Health Tips: ನಾವು ಮಾರುಕಟ್ಟೆಯಲ್ಲಿ ಸಿಗುವ ಟೂತ್ ಪೇಸ್ಟ್ ಬಳಸುವ ಬದಲು, ಮನೆಯಲ್ಲೇ ಹಲ್ಲುಜ್ಜುವ ಪೌಡರ್ ರೆಡಿ ಮಾಡಬಹುದು. ಹಾಗಾದ್ರೆ ಇದನ್ನು ತಯಾರು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಅರಿಶಿನ, ಲವಂಗದ ಪುಡಿ, ಕೆಂಪುಪ್ಪು ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ. ಒಂದು ಡಬ್ಬದಲ್ಲಿ ಈ ಮೂರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ ಹಲ್ಲುಜ್ಜುವ ಪುಡಿ ರೆಡಿ. ಇನ್ನು ಈ ಪುಡಿಯಿಂದ ಹಲ್ಲುಜ್ಜಿದರೆ, ಏನು ಪ್ರಯೋಜನ ಎಂದು ಹೇಳಿದರೆ, ಇದರಿಂದ ಹಲ್ಲು ಗಟ್ಟಿಯಾಗುತ್ತದೆ. ಹಲ್ಲು ಬೇಗ ಹುಳುಕು ಹಿಡಿಯುವುದಿಲ್ಲ. ಹಲ್ಲು ಹಳದಿಗಟ್ಟುವುದಿಲ್ಲ. ಬಾಯಿ ವಾಸನೆ ಬರುವುದಿಲ್ಲ.




