Health Tips: ಕೆಲವರು ತಮ್ಮ ಗುಪ್ತಾಂಗದಲ್ಲಿ ಯಾವುದೇ ನೋವಿದ್ದರೂ ಅದನ್ನು ಯಾರಿಗೂ ಹೇಳುವುದಿಲ್ಲ. ಏಕೆಂದರೆ, ಆ ಬಗ್ಗೆ ಅವರಿಗೆ ಮುಜುಗರವಿರುತ್ತದೆ. ಆದರೆ ಅದೇ ನೋವು ಮುಂದೆ ದೊಡ್ಡ ನೋವಾಗಿ ಪರಿಣಮಿಸಿ, ಜೀವಕ್ಕೆ ಕುತ್ತು ತಂದಾಗ, ಅದರ ಸೂಕ್ಷ್ಮತೆ ಅರ್ಥವಾಗುತ್ತದೆ. ಹಾಗಾಗಿ ಇಂಥ ನೋವುಗಳ ಬಗ್ಗೆ ಬೇಗ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯುವುದು ಉತ್ತಮ. ಇನ್ನು ಸ್ತನದಲ್ಲಿ ಆಗುವ ಗಡ್ಡೆಯ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಸ್ತನದಲ್ಲಿ ಆಗುವ ಗಡ್ಡೆಯಲ್ಲಿ ಎರಡು ವಿಧವಿರುತ್ತದೆ. ಈ ಗಡ್ಡೆಯನ್ನು ಟ್ಯೂಮರ್ ಎನ್ನುತ್ತಾರೆ. ಬಿನೈನ್ ಮತ್ತು ಮೆಲಿಗ್ನೇಟ್ ಎಂದು ಅದನ್ನು ವಿಂಗಡಿಸಲಾಗಿದೆ. ಬಿನೈನ್ ಟ್ಯೂಮರ್ ಅಂದ್ರೆ ಕ್ಯಾನ್ಸರ್ ಇಲ್ಲದ ಗಡ್ಡೆ. ಮೆಲಿಗ್ನೇಟ್ ಟ್ಯೂಮರ್ ಅಂದ್ರೆ ಕ್ಯಾನ್ಸರ್ ಗಡ್ಡೆಗಳು. ಮಾಂಸ, ಮೂಳೆ, ಚರ್ಮ ಸೇರಿ ಬೇರೆ ಬೇರೆ ಅಂಗಗಳಲ್ಲಿ ಟ್ಯೂಮರ್ ಬರಬಹುದು.
ಆದರೆ ಸ್ತನದಲ್ಲಿ ಯಾವುದೇ ರೀತಿಯ ಗಂಟು ಕಂಡುಬಂದರೂ, ಮುಜುಗರವಿಲ್ಲದೇ, ಅದನ್ನು ವೈದ್ಯರ ಬಳಿ ಹೇಳಿ, ಪರೀಕ್ಷಿಸಿಕೊಳ್ಳುವುದು ಉತ್ತಮ ಅಂತಾರೆ ವೈದ್ಯರು. ಇನ್ನು ಮುಟ್ಟಿನ ಸಮಯದಲ್ಲಿ ಕೆಲವು ಹೆಣ್ಣು ಮಕ್ಕಳ ಸ್ತನದಲ್ಲಿ ನೋವಾಗುತ್ತದೆ. ಅಲ್ಲಿ ಗಟ್ಟಿಯಾಗುತ್ತದೆ. ಇದು ಯಾವ ಗಂಟೂ ಅಲ್ಲ. ಬದಲಾಗಿ ಮುಟ್ಟಿನ ಸಮಯದಲ್ಲಿ ಸ್ತನದಲ್ಲಿರುವ ಕೆಲವು ಗ್ರಂಥಿಗಳೇ ದೊಡ್ಡದಾಗಿ, ಗಟ್ಟಿಯಾಗುತ್ತದೆ ಅಂತಾರೆ ವೈದ್ಯರು.
ಇದಕ್ಕೆಲ್ಲ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಬದಲಾಗಿ ಅದಕ್ಕಾಗಿ ವೈದ್ಯರು ಔಷಧಿ ನೀಡುತ್ತಾರೆ. ಇನ್ನು ಮಕ್ಕಳು ಹೆರುವ ಸಮಯದಲ್ಲಿ ಅಥವಾ ಹೆತ್ತ ಬಳಿಕ, ಕೆಲವರಿಗೆ ಸ್ತನದಲ್ಲಿ ಗಂಟಾಗುತ್ತದೆ. ಇದು ಕ್ಯಾನ್ಸರ್ ಗಂಟುಗಳಲ್ಲ. ಬದಲಾಗಿ ನಿಮ್ಮ ಸ್ತನದ ಬಳಿ ಗಂಟಾಗಿ, ಅಲ್ಲಿ ತುಂಬಾ ನೋವಾಗುತ್ತಿದ್ದರೆ, ಅಂಥ ಗಂಟಿನ ಪರೀಕ್ಷೆಯನ್ನು ನೀವು ಖಂಡಿತವಾಗಿಯೂ ಮಾಡಲೇಬೇಕು. ಇದು ಕ್ಯಾನ್ಸರ್ ಗಡ್ಡೆಯಾಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..




