗಳ ಸೇವನೆ ಮಾಡಬೇಕು. ಅದರಲ್ಲೂ ದೇಹಕ್ಕೆ ತಂಪು ನೀಡುವ ತರಕಾರಿ, ಹಣ್ಣನ್ನು ತಿನ್ನಬೇಕು. ಇದರಿಂದ ದೇಹದ ಉಷ್ಣತೆ ಮತ್ತು ತಂಪಿನ ಪ್ರಮಾಣ ಸಮತೋಲನದಲ್ಲಿರುತ್ತದೆ. ಆಗ ಬ್ಲೀಡಿಂಗ್ ಸರಿಯಾಗಿ ಆಗುತ್ತದೆ.
ಖರ್ಜೂರ ಉಷ್ಣತೆ ಹೆಚ್ಚಿಸುವ ಪದಾರ್ಥ. ಆದರೆ ನೀವು ತುಪ್ಪದಲ್ಲಿ ಖರ್ಜೂರವನ್ನು ನೆನೆಸಿಟ್ಟು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡೆರಡು ಖರ್ಜೂರ ಸೇವಿಸಿದರೆ, ನಿಮ್ಮ ಮುಟ್ಟಿನ ಸಮಸ್ಯೆ ಸರಿಹೋಗುತ್ತದೆ. ಆ್ಯಲೋವೆರಾ ಜ್ಯೂಸ್ ಕುಡಿದರೂ ಉತ್ತಮ. ರಾತ್ರಿ ಮಲಗುವಾಗ ಒಂಗು ಗ್ಲಾಸ್ ಬಿಸಿ ಹಾಲಿಗೆ, ಚಿಟಿಕೆ ಅರಿಶಿನ ಮತ್ತು ಕೊಂಚ ಕಲ್ಲುಸಕ್ಕರೆ ಮಿಕ್ಸ್ ಮಾಡಿ ಕುಡಿಯಬೇಕು. ಇದು ಮುಟ್ಟಿನ ಸಮಸ್ಯೆ ಸೇರಿ ಹಲವು ರೋಗಗಳಿಗೆ ರಾಮಬಾಣವಾಗಿದೆ.
ಇವೆಲ್ಲದರ ಸೇವನೆಯ ಜೊತೆಗೆ ನೀವು ಪ್ರತಿದಿನ ವಾಕಿಂಗ್, ಯೋಗ ಮಾಡಬೇಕು. ಧ್ಯಾನ ಮಾಡಬೇಕು. ಯೋಗದಿಂದ ನಿಮ್ಮ ದೇಹದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಅದರಲ್ಲೂ ಮುಟ್ಟು ಸರಿಯಾದ ಸಮಯಕ್ಕೆ ಆಗುತ್ತಿಲ್ಲವೆಂದಲ್ಲಿ, ಅಥವಾ ಹೆಚ್ಚು ಬ್ಲೀಡಿಂಗ್, ಕಡಿಮೆ ಬ್ಲೀಡಿಂಗ್ ಆಗುತ್ತಿದೆ ಎಂದಾದಲ್ಲಿ, ನೀವು ಯೋಗ, ವಾಕಿಂಗ್ ಮಾಡಿದ್ದಲ್ಲಿ, ಇವೆಲ್ಲ ಸಮಸ್ಯೆ ಸರಿಹೋಗುತ್ತದೆ.
ಮನೆ ರುಚಿ ಕೊಡುವ ಐಸ್ಕ್ರೀಮ್ ಟೇಸ್ಟ್ ಮಾಡಬೇಕು ಅಂದ್ರೆ ನೀವು ಇಲ್ಲಿ ಬರ್ಲೇಬೇಕು..
ನಿಮ್ಮ ಸೀರೆಗೆ ತಕ್ಕ ಮ್ಯಾಚಿಂಗ್ ಡಿಸೈನರ್ ಬ್ಲೌಸ್ ಬೇಕಾದಲ್ಲಿ ಈ ಶಾಪ್ಗೆ ಭೇಟಿ ಕೊಡಿ..
ಗಂಟಲ ಕಿರಿಕಿರಿಯಾದರೆ ಮನೆಮದ್ದು ಮಾಡುವುದು ಹೇಗೆ..? ಇಲ್ಲಿದೆ ನೋಡಿ ವೈದ್ಯರ ಸಲಹೆ




