Thursday, December 4, 2025

Latest Posts

ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಿದೆಯಾ..? ಈ ಬಗ್ಗೆ ವೈದ್ಯರು ಏನಂತಾರೆ..?

- Advertisement -

Health Tips: ಮೊದಲೆಲ್ಲ ಸಲಿಂಗ ಕಾಮ, ಸಲಿಂಗ ವಿವಾಹವೆಂದರೆ, ಅಪರೂಪಕ್ಕೆ ಒಂದಾಗಿರುತ್ತಿತ್ತು. ಆದರೆ ಇತ್ತೀಚೆಗೆ, ಹಲವು ಸಲಿಂಗ ವಿವಾಹದ ಬಗ್ಗೆ ನಾವು ಕೇಳುತ್ತಿದ್ದೇವೆ. ಕೋರ್ಟ್ ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಹಾಗಾದ್ರೆ ಇತ್ತೀಚೆಗೆ ಸಲಿಂಗ ವಿವಾಹ ಹೆಚ್ಚಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಹಲವು ವರ್ಷಗಳ ಹಿಂದೆ ಇಂಥ ಕೇಸ್‌ಗಳು ಬಂದಾಗ, ಅದಕ್ಕೆ ಚಿಕಿತ್ಸೆ ಕೊಡಿಸಿ, ಸರಿ ಮಾಡಿಸಲು ಪ್ರಯತ್ನಿಸಲಾಗುತ್ತಿತ್ತು. ಆದರೆ ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ, ಇದು ಮನುಷ್ಯನ ಸಹಜ ಗುಣಗಳಲ್ಲಿ ಒಂದು ಅಂತಾ ಗೊತ್ತಾದಾಗ, ಸಲಿಂಗ ವಿವಾಹವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಯಿತು.

ಮೊದಲೂ ಕೂಡ ಸಲಿಂಗ ಕಾಮವಿತ್ತು. ಆದರೆ, ಅದನ್ನು ಯಾರೂ ಹೊರಗೆ ಹೇಳುತ್ತಿರಲಿಲ್ಲ. ಏಕೆಂದರೆ, ಹಲವು ಅಂಥವರನ್ನು ಕಂಡರೆ, ಹಿಂಸಿಸುತ್ತಿದ್ದರು. ಕೂಡಿ ಹಾಕುತ್ತಿದ್ದರು. ಮಾನಸಿಕ ಹಿಂಸೆ ಕೊಡುತ್ತಿದ್ದರು. ಆದರೆ ಈ ಸಮಾಜ ಮುಂದುವರೆದಿದ್ದು, ಇಂಥ ಕೆಲಸಗಳೆಲ್ಲ ಕಡಿಮೆಯಾಗಿದೆ. ಹಾಗಾಗಿ ಹಲವರು ಧೈರ್ಯ ಮಾಡಿ, ತಮಗೆ ಬೇಕಾದ ಹಾಗೆ ಬದುಕುತ್ತಿದ್ದಾರೆ. ವೈದ್ಯರ ಪ್ರಕಾರ ಸಲಿಂಗ ಕಾಮ ಅನ್ನುವುದು ರೋಗವಲ್ಲ. ಬದಲಾಗಿ, ಇದು ಸಹಜ ಗುಣ. ಈ ಬಗ್ಗೆ ಇನ್ನೂ ವಿವರವಾಗಿ ತಿಳಿಯಲು ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss