ಸುಲಭವಾಗಿ ತಯಾರಿಸಬಹುದಾದ ವೆಜ್ ಪಲಾವ್ ರೆಸಿಪಿ: ವೀಡಿಯೋ ಸಮೇತ

Recipe: ನಾವು ನಿಮಗೆ ಹಲವಾರು ರೆಸಿಪಿಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಇಂದು ವೆಜಿಟೇಬಲ್ ಪಲಾವ್ ಹೇಗೆ ಮಾಡೋದು ಅನ್ನೋ ಬಗ್ಗೆಯೂ ಹೇಳಲಿದ್ದೇವೆ. ನೀವು ವೀಡಿಯೋ ಮೂಲಕವೂ ರೆಸಿಪಿಯನ್ನು ನೋಡಬಹುದು. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದಕ್ಕೆ ಏನೇನು ಬೇಕು ಅಂತಾ ತಿಳಿಯೋಣ ಬನ್ನಿ..

1 ಟೊಮೆಟೋ, 1ಈರುಳ್ಳಿ, ಕ್ಯಾರೆಟ್‌, ಆಲೂಗಡ್ಡೆ, ಬೀನ್ಸ್, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಪುದೀನಾ, 1 ಕಪ್ ಮೊಸರು, ಅರ್ಧ ಕಪ್ ಕಾಯಿಸಿದ ಹಾಲು, 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್‌, 2 ಪಲಾವ್ ಎಲೆ, ಗರಂ ಮಸಾಲೆ, ಅಚ್ಚ ಖಾರದ ಪುಡಿ, ಅರಿಶಿನ, ಧನಿಯಾಪುಡಿ, ವೆಜಿಟೇಬಲ್ ಪಲಾವ್ ಪೌಡರ್, ಲವಂಗ, ಕಸೂರಿ ಮೇಥಿ, ಚಕ್ಕೆ, ಸ್ಟಾರ್ ಫ್ಲವರ್, ಅಕ್ಕಿ, ತುಪ್ಪ, ಎಣ್ಣೆ, ಉಪ್ಪು. ಇವಿಷ್ಟು ಪಲಾವ್ ಮಾಡಲು ಬೇಕಾಗುವ ಸಾಮಗ್ರಿ.

ಗ್ಯಾಸ್ ಆನ್ ಮಾಡಿ, ಕುಕ್ಕರ್ ಇಟ್ಟು, ಇದಕ್ಕೆ ಎಣ್ಣೆ, ತುಪ್ಪ, ಪಲಾವ್ ಎಲೆ, ಸ್ಟಾರ್ ಫ್ಲವರ್, ಚಕ್ಕೆ, ಲವಂಗ, ಕಸೂರಿ ಮೇಥಿ ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಟೊಮೆಟೋ, ಆಲೂ, ಬೀನ್ಸ್, ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಬಳಿಕ ಇದಕ್ಕೆ ಅರಿಶಿನ, ಗರಂ ಮಸಾಲೆ, ಅಚ್ಚ ಖಾರದ ಪುಡಿ, ಪಲಾವ್ ಪುಡಿ, ಧನಿಯಾ ಪುಡಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಹಾಲು, ಅಕ್ಕಿ ಹಾಕಿ ಮಿಕ್ಸ್ ಮಾಡಿ. ಇದಾದ ಬಳಿಕ ಕುದಿಸಿದ ನೀರು, ಕೊತ್ತೊಂಬರಿ ಸೊಪ್ಪು, ಪುದೀನಾ ಎಲೆ ಸೇರಿಸಿ 3 ವಿಶಲ್ ಬರುವವರೆಗೂ ಬೇಯಿಸಿದರೆ ಪಲಾವ್ ರೆಡಿ. ಇದನ್ನು ಹೇಗೆ ಮಾಡುವುದೆಂದು ನೋಡಬೇಕೆಂದಲ್ಲಿ ಈ ವೀಡಿಯೋ ನೋಡಿ.

ಮುಖದಲ್ಲಿರುವ ಕಲೆ ಕೊಳೆ ಹೋಗಲಾಡಿಸಿ, ಮುಖದ ಕಾಂತಿ ಹೆಚ್ಚಿಸುವುದು ಹೇಗೆ..?

ಮಾನಸಿಕ ಜಗತ್ತಿನ ಡಾರ್ಕ್ ಸೈಡ್ ಯಾವುದು ಗೊತ್ತಾ..?

ಸಮಯಕ್ಕೆ ಸರಿಯಾಗಿ ಮುಟ್ಟಾಗಲು ಏನು ಮಾಡಬೇಕು..?

About The Author