Health Tips: ಕರ್ನಾಟಕ ಟಿವಿ ಹೆಲ್ತ್ನಲ್ಲಿ ಜನರಿಗೆ ಬೇಕಾದ ಆರೋಗ್ಯ ಮಾಹಿತಿಯನ್ನು ನೀಡಲಾಗುತ್ತಿದೆ. ಕ್ಯಾನ್ಸರ್, ಚರ್ಮದ ರೋಗ, ಸ್ತ್ರೀ ರೋಗ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಪರಿಹಾರವಾಗಿ, ಹಲವು ಮಾಹಿತಿಯನ್ನು ನೀಡಲಾಗಿದೆ. ಅದೇ ರೀತಿ ನಾಟಿ ಔಷಧಿ ಒಳ್ಳೆದೋ..? ಕೆಟ್ಟದ್ದೋ ಅನ್ನೋ ಬಗ್ಗೆ ವೈದ್ಯರಾದ, ಡಾ.ಆಂಜೀನಪ್ಪ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯರು ಹೇಳುವ ಪ್ರಕಾರ, ತನ್ನಷ್ಟಕ್ಕೇ ತಾನು ವಾಸಿಯಾಗುವ ಖಾಯಿಲೆಗೆ, ನಾಟಿ ಔಷಧಿ ಮಾಡುವುದು ತಪ್ಪೇನಲ್ಲ. ಆದರೆ ನಾಟಿ ಔಷಧಿಯನ್ನೇ ನಂಬಿಕೊಂಡಿರಬಾರದು. ಅರಿಶಿನ ಬೇವಿನಂಥ ವಸ್ತುಗಳಲ್ಲಿ ಆ್ಯಂಟಿಸೆಪ್ಟಿಕ್ ಅಂಶವಿರುವ ಕಾರಣ, ಇಂಥವುಗಳನ್ನು ಬಳಸಿ ನಾಟಿ, ಔಷಧಿ ತಯಾರಿಸಿ, ಬಳಸಿದರೆ, ತಪ್ಪೇನಿಲ್ಲ ಎನ್ನುತ್ತಾರೆ ವೈದ್ಯರು. ವೈದ್ಯರು ನಾಟಿ ಔಷಧಿ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..




