ಲೋ ಶುಗರ್ ತುಂಬಾ ಡೇಂಜರ್.. ನಿರ್ಲಕ್ಷ್ಯ ಬೇಡ..

Health Tips: ಶುಗರ್ ಅನ್ನೋದು ಇಂದಿನ ಪೀಳಿಗೆಯ ಸಹಜ ಆರೋಗ್ಯ ಸಮಸ್ಯೆಯಾಗಿದ್ದರೂ, ನಿರ್ಲಕ್ಷಿಸಿದರೆ ನಮ್ಮ ಪ್ರಾಣವನ್ನೇ ಕಿತ್ತುಕೊಳ್ಳುವಷ್ಟು ಡೇಂಜರ್ ರೋಗವಾಗಿದೆ. ಹಾಗಾಗಿಯೇ ಪಥ್ಯ ಮಾಡಬೇಕು. ಸಕ್‌ಕರೆ ತಿನ್ನಬಾರದು. ಸಿಹಿ ಪದಾರ್ಥ ಮುಟ್ಟಬಾರದು. ಸಮಯಕ್ಕೆ ಸರಿಯಾಗಿ ಶುಗರ್ ಚೆಕ್ ಮಾಡಿಸಬೇಕು ಎಂದು ಸಲಹೆ ನೀಡುವುದು. ಅದರಲ್ಲೂ ಲೋ ಶುಗರ್ ಬಂದರೆ, ಇನ್ನೂ ಡೇಂಜರ್‌. ಹಾಗಾದ್ರೆ ಯಾಕರೆ ಲೋ ಶುಗರ್ ಡೇಂಜರ್ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ದೇಹದಲ್ಲಿ ಶುಗರ್ ಪ್ರಮಾಣ ಹೆಚ್ಚಾದಾಗ, ನಮ್ ಅಂಗಾಂಗಗಳು ಡ್ಯಾಮೇಜ್ ಆಗಲು ಸಮಯ ತೆಗೆದುಕೊಳ್ಳುತ್ತದೆ. ಆಗ ಅದಕ್ಕೆ ನಾವು ಚಿಕಿತ್ಸೆ ಪಡೆದು, ಸರಿಯಾಗಿಸಬಹುದು. ಆದರೆ ದೇಹದಲ್ಲಿ ಶುಗರ್ ಲೋ ಆದರೆ, ತುಂಬಾ ಡೇಂಜರ್. ಇದರಿಂದ ಸಾವು ಕೂಡ ಸಂಭವಿಸಬಹುದು. ಲೋ ಶುಗರ್ ಆದಾಗ ಹಾರ್ಟ್ ಅಟ್ಯಾಕ್, ಸ್ಟ್ರೋಕ್ ಬರುವ ಸಾಧ್ಯತೆಯೂ ಇರುತ್ತದೆ.

ಶುಗರ್ ಲೋ ಆಗಬಾರದು ಅಂದ್ರೆ, ಸಮಯಕ್ಕೆ ಸರಿಯಾಗಿ ಊಟ ತಿಂಡಿ ಸೇವಿಸಬೇಕು. ಸರಿಯಾದ ಸಮಯಕ್ಕೆ ಮಾತ್ರೆ ತೆಗೆದುಕೊಳ್ಳಬೇಕು. ಹಸಿದುಕೊಂಡು ಇರಬಾರದು. ಅಥವಾ ಉಪವಾಸ ಮಾಡಬಾರದು. ಅಥವಾ ಹೊತ್ತಲ್ಲದ ಹೊತ್ತಿಗೆ ಊಟ ಮಾಡುವುದು, ಲೇಟಾಗಿ ಊಟ ಮಾಡಬಾರದು. ಅಲ್ಲದೇ ಹೊಟ್ಟೆ ಹಸಿವಾಗಿ ತಲೆಸುತ್ತು ಬರುವ ಹಾಗಾಗುತ್ತಿದೆ ಎಂದಾಗ, ಏನನ್ನಾದರೂ ಸೇವಿಸಲೇಬೇಕು. ಪೂರ್ತಿ ಪ್ರಜ್ಞೆ ತಪ್ಪುವವರೆಗೂ ಯಾವುದೇ ಕಾರಣಕ್ಕೂ ಕಾಯಬಾರದು. ಹೀಗಾದಾಗ ಮಾತ್ರ ಲೋ ಶುಗರ್ ಆಗಿ, ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ…

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

ಲೇಸರ್ ಟ್ರೀಟ್ಮೆಂಟ್ ಪರ್ಮನೆಂಟ್ ಹೌದೋ, ಅಲ್ಲವೋ..?

About The Author