Health Tips: ಈಗ ಕೆಲ ವರ್ಷಗಳ ಹಿಂದೆ ವಯಸ್ಸು 40 ದಾಟಿದ ಬಳಿಕ ಶುಗರ್ ಬಂದಿದೆ ಅಂದ್ರೆ, ಅದನ್ನ ನಂಬುತ್ತಿದ್ದರು. ಆದರೆ ಇತ್ತೀಚೆಗೆ ಪುಟ್ಟ ಪುಟ್ಟ ಮಕ್ಕಳಲ್ಲೂ ಡಯಾಬಿಟೀಸ್ ಬರುತ್ತಿದೆ. ಇದು ನಂಬಲಸಾಧ್ಯವಾದರೂ ಸತ್ಯ. ಹಾಗಾದ್ರೆ ಮಕ್ಕಳಲ್ಲಿ ಡಯಾಬಿಟೀಸ್ ಹೆಚ್ಚಾಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಡಾ.ಪವನ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, ಮಕ್ಕಳಲ್ಲಿ ಶುಗರ್ ಬರಲು ಇರುವ ಮೊದಲ ಕಾರಣ, ಅನುವಂಶಿಕತೆ. ಅಪ್ಪ, ಅಮ್ಮ, ಅಜ್ಜ, ಅಜ್ಜಿ ಯಾರಿಗಾದರೂ ಶುಗರ್ ಇದ್ದಲ್ಲಿ, ಅದು ಮಕ್ಕಳಿಗೂ ಬರುವ ಸಾಧ್ಯತೆ ಇರುತ್ತದೆ. ಇನ್ನು ಇಂದಿನ ಕಾಲದ ಜನರ ಜೀವನ ಶೈಲಿಯಿಂದಲೂ ಮಕ್ಕಳಿಗೆ ಡಯಾಬಿಟೀಸ್ ಬರುತ್ತದೆ. ಹಾಗಾಗಿ ಮಕ್ಕಳ ಆರೋಗ್ಯ ಅತ್ಯುತ್ತಮವಾಗಿರಲು ತಾಯಿಯಾದವಳು ಆರೋಗ್ಯಕರ ಆಹಾರ, ಅಗತ್ಯವಿದ್ದಷ್ಟೇ ಮಾತ್ರೆಗಳ ಸೇವನೆ ಮಾಡಬೇಕು. ಅಲ್ಲದೇ, ಜಂಕ್ ಫುಡ್ ಸೇವನೆ ಕಡಿಮೆ ಮಾಡಬೇಕು.
ಇಂದಿನ ಕಾಲದ ಹೆಚ್ಚಿನ ಮಕ್ಕಳು ಪಿಜ್ಜಾ, ಬರ್ಗರ್, ಕೂಲ್ ಡ್ರಿಂಕ್ಸ್ ಸೇವನೆ ಹೆಚ್ಚಾಗಿ ಮಾಡುತ್ತಿದ್ದಾರೆ. ಇವುಗಳ ಸೇವನೆಯಿಂದ ಹಲವು ರೋಗಗಳು ಕೂಡ ಬರುತ್ತಿದೆ. ಇಂಥ ಆಹಾರಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿರುವುದರಿಂದ, ಮಕ್ಕಳು ಅತೀಯಾಗಿ ಇದನ್ನೆಲ್ಲ ಸೇವಿಸುವುದರಿಂದ ಮಕ್ಕಳಿಗೂ ಶುಗರ್ ಬರಲು ಶುರುವಾಗಿದೆ.
ಅಲ್ಲದೇ ತಾಯಿ ಗರ್ಭಿಣಿಯಾಗಿದ್ದಾಗ, ಸರಿಯಾಗಿ ಆರೋಗ್ಯದ ಬಗ್ಗೆ ಕಾಳಜಿ ಮಾಡದೇ, ಸಿಹಿ ತಿಂಡಿ, ಜಂಕ್ ಫುಡ್, ಕೂಲ್ ಡ್ರಿಂಕ್ಸ್ ಸೇವಿಸಿದರೆ, ಅದರ ಕೆಟ್ಟ ಪರಿಣಾಮ ಮಕ್ಕಳ ಮೇಲೆ ಬೀರಲು ಶುರುವಾಗುತ್ತದೆ. ಆಗ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಶುಗರ್ ಬರುತ್ತದೆ.




