ಪ್ಲೇಗ್ ಮಹಾಮಾರಿ ಇವತ್ತಿಗೂ ಇದೆಯಾ..?

Health Tips: ಒಂದು ಕಾಲದಲ್ಲಿ ಪ್ಲೇಗ್ ಅನ್ನೋ ರೋಗ ಬಂತಂದ್ರೆ, ಮನುಷ್ಯ ಬದುಕುವುದೇ ಡೌಟ್ ಅನ್ನೋ ರೀತಿ ಇತ್ತು. ಎಷ್ಟೋ ಜನ ಚಿಕ್ಕ ವಯಸ್ಸಿಗೆ ಪ್ಲೇಗ್ ಬಂದು ಸಾವನ್ನಪ್ಪಿದ್ದಾರೆ. ಆ ಕಾಲದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆಯೂ ಇರಲಿಲ್ಲ. ಆದರೆ ಈಗ ಹಾಗಲ್ಲ. ಎಲ್ಲ ರೋಗಕ್ಕೂ ಚಿಕಿತ್ಸೆ ಇದೆ. ಪ್ಲೇಗ್ ರೋಗ ಬರುವುದು ಕೂಡ ಕಡಿಮೆಯಾಗಿದೆ. ಆದರೆ ವೈದ್ಯರಾದ ಡಾ.ಆಂಜೀನಪ್ಪ ಪ್ಲೇಗ್ ರೋಗ ಇವತ್ತಿಗೂ ಇದೆಯಾ, ಇಲ್ಲವಾ ಅನ್ನೋ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಹಿಂದಿನ ಕಾಲದಲ್ಲಿ ಪ್ಲೇಗ್ ಬಂದರೆ, ಜನ ಊರನ್ನೇ ಬಿಟ್ಟುಬಿಡುತ್ತಿದ್ದರು. ಇನ್ನು ಪ್ಲೇಗ್ ಎಂದರೆ, ಇಲಿಯಿಂದ ಮನುಷ್ಯನಿಗೆ ಬರುವಂಥ ಖಾಯಿಲೆ. ಆದರೆ ಇತ್ತೀಚೆಗೆ ಪ್ಲೇಗ್ ರೋಗ ಯಾರಿಗೂ ಬರುತ್ತಿಲ್ಲ. ತೀರಾ ಅಪಪರೂಪವಾಗಿ, ಸೂರತ್‌ನಲ್ಲಿ ಒಂದೇ ಒಂದು ಕೇಸ್ ಕಾಣಿಸಿಕೊಂಡಿದ್ದು ಬಿಟ್ಟರೆ, ಬೇರೆಲ್ಲೂ ಪ್ಲೇಗ್ ಕಾಣಿಸಿಕೊಂಡಿಲ್ಲ. ಅದಕ್ಕಾಗಿ ಈಗ ಚಿಕಿತ್ಸೆ, ಮದ್ದು ಎಲ್ಲವೂ ಇರುವ ಕಾರಣ, ಪ್ಲೇಗ್ ರೋಗ ಬರುವುದಿಲ್ಲವೆಂದು, ವೈದ್ಯರು ಹೇಳಿದ್ದಾರೆ.

ಆದರೆ ಕಾಲರಾ ರೋಗ ಮಾತ್ರ ಬರುತ್ತಿದೆ. ಇದು ಬ್ಯಾಕ್ಟೀರಿಯಾದಿಂದ ಬರುವ ಖಾಯಿಲೆಯಾಗಿದ್ದು, ನೀರನ್ನು ಸರಿಯಾಗಿ ಕ್ಲೀನ್ ಮಾಡದೇ, ಕುದಿಸದೇ ಕುಡಿಯುವುದರಿಂದ ಬರುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಯಾಗಿದೆ. ಹಾಗಾದ್ರೆ ವೈದ್ಯರು ಪ್ಲೇಗ್ ಮತ್ತು ಕಾಲರಾ ಬಗ್ಗೆ ಇನ್ನು ಏನೇನು ವಿವರಿಸಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..

ದೇಹದ ಮೇಲೆ ಬೊಬ್ಬೆಗಳು ಬಂದಿದೆಯಾ..? ಹಾಗಾದ್ರೆ ಎಚ್ಚರ..

Liver Cancer ಇದ್ರೂ ಗೊತ್ತಾಗಲ್ಲಎಚ್ಚರ!

Kidneyಯಲ್ಲಿ ಕಲ್ಲಾಗಿದ್ಯಾ? ನಿಮ್ಮ ತೋಟದಲ್ಲೇ ಇದೆ ಮದ್ದು

About The Author