Recipe: ಚಳಿಗಾಲ ಶುರುವಾಗಿದೆ. ಸಂಜೆ ಆಗ್ತಿದ್ದಂಗೆ ಏನಾದರೂ ಬಿಸಿ ಬಿಸಿ ಪದಾರ್ಥ ತಿನ್ನಬೇಕು ಅಂತಾ ಮನಸ್ಸಾಗುತ್ತದೆ. ಆದರೆ ಈ ಸಮಯದಲ್ಲಿ ನಾವು ಎಷ್ಟು ಆರೋಗ್ಯಕರ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುತ್ತೆವೋ ಅಷ್ಟು ಉತ್ತಮ. ಹಾಗಾಗಿ ನಾವು ಚಳಿಗಾಲದ ಸ್ಪೆಶಲ್ ಆಗಿ, ಬಿಸಿ ಬಿಸಿ ಟೊಮೆಟೋ ಸೂಪ್ ರೆಸಿಪಿ ಹೇಳಲಿದ್ದೇವೆ.
5ರಿಂದ 6 ಟೊಮೆಟೋ ಹಣ್ಣಿಗೆ ಗೀಟು ಹಾಕಿ, ನೀರಿನಲ್ಲಿ ಕುದಿಸಿ, ಸಿಪ್ಪೆ ತೆಗೆಯಿರಿ. ಈಗ ಒಂದು ಪ್ಯಾನ್ಗೆ ಎಣ್ಣೆ ಒಂದು ಈರುಳ್ಳಿ, 4ರಿಂದ 5 ಎಸಳು ಬೆಳ್ಳುಳ್ಳಿ, ನಾಲ್ಕೈದು ಕಾಳುಮೆಣಸು, ಚಕ್ಕೆ, ಲವಂಗ ಹಾಕಿ ಚೆನ್ನನಾಗಿ ಹುರಿಯಿರಿ. ಈ ಮಿಶ್ರಣ ತಣ್ಣಗಾದ ಬಳಿಕ, ಮಿಕ್ಸಿ ಜಾರ್ಗೆ ಬೇಯಿಸಿದ ಟೊಮೆಟೋ ಮತ್ತು ಈ ಮಿಶ್ರಣ ಹಾಕಿ, ರುಬ್ಬಿ ಪೇಸ್ಟ್ ತಯಾರಿಸಿಕೊಳ್ಳಿ.
ಇದನ್ನು ಮತ್ತೆ ಪ್ಯಾನ್ಗೆ ಹಾಕಿ, ಅವಶ್ಯಕತೆ ಇದ್ದಷ್ಟು ನೀರು, ಬೆಲ್ಲ, ಉಪ್ಪು, ಕೊಂಚ ಕಸೂರಿ ಮೇಥಿ ಜೊತೆ ಕುದಿಸಿ. ಬಳಿಕ ಬೆಳ್ಳುಳ್ಳಿ ಎಸಳನ್ನು ಸಣ್ಣಗೆ ಕತ್ತರಿಸಿ, ಅದನ್ನು ಹುರಿಯಿರಿ. ಹುರಿದ ಬೆಳ್ಳುಳ್ಳಿ, ಬೆಣ್ಣೆಯನ್ನು ಟೊಮೆಟೋ ಸೂಪ್ಗೆ ಸೇರಿಸಿದ್ರೆ ರೆಸಿಪಿ ರೆಡಿ.