ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಕಾಳಜಿ ಇರಲಿ

Health Tips: ಖ್ಯಾತ ವೈದ್ಯರಾದ ಡಾ. ಆಂಜೀನಪ್ಪ ಅವರು ಆರೋಗ್ಯದ ಕಾಳಜಿ ಹೇಗೆ ಮಾಡಬೇಕು ಎಂಬ ಬಗ್ಗೆ, ನಿರ್ಲಕ್ಷ್ಯ ಮಾಡಿದಾಗ, ಎಷ್ಟು ಸಣ್ಣ ರೋಗ ಎಷ್ಟು ದೊಡ್ಡದಾಗಿ, ನಮ್ಮ ಆರೋಗ್ಯ ಹಾಳು ಮಾಡಬಹುದು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದೇ ರೀತಿ ಕೊರೋನಾ ಖಾಯಿಲೆಯಿಂದ ನಮಗೇ ಇನ್ನು ಮುಂದೆ ತೊಂದರೆ ಇದೆಯಾ..? ಮತ್ತೆ ಕೊರೋನಾ ಬರಬಾರದು ಅಂದ್ರೆ ನಾವು ಏನು ಮಾಡಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ.

 

ವೈದ್ಯರು ಹೇಳುವ ಪ್ರಕಾರ, ಈ ಬಾರಿ ಬಂದಿರುವ ಕೊರೋನಾ ಜೆಎನ್1 ತಳಿ ಅಷ್ಟು ದೊಡ್ಡ ಮಟ್ಟದ ತೊಂದರೆ ಕೊಡುವುದಿಲ್ಲ. ಆದರೆ ನಮ್ಮ ಆರೋಗ್ಯ ಕಾಳಜಿಯನ್ನು ನಾವು ಮಾಡಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡಬೇಕು. ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದಲ್ಲಿ, ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು ಅಂತಾರೆ ವೈದ್ಯರು.

ಇದು ಒಬ್ಬರಿಂದ ಒಬ್ಬರಿಗೆ ಹರಡುವ ಖಾಯಿಲೆಯಾದ ಕಾರಣ, ನಾವು ಆದಷ್ಟು ಆರೋಗ್ಯ ಕಾಳಜಿ ವಹಿಸುವುದು ತುಂಬಾ ಮುಖ್ಯವಾಗಿದೆ. ಗುಂಪಿನಲ್ಲಿ ಹೋಗುವಾಗ, ಮಾಸ್ಕ್ ಧರಿಸಿ ಓಡಾಡಿ. ಹೊರಗಡೆ ಹೋಗಿ ಬಂದ ಬಳಿಕ, ಸ್ವಚ್ಛವಾಗಿ ಕೈ ಕಾಲು ತೊಳೆಯಿರಿ. ಸ್ನಾನ ಮಾಡಿದ್ರೆ ಇನ್ನೂ ಉತ್ತಮ. ಏಕೆಂದರೆ, ಅದೇ ಕೈಯಿಂದ ನೀವು ನಿಮ್ಮ ಮನೆಯಲ್ಲಿರುವ ಜನರನ್ನು ಅಥವಾ ಮಕ್ಕಳನ್ನು ಮುಟ್ಟಿದರೆ, ಅವರಿಗೂ ಕೊರೋನಾ ಬರಬಹುದು. ಹಾಗಾಗಿ ಹೊರಗಡೆ ಹೋಗಿ ಬಂದ ಬಳಿಕ, ಸ್ವಚ್ಛವಾಗಿ ಕೈ ಕಾಲು ತೊಳೆಯಿರಿ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author