ಒಂದ್ಸಲಾ ಟೇಸ್ಟ್ ಮಾಡಿದ್ರೆ, ಪದೇ ಪದೇ ಈ ಹೊಟೇಲ್ಗೆ ಬರ್ತೀರಾ..

Food Adda: ಬೆಂಗಳೂರಿನಲ್ಲಿ ಗಲ್ಲಿ ಗಲ್ಲಿಯಲ್ಲೂ ಹೊಟೇಲ್‌ಗಳಿದೆ. ಯಾಕಂದ್ರೆ ಬೆಂಗಳೂರಿನಲ್ಲಿ ಉತ್ತಮವಾಗಿ, ರುಚಿ ರುಚಿಯಾಗಿ ಎಲ್ಲಿ ಊಟ ಸಿಗುತ್ತದೆಯೋ, ಅಂಥ ಹೊಟೇಲ್‌ಗಳನ್ನ ಜನ ಇಷ್ಟ ಪಡ್ತಾರೆ. ಅಂಥಾದ್ದೇ ರುಚಿ ರುಚಿಯಾದ ರೋಲ್ ಕೊಡುವ ಹೊಟೇಲ್‌ ಬಗ್ಗೆ ನಾವು ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನ ನಾಗರಭಾವಿಯ ಎಮ್‌ಪಿಎಮ್‌ ಲೇಔಟ್‌ನಲ್ಲಿರುವ ರೋಲ್ 21 ಹೊಟೇಲ್‌ ಬಗ್ಗೆ ನಾವಿಂದು ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ಇಲ್ಲಿ ಬರೀ ರೋಲ್‌ಗಳಷ್ಟೇ ಅಲ್ಲದೇ, ಐಸ್‌ಕ್ರೀಮ್, ಪರೋಠಾ, ಇಡ್ಲಿ, ಮೊಮೋಸ್, ನೂಡಲ್ಸ್,  ಸೇರಿ ಇನ್ನೂ ಹಲವು ಬಗೆಯ ತಿಂಡಿಗಳು ಸಿಗುತ್ತದೆ. ಇಲ್ಲಿ ವೆಜ್ ಜೊತೆ ನಾನ್‌ವೆಜ್‌ ಆಪ್ಶನ್ ಕೂಡ ಇದೆ.

ಇಲ್ಲಿ ಬೆಳಿಗ್ಗೆ ತಿಂಡಿಯಿಂದ ಹಿಡಿದು ಸಂಜೆ ಸ್ನ್ಯಾಕ್ಸ್‌ ತನಕ ಎಲ್ಲವೂ ಲಭ್ಯವಿದೆ. ನೀವು ಯಾವ ರೀತಿಯ ತಿಂಡಿಯನ್ನ ಬೇಕಾದ್ರೂ ಇಲ್ಲಿ ಆರ್ಡರ್ ಮಾಡಿ ತಿನ್ನಬಹುದು. ಈ ಬಗ್ಗೆ ಮಾತನಾಡಿರುವ ಹೊಟೇಲ್ ಓನರ್ ಶರತ್, ನಾವು ಯಾವುದಾದರೂ ಹೊಟೇಲ್‌ಗೆ ಹೋದಾಗ, ಅಲ್ಲಿ ಮೆನುವಲ್ಲಿ 100 ಐಟಮ್ಸ್ ಇರತ್ತೆ. ಆದ್ರೆ ನಾವು ಆರ್ಡರ್ ಮಾಡಿದಾಗ, ಒಂದು ತಿಂಡಿ ರುಚಿಯಾಗಿಲ್ಲದಿದ್ದರೂ ನಾವು ಮತ್ತೆ ಆ ಹೊಟೇಲ್‌ಗೆ ಹೋಗುವುದಿಲ್ಲ. ಹಾಗಾಗಿ ನಾವು ಕಡಿಮೆ ಐಟಮ್ಸ್ ಕೊಟ್ಟರೂ, ರುಚಿ ಮಾತ್ರ ಅಚ್ಚುಕಟ್ಟಾಗಿರಬೇಕು ಅನ್ನೋ ಕಾನ್ಸೆಪ್ಟ್‌ನಲ್ಲಿ ಈ ಹೊಟೇಲ್ ಶುರು ಮಾಡಿದ್ದು ಎಂದು ಹೇಳಿದ್ದಾರೆ.

ಪನೀರ್, ಬೇಬಿಕಾರ್ನ್ ಸೇರಿ ಕೆಲವು ರೋಲ್‌ಗಳು ವೆಜ್‌ನಲ್ಲಿ ಸಿಗುತ್ತದೆ. ನಾನ್‌ವೆಜ್‌ನಲ್ಲೂ ಚಿಕನ್ ರೋಲ್ ಸೇರಿ ಹಲವು ರೋಲ್‌ಗಳು ನಿಮಗೆ ಇಲ್ಲಿ ಲಭ್ಯವಿದೆ. ಯಾರಾದರೂ ಇದೇ ರೀತಿ ಹೊಟೇಲ್‌ ನಡೆಸಬೇಕು ಅಂದ್ರೆ, ಫ್ರ್ಯಾಂಚೈಸಿ ಕೂಡ ಸಿಗುತ್ತದೆ. ಹಾಗಾದ್ರೆ ಈ ಹೊಟೇಲ್ ಫ್ರ್ಯಾಂಚೈಸಿ ತೆಗೆದುಕೊಳ್ಳಬೇಕು ಅಂದ್ರೆ ಏನು ಮಾಡಬೇಕು..? ಜೊತೆಗೆ ಇಲ್ಲಿ ಯಾವ ಯಾವ ರೋಲ್ಸ್ ಲಭ್ಯವಿದೆ..? ಈ ಹೊಟೇಲ್‌ ವಿಶೇಷತೆಗಳೇನು ಅಂತಾ ತಿಳಿಯೋಕ್ಕೆ ಈ ವೀಡಿಯೋ ನೋಡಿ..

ಗರ್ಭಿಣಿಯಾದ ತಕ್ಷಣ ಈ ಸಮಸ್ಯೆ ಕಂಡುಬಂದರೆ, ನಿರ್ಲಕ್ಷಿಸದೇ ವೈದ್ಯರ ಬಳಿ ಹೋಗಿ..

ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..

About The Author