Sunscreen ಚರ್ಮಕ್ಕೆ ಎಷ್ಟು ಮುಖ್ಯ..?

Health Tips: ನಿಮ್ಮ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ಹಲವು ಆರೋಗ್ಯ ಸಮಸ್ಯೆಗಳಿಗೆ, ಹಲವು ವೈದ್ಯರು ಪರಿಹಾರಗಳನ್ನು ಹೇಳಿದ್ದಾರೆ. ಸೌಂದರ್ಯ ಸಮಸ್ಯೆ, ತಾಯಿ ಮಗುವಿನ ಆರೋಗ್ಯ ಸಮಸ್ಯೆ, ಚರ್ಮದ ಸಮಸ್ಯೆ, ಹೊಟ್ಟೆಯ ಸಮಸ್ಯೆ, ಕ್ಯಾನ್ಸ್ರರ್ ಹೀಗೆ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡಿದ್ದೇವೆ. ಅದೇ ರೀತಿ ಇಂದು ವೈದ್ಯೆಯಾದ ಡಾ.ದೀಪಿಕಾ ಸನ್‌ಸ್ಕ್ರೀನ್ ಲೋಶನ್ ಚರ್ಮಕ್ಕೆ ಯಾಕೆ ಮುಖ್ಯ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..

ಬೇಸಿಗೆ ಬಂದ ತಕ್ಷಣ, ಹಲವರಿಗೆ ತಮ್ಮ ಚರ್ಮದ ಬಗ್ಗೆ ಕಾಳಜಿ ಬರುತ್ತದೆ. ಏಕೆಂದರೆ, ಬಿಸಿಲಿಗೆ ಮುಖ ಬಾಡಿಹೋಗುತ್ತದೆ. ಚರ್ಮ ಒರಟಾಗುತ್ತದೆ. ಚರ್ಮ ಕಪ್ಪಗಾಗುತ್ತದೆ. ಹಾಗಾಗಿ ಹಲವರು ಬೇಸಿಗೆಯಲ್ಲಿ ಚರ್ಮದ ಕಾಳಜಿ ಮಾಡುತ್ತಾರೆ. ಈ ಬಗ್ಗೆ ವೈದ್ಯರು ಟಿಪ್ಸ್ ಕೊಟ್ಟಿದ್ದು, ಬೇಸಿಗೆಯಲ್ಲಿ ಬೆವರಿನ ಮೂಲಕ ನೀರು ಹೋಗುವುದರಿಂದ, ಹೆಚ್ಚು ನೀರು ಕುಡಿಯಬೇಕು. ಫ್ರೆಶ್ ಹಣ್ಣು, ತರಕಾರಿ ತಿನ್ನಬೇಕು. ಮಜ್ಜಿಗೆ, ಮೊಸರಿನ ಸೇವನೆ ಮಾಡಬೇಕು ಎನ್ನುತ್ತಾರೆ.

ಇಷ್ಟೇ ಅಲ್ಲದೇ, ಸನಸ್ಕ್ರೀನ್ ಕೂಡ ಬಳಸಲೇಬೇಕು ಅಂತಾರೆ ವೈದ್ಯರು. ಇದನ್ನು ಯಾಕೆ ಬಳಸಬೇಕು ಅಂದ್ರೆ, ಸೂರ್ಯನ ಶಾಖದಿಂದ ಚರ್ಮಕ್ಕಾಗುವ ನಷ್ಟವನ್ನು ತಡೆಯಲು, ನಿಮ್ಮ ಮುಖ ಕಾಂತಿಯುತವಾಗಿ, ಚರ್ಮ ಸಾಫ್ಟ್ ಆಗಿ ಇರಬೇಕು ಅಂದ್ರೆ, ನಾವು ಸನ್‌ಸ್ಕ್ರೀನ್ ಬಳಸಬೇಕು ಅಂತಾರೆ ವೈದ್ಯರು. ಈ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author