ಈ ಶಾಪ್‌ನಲ್ಲಿ ಬ್ರ್ಯಾಂಡೆಡ್ ಡ್ರೆಸ್‌ಗಳು ಕಡಿಮೆ ಬೆಲೆಗೆ ದೊರಕುತ್ತದೆ..

Shopping Tips: ಮೊದಲೆಲ್ಲ ಹೆಣ್ಣು ಮಕ್ಕಳಿಗೆ ಬಟ್ಟೆ ಅಂದ್ರೆ, ಸೀರೆ, ಲಂಗಾ ದಾವಣಿ, ಚೂಡಿದಾರವಾಗಿರುತ್ತಿತ್ತು. ಆದರೆ ಈಗ ವೆರೈಟಿ ವೆರೈಟಿ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಚೂಡಿದಾರಗಳಲ್ಲೇ ಹಲವು ವೆರೈಟಿಗಳಿದೆ. ಅನಾರ್ಕಲಿ, ಪಾಕೀಜಾ ಡ್ರೆಸ್, ಪುಶ್‌ಪ್ಯಾಕ್, ಪಟ್ಯಾಲಾ, ಪಂಜಾಬಿ ಹೀಗೆ ಅನೇಕ ರೀತಿಯ ಚೂಡಿದಾರಗಳನ್ನು ನಾವು ನೋಡಬಹುದು. ಇಂದು ನಾವು ಬ್ರ್ಯಾಂಡೆಡ್ ಡ್ರೆಸ್‌ಗಳು ಸಿಗುವ ಅಂಗಡಿಯೊಂದರ ಪರಿಚಯ ಮಾಡಲಿದ್ದೇವೆ.

ಬೆಂಗಳೂರಿನ ನಾಗರಬಾವಿಯ ಮೂಡಲಪಾಳ್ಯದಲ್ಲಿರುವ ಫೆಮಿನೈನ್ ಫ್ಯಾಷನ್ಸ್ ಅಂಗಡಿಯ ಪರಿಚಯ ನಾವಿಂದು ಮಾಡಲಿದ್ದೇವೆ. ಈ ಅಂಗಡಿಯಲ್ಲಿ ಡಿಸೈನ್ ಡಿಸೈನ್ ಕುರ್ತಿಗಳು ಲಭ್ಯವಿದೆ. ಬ್ರ್ಯಾಂಡೆಡ್ ಡ್ರೆಸ್‌ಗಳು ಕೂಡ ಅತೀ ಕಡಿಮೆ ಬೆಲೆಗೆ ಲಭ್ಯವಿದೆ. 100 ರೂಪಾಯಿಗೆ ವೆಸ್ಟರ್ನ್ ಟಾಪ್ಸ್, ಸಾವಿರ ರೂಪಾಯಿಗೆ 3 ಕುರ್ತಿಗಳು ಇಲ್ಲಿ ಲಭ್ಯವಿರುತ್ತದೆ.

ಅಂಬ್ರೆಲಾ ಡ್ರೆಸ್, ಟಾಪ್ಸ್, ಚೂಡಿದಾರ್ ಡ್ರೆಸ್ ಮೆಟಿರಿಯಲ್, ಅನಾರ್ಕಲಿ ಡ್ರೆಸ್ ಸೇರಿ ಹಲವು ರೀತಿಯ ಬಟ್ಟೆಗಳು ಇಲ್ಲಿ ಲಭ್ಯವಿದೆ. ಅಲ್ಲದೇ ಈ ಬಗ್ಗೆ ಮಾತನಾಡಿರುವ ಅಂಗಡಿಯ ಓನರ್, ನೀವು ಮೊದಲು ಇಲ್ಲಿ ಬಂದು ಕಲೆಕ್ಷನ್ ನೋಡಿಕೊಂಡು ಹೋಗಿ, ನಿಮಗೆ ಇಷ್ಟವಾಗಿದ್ದಲ್ಲಿ ನೀವು ಪರ್ಚೇಸ್ ಮಾಡಬಹುದು. ಯಾಕಂದ್ರೆ ಇಲ್ಲಿ ಬೆಲೆಯೂ ಕಡಿಮೆ. ಬ್ರ್ಯಾಂಡೆಡ್ ಬಟ್ಟೆಯಾಗಿದ್ದು, ಕಲೆಕ್ಷನ್ಸ್ ಕೂಡ ಹೆಚ್ಚಾಗಿದೆ. ಕೆಲವೊಂದು ಆಫರ್ಸ್ ಕೂಡ ಬಿಟ್ಟಿದ್ದೇವೆ. ನೀವು ಕಲೆಕ್ಷನ್ಸ್ ನೋಡಿಕೊಂಡು ಹೋಗಲು ಕೂಡ ಇಲ್ಲಿಗೆ ಬರಬಹುದು ಎಂದು ಹೇಳಿದ್ದಾರೆ.

ಈ ಶಾಪ್ ಶುರುವಾಗಿ ಬರೀ ನಾಲ್ಕು ತಿಂಗಳಾದ್ರೂ ಕೂಡ, ಉತ್ತಮ ರೆಸ್ಪಾನ್ಸ್ ಇದೆ. ಅಲ್ಲದೇ, ಅತ್ಯುತ್ತಮ ಬಟ್ಟೆ ಕಲೆಕ್ಷನ್ ಇರುವ ಕಾರಣಕ್ಕೆ, ಇಲ್ಲಿ ಜಸ್ಟ್ ಬಟ್ಟೆ ನೋಡಲು ಹೋಗುವ ಹೆಣ್ಣು ಮಕ್ಕಳು, ರಾಶಿ ರಾಶಿ ಶಾಪಿಂಗ್ ಕೂಡ ಮಾಡ್ತಾರೆ. ನೀವು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕು ಎಂದಲ್ಲಿ, ಈ ವೀಡಿಯೋ ನೋಡಿ..

ಮದುವೆಗೆ ರೆಡಿ ಆಗ್ತಾ ಇದ್ದೀರಾ..? ನಿಮಗೆ ಬೇಕಾದ ಡ್ರೆಸ್ ಇಲ್ಲಿ ಸಿಗತ್ತೆ ನೋಡಿ..

ಮನೋವೈದ್ಯರ ಬಳಿ ಸಲಹೆ ಕೇಳುವುದು ಇದೇ ಕಾರಣಕ್ಕೆ..

10 ನಿಮಿಷ ನೀವು ಈ ಫೇಸ್ಪ್ಯಾಕ್ ಹಾಕಿದ್ರೆ ಸಾಕು, ನಿಮ್ಮ ತ್ವಚೆ ಸುಂದರವಾಗುತ್ತದೆ..

About The Author