ರಕ್ತಹೀನತೆ ಎಂದರೇನು..? ಇದು ಯಾರಲ್ಲಿ ಹೆಚ್ಚು ಕಂಡುಬರುತ್ತದೆ..?

Health Tips: ವೈದ್ಯರಾದ ಡಾ.ಪವನ್ ಕುಮಾರ್ ಅವರು ರಕ್ತಹೀನತೆ ಬಗ್ಗೆ ವಿವರಿಸಿದ್ದಾರೆ. ಇತ್ತೀಚೆಗೆ ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದ್ದು, ಅವರ ಆಹರ ಸೇವನೆ ಹೇಗಿರಬೇಕು. ಈ ಬಗ್ಗೆ ಅವರು ಯಾವ ರೀತಿ ಕಾಳಜಿ ವಹಿಸಬೇಕು ಎಂದು ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಗರ್ಭಿಣಿಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಾಣಿಸಿಕೊಳ್ಳುತ್ತಿದೆ. ಇದು ಎಷ್ಟು ಅಪಾಯಕಾರಿ ಅಂದ್ರೆ, ತಾಯಿಯಲ್ಲಿ ರಕ್ತ ಹೀನತೆ ಇದ್ದರೆ, ಆಕೆಯ ಹೊಟ್ಟೆಯಲ್ಲಿರುವ ಮಗುವಿಗೂ ರಕ್ತಹೀನತೆ ಬರುವ ಸಾಧ್ಯತೆ ಇರುತ್ತದೆ.

ಒಂದು ಹೆಣ್ಣು ಆರೋಗ್ಯವಾಗಿದ್ದರೆ, ಆಕೆ ಸಂಸಾರವೇ ಆರೋಗ್ಯವಾಗಿರುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ಸರಿಯಾದ ಆಹಾರವನ್ನು ತೆಗೆದುಕೊಂಡರೆ, ಆಕೆಯ ದೇಹಕ್ಕೆ ಪೋಷಕಾಂಶ ಸೇರಿ, ಆಕೆಯ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ರಕ್ತವಿರುತ್ತದೆ. ಆದರೆ ಆಕೆ ಗರ್ಭಾವಸ್ಥೆಯಲ್ಲಿ ನಿರ್ಲಕ್ಷ ವಹಿಸಿದರೆ, ಆಕೆಯ ಮಗುವಿಗೂ ರಕ್ತಹೀನತೆ ಸಮಸ್ಯೆ ಬಂದು, ಅದು ಭವಿಷ್ಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.

ಸಾಮಾನ್ಯ ಜನರಿಗೆ ಬೇಕಾಗುವಷ್ಟು ಪೋಷಕಾಂಶಗಳಿಗಿಂತ, ಗರ್ಭಿಣಿಯರಿಗೆ ದುಪ್ಪಟ್ಟು ಪೋಷಕಾಂಶ ಬೇಕಾಗುತ್ತದೆ. ಹಾಗಾಗಿ ತರಕಾರಿ, ಕಾಳು, ಡ್ರೈಫ್ರೂಟ್ಸ್, ನಟ್ಸ್, ಹಾಲು, ಮೊಸರು, ಮಜ್ಜಿಗೆ, ಸೊಪ್ಪು, ಇಂಥ ಆಹಾರಗಳನ್ನು ಯಥೇಚ್ಛವಾಗಿ ಗರ್ಭಿಣಿಯರು ಮತ್ತು ರಕ್ತಹೀನತೆ ಇರುವವರು ಸೇವಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author