Health Tips: ವೈದ್ಯರು ಅಥವಾ ಮನೆಯಲ್ಲಿರುವ ಹಿರಿಯರು, ಚೆನ್ನಾಗಿ ನೀರು ಕುಡಿಯಬೇಕು. ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಬೇಕು ಅಂತಾ ಹೇಳುವುದನ್ನು ನೀವು ಕೇಳಿರುತ್ತೀರಿ. ಹಾಗಾದ್ರೆ ಯಾಕೆ ನಾವು ಪ್ರತಿದಿನ ಚೆನ್ನಾಗಿ ನೀರು ಕುಡಿಯಬೇಕು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಏನಾಗತ್ತೆ ಅನ್ನೋ ಬಗ್ಗೆ ವೈದ್ಯರು ವಿವರಿಸಿದ್ದಾರೆ.
ವೈದ್ಯರಾದ ಡಾ.ಸಿದ್ಧಾರ್ಥ ಗೋಸಾವಿ ಅವರು ಈ ಬಗ್ಗೆ ವಿವರಿಸಿದ್ದು, ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಕಾರ್ಡಿಯಾಕ್ ಅರೆಸ್ಟ್ ಆಗುತ್ತೆ ಅಂತಾರೆ ವೈದ್ಯರು. ಹಾಗಾಗಿ ಆದಷ್ಟು ನೀರು, ಮಜ್ಜಿಗೆ, ಎಳನೀರಿನ ಸೇವನೆ ಮಾಡಬೇಕು. ನಿಮಗೆ ಹೆಚ್ಚು ನೀರಿನ ಸೇವನೆ ಮಾಡಲಾಗದಿದ್ದಲ್ಲಿ, ನೀರಿನ ಅಂಶ ಹೆಚ್ಚಿರುವ ಹಣ್ಣು, ತರಕಾರಿ ಸೇವನೆ ಮಾಡಬೇಕು. ಸೌತೇಕಾಯಿ, ಮೂಲಂಗಿ, ಪಾಲಕ್ ಸೇರಿ, ಹಲವು ತರಕಾರಿಗಳು ನಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಿಸಲು ಸಹಕಾರಿಯಾಗಿರುತ್ತದೆ.
ಇನ್ನು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದ್ದಲ್ಲಿ, ಬಿಪಿ ಕಡಿಮೆ ಆಗಿ, ಕಾರ್ಡಿಯಾಕ್ ಅರೆಸ್ಟ್ ಆಗುವ ಸಂಭವವಿರುತ್ತದೆ. ಹಾಗಾಗಿ ಆದಷ್ಟು ನೀರು ಕುಡಿಯಬೇಕು, ಹಣ್ಣು, ತರಕಾರಿ ಸೇವನೆ ಮಾಡಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




