ಸ್ಕಿನ್ ಬ್ಯಾಂಕ್ ಮಾಹಿತಿ ಬಗ್ಗೆ ನಿಮಗೆ ತಿಳಿದಿದೆಯಾ..?

Health Tips: ನಿಮಗೆಲ್ಲ ಬ್ಲಡ್ ಬ್ಯಾಂಕ್ ಬಗ್ಗೆ ಗೊತ್ತಿರಬಹುದು. ಇಲ್ಲಿ ರಕ್ತವನ್ನು ಸಂಗ್ರಹಿಸಿ ಇಟ್ಟು, ಅದು ಯಾರಿಗೆ ಅವಶ್ಯಕತೆ ಇರುತ್ತದೆಯೋ, ಅವರಿಗೆ ಬಳಸಲಾಗುತ್ತದೆ. ಅದೇ ರೀತಿ ಸ್ಕಿನ್ ಬ್ಯಾಂಕ್ ಸಹ ಇರುತ್ತದೆ. ಇಲ್ಲಿ ಚರ್ಮಗಳನ್ನು ಸಂಗ್ರಹಿಸಿ ಇಡಲಾಗುತ್ತದೆ. ಯಾರಿಗಾದರೂ ತೀವ್ರ ಸುಟ್ಟಗಾಯ, ಆ್ಯಸಿಡ್ ಅಟ್ಯಾಕ್ ಆದಾಗ, ಅಂಥವರಿಗೆ ಸರ್ಜರಿ ಮಾಡಲು, ಈ ಚರ್ಮಗಳನ್ನು ಬಳಸಲಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಈ ಬಗ್ಗೆ ವೈದ್ಯರಾದ ಕೆ.ಟಿ.ರಮೇಶ್ ಮಾತನಾಡಿದ್ದಾರೆ. ಯಾರಾದರೂ ನಿಧನರಾದರೆ, ಅವರು ತಮ್ಮ ಚರ್ಮವನ್ನು ದಾನ ಮಾಡಬೇಕು ಎಂದಿದ್ದರೆ, ಅವರು ಬದುಕಿರುವಾಗಲೇ, ಅವರ ಮನೆಯವರ ಒಪ್ಪಿಗೆ ಪಡೆದು, ಆಸ್ಪತ್ರೆಗೆ ಬಂದು, ನಾವು ದೇಹಾಂತ್ಯದ ಬಳಿಕ, ನಮ್ಮ ಚರ್ಮವನ್ನು ದಾನ ಮಾಡುತ್ತೇವೆ ಎಂದು ಬರೆದುಕೊಡಬೇಕು. ಅವರ ನಿಧನದ ಬಳಿಕ, ಅವರ ಮನೆಯವರು ವೈದ್ಯರಿಗೆ ಮಾಹಿತಿ ನೀಡಿದರೆ, ಅವರೇ ಬಂದು, ಮೃತರ ಚರ್ಮವನ್ನು ತೆಗೆದುಕೊಂಡು ಹೋಗುತ್ತಾರೆ.

ಸಾವನ್ನಪ್ಪಿದ 6 ಗಂಟೆಯೊಳಗೆ ಚರ್ಮವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಮೃತರ ತೊಡೆಯ ಭಾಗದ ಚರ್ಮವನ್ನನು ಮಾತ್ರ ಸಂಗ್ರಹಿಸಲಾಗುತ್ತದೆ. ಹೀಗೆ ಸಂಗ್ರಹಿಸಿದ ಚರ್ಮವನ್ನು ವೈದ್ಯರು, ಮೈ ಕೈ ಸುಟ್ಟುಕೊಂಡಿರುವ ಅಥವಾ ಆ್ಯಸಿಡ್ ಅಟ್ಯಾಕ್ ಆಗಿರುವವರ ದೇಹಕ್ಕೆ ಕಸಿ ಮಾಡಿ, ಆ ಚರ್ಮವನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author