Sunday, June 22, 2025

Latest Posts

ಡಾರ್ಕ್ ಸರ್ಕಲ್ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು..?

- Advertisement -

Health Tips: ಹೆಣ್ಣು ಮಕ್ಕಳ ಮುಖದಲ್ಲಿ ಪಿಂಪಲ್ ಬಿಟ್ಟರೆ, ಹೆಚ್ಚು ಉಪದ್ರ ಕೊಡುವ ಸೌಂದರ್ಯ ಸಮಸ್ಯೆ ಅಂದ್ರೆ, ಡಾರ್ಕ್ ಸರ್ಕಲ್. ಕಣ್ಣಿನ ಸುತ್ತಲೂ ಕಪ್ಪಾಗುವುದನ್ನು, ಡಾರ್ಕ್ ಸರ್ಕಲ್ ಎನ್ನಲಾಗುತ್ತದೆ. ಇದು ಬಂದಾಗ, ಮುಖದ ಕಳೆಯೇ ಹೊರಟು ಹೋಗುತ್ತದೆ. ಡಾರ್ಕ್ ಸರ್ಕಲ್ ಬಂದಾಗ, ರೋಗ ಬಂದಂತೆ ತೋರುತ್ತದೆ. ಹಾಗಾದ್ರೆ ಡಾರ್ಕ್ ಸರ್ಕಲ್ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..

ಈ ಬಗ್ಗೆ ವಿವರಿಸಿರುವ ಡಾ.ದೀಪಿಕಾ, ಕೆಲವರಿಗೆ ಡಾರ್ಕ್ ಸರ್ಕಲ್ ಅನುವಂಶಿಕವಾಗಿಯೂ ಬರುತ್ತದೆ. ದೇಹದಲ್ಲಿ ಐರನ್ ಅಂಶ ಕಡಿಮೆ ಇದ್ದಾಗಲೂ, ಹೀಗಾಗುತ್ತದೆ. ಅಥವಾ ಕೆಲಸದ ಒತ್ತಡ ಹೆಚ್ಚಾಗಿದ್ದಾಗಲೂ, ಡಾರ್ಕ್ ಸರ್ಕಲ್‌ ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದ್ದಾರೆ. ಇನ್ನು ಹೆಚ್ಚು ಹೊತ್ತು ಕಂಪ್ಯೂಟರ್, ಲ್ಯಾಪ್‌ಟಾಪ್ ಮುಂದೆ ಕುಳಿತಾಗಲೂ ಈ ಸಮಸ್ಯೆ ಎದುರಿಸಬೇಕಾಗುತ್ತದೆ.

ಸರಿಯಾಗಿ ನಿದ್ರಿಸಲಾಗದಿದ್ದಾಗಲೂ ಡಾರ್ಕ್ ಸರ್ಕಲ್ಸ್ ಬರುತ್ತದೆ. ಇವೆಲ್ಲ ಕಾಮನ್ ಕಾರಣವಾಗಿದೆ. ಇನ್ನು ಪಿಸಿಓಡಿ, ಥೈರಾಯ್ಡ್ ಸಮಸ್ಯೆ ಇದ್ದಾಗಲೂ, ಹೀಗೆ ಕಣ್ಣಿನ ಸುತ್ತಲೂ ಕಪ್ಪಾಗುತ್ತದೆ. ಈ ಬಗ್ಗೆ ವೈದ್ಯರು ಕ್ರೀಮ್ ಹಚ್ಚಲು ಸಲಹೆ ನೀಡುತ್ತಾರೆ. ಕ್ರೀಮ್ ಹಚ್ಚಿದಾಗ, ಕಪ್ಪು ಕಲೆ ಹೋಗುತ್ತದೆ. ಲೇಸರ್ ಟ್ರೀಟ್‌ಮೆಂಟ್ ಕೂಡ ಮಾಡಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..

ನಿಮ್ಮ ದೇಹದ ತೂಕ ಬೇಗ ಕಡಿಮೆಯಾಗಬೇಕು ಎಂದಲ್ಲಿ ಈ ಪೇಯ ಕುಡಿಯಿರಿ..

ಉಗುರುಗಳ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು..? ವೈದ್ಯರೇ ಮಾಹಿತಿ ನೀಡಿದ್ದಾರೆ ನೋಡಿ..

ಗರ್ಭಕೋಶ ದಪ್ಪವಾದ್ರೆ ಏನಾಗತ್ತೆ..?

- Advertisement -

Latest Posts

Don't Miss