ಕಾಲಿನ ಗೇಣುಗಳಲ್ಲಿ ಕಂಡುಬರುವ ಗಡ್ಡೆ ಬಗ್ಗೆ ಚಿಂತೆ ಬೇಡ

Health tips: ಸಾಮಾನ್ಯವಾಗಿ ಕೆಲವರ ಕಾಲಿನ ಮೇಲೆ ಗಂಟಿನ ರೀತಿ ಇರುತ್ತದೆ. ಅದು ಕಾಲಿನ ಗೇಣುಗಳಲ್ಲಿ ಕಂಡುಬರುತ್ತದೆ. ಹಾಗಾದ್ರೆ ಕಾಲಿನ ಗೇಣಿನ ಮೇಲೆ ಕಂಡು ಬರುವ ಗಂಟು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆಯಾ..? ಇದರಿಂದ ಏನಾದರೂ ತೊಂದರೆ ಇದೆಯಾ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..

ಕಾಲಿನ ಗೇಣಿನ ಮೇಲೆ ಕಂಡುಬರುವ ಗಂಟು, ಹೆಚ್ಚಾಗಿ ಹಿಂದಿನ ಕಾಲದವರಿಗೆ ಇರುತ್ತದೆ. ಅಥವಾ ಯಾರೂ ಚಿಕ್ಕಂದಿನಿಂದಲೂ ಚಟ್ಟೆ ಮುಟ್ಟೆ ಹಾಕಿಕೊಂಡು ನೆಲದ ಮೇಲೆ, ಚಾಪೆಯ ಮೇಲೆ ಕುಳಿತುಕೊಳ್ಳುತ್ತಾರೋ, ಅಂಥವರಿಗೆ ಹೀಗೆ ಗಂಟಿರುತ್ತದೆ. ಇದು ಆರೋಗ್ಯಕ್ಕೆ ಹಾನಿ ಮಾಡುವ ಗಂಟೇನಲ್ಲ. ಏಕೆಂದರೆ, ಕಾಲಿನ ಗೇಣಿನ ಮೇಲೆ ಇರುವ ಗಂಟಿನಲ್ಲಿ ನೋವಿರುವುದಿಲ್ಲ.

ರಕ್ತ ಸಂಚಲನ ಕಡಿಮೆಯಾದಾಗ, ಅಲ್ಲಿ ಚರ್ಮ ಗಟ್ಟಿಯಾಗುತ್ತದೆ. ಕಾಲಿನ ಗೇಣಿನಲ್ಲಾಗುವ ಗಂಟು ಕೂಡ ಅದೇ ರೀತಿ ಇರುತ್ತದೆ. ಚಟ್ಟೆಮುಟ್ಟೆ ಹಾಕಿ ಕುಳಿತಾಗ, ಅಲ್ಲಿ ರಕ್ತಸಂಚಾರ ಕಡಿಮೆಯಾಗುತ್ತದೆ. ಹಾಗಾಗಿ ಗಂಟಾಗುತ್ತದೆ. ಆದರೆ ಇದರಿಂದ ಯಾವುದೇ ತೊಂದರೆ ಇಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

About The Author