ಮನೆಯಲ್ಲೇ ಸುಲಭವಾಗಿ ಪಾನ್ ಕುಲ್ಫಿ ತಯಾರಿಸಿ..

Recipe: ಊಟವಾದ ಬಳಿಕ ಹಲವು ಬೀಡಾ ತಿನ್ನುತ್ತಾರೆ. ಇನ್ನು ಕೆಲವರು ಸಿಹಿ ತಿನ್ನುತ್ತಾರೆ. ಮತ್ತೆ ಕೆಲವರಿಗೆ ಐಸ್‌ಕ್ರೀಮ್ ಬೇಕು. ಹಾಗಾಗಿ ನಾವಿಂದು ಇವೆಲ್ಲವನ್ನೂ ಸೇರಿಸಿ, ಪಾನ್ ಕುಲ್ಫಿ ತಯಾರಿಸುವುದು ಹೇಗೆ ಅಂತಾ ಹೇಳಲಿದ್ದೇವೆ.

1 ಲೀಟರ್ ಗಟ್ಟಿ ಹಾಲನ್ನು ಕಾಯಿಸಿ. ಇದು ಕುದಿ ಬಂದ ಬಳಿಕ, ಕೊಂಚ ಕೇಸರಿ ದಳ, ಏಲಕ್ಕಿ ಪುಡಿ, ಸೇರಿಸಿ, ಚೆನ್ನಾಗಿ ತಿರುವಿ. 1 ಲೀಟರ್ ಹಾಲು ಅರ್ಧ ಲೀಟರ್ ಆಗುವವರೆಗೂ ನೀವು ಹಾಲನ್ನು ತಿರುವುತ್ತಿರಬೇಕು. ಆಗ ಈ ಮಿಶ್ರಣ ಗಟ್ಟಿಯಾಗುತ್ತದೆ. ಈಗ ಒಂದು ಬೀಡಾ ತೆಗೆದುಕೊಳ್ಳಿ. ಈ ಬೀಡಾದಲ್ಲಿ ಟೂಟಿ ಫ್ರೂಟಿ, ಒಣಕೊಬ್ಬರಿ, ಗುಲ್ಕಂದ್ ಅಷ್ಟೇ ಇರಬೇಕು. ಸುಣ್ಣ ಹಚ್ಚಿರಬಾರದು. ಬೀಡಾವನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, ಸಣ್ಣ ಮಿಕ್ಸಿ ಜಾರ್‌ಗೆ ಹಾಕಿ. ಇದರೊಂದಿಗೆ ಈಗಾಗಲೇ ಕುದಿಸಿಟ್ಟ ಹಾಲನ್ನು ಕೊಂಚ ಸೇರಿಸಿ, ಪೇಸ್ಟ್ ತಯಾರಿಸಿ.

ಇದನ್ನು ಉಳಿದ ಹಾಲಿಗೆ ಸೇರಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಟೂಟಿ ಫ್ರೂಟಿ, ಚೆರ್ರಿ ಹಣ್ಣು, ತುರಿದ ಒಣ ಕೊಬ್ಬರಿ ಸೇರಿಸಿ ಮಿಕ್ಸ್ ಮಾಡಿ. ಇದನ್ನು ಕುಲ್ಫಿ ಮೌಲ್ಡ್‌ಗೆ ಹಾಕಿ, ಚೆನ್ನಾಗಿ ಪ್ಯಾಕ್ ಮಾಡಿ, ಒಂದು ರಾತ್ರಿ ಫ್ರೀಜರ್‌ನಲ್ಲಿರಿಸಿದರೆ. ಕುಲ್ಫಿ ರೆಡಿ.

ಒಬ್ಬರ ಜೊತೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಯಾಕೆ ತಪ್ಪು ಗೊತ್ತಾ..?

Cancer ಎಚ್ಚರಿಕೆ ನೀಡುವ ಸೂಚನೆಗಳು ಯಾವುವು!?

ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?

About The Author