Menstrual Cup ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ..?

Health Tips: ಮೊದಲೆಲ್ಲ ಹೆಣ್ಣು ಮಕ್ಕಳು ಋತುಸ್ರಾವವಾದಾಗ, ಬಟ್ಟೆ ಬಳಸುತ್ತಿದ್ದರು. ಬಳಿಕ ಪ್ಯಾಡ್ ಬಳಸಲು ಶುರು ಮಾಡಿದರೂ, ಇದೀಗ ಹಲವು ಹೆಣ್ಣು ಮಕ್ಕಳು ಮೆನ್‌ಸ್ಟ್ರುವಲ್ ಕಪ್ ಬಳಸಲು ಶುರು ಮಾಡಿದ್ದಾರೆ. ಹಾಗಾದ್ರೆ ಈ ಮೆನ್‌ಸ್ಟ್ರುವಲ್ ಕಪ್ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ..

ವೈದ್ಯೆ ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದಾರೆ. ಒಂದು ಮೆನ್ಸ್ಟ್ರುವಲ್ ಕಪ್‌ನ್ನು 12 ಗಂಟೆ ಬಳಸಬಹುದು. ಬಳಿಕ ಅದನ್ನು ತೊಳೆದು ಇನ್ನೊಂಂದು ಕಪ್ ಬಳಸಬಹುದು. ಇಂಥ ಕಪ್‌ಗಳನ್ನು ಹೆಚ್ಚು ಸುವಾಸನೆ ಇಲ್ಲದ ಸೊಪ್ ಬಳಸಿ, ತೊಳೆದು ಕಾಟನ್ ಬಟ್ಟೆಯಿಂದ ಒರೆಸಿ, ಗಾಳಿಯಾಡುವ ಕವರ್‌ನಲ್ಲಿ ಇಡಬೇಕು.

ಗಟ್ಟಿ ಮುಚ್ಚಳವಿರುವ ಬಾಕ್ಸ್‌ನಲ್ಲಿ ನೀವು ಈ ಕಪ್ಸ್ ಇಟ್ಟರೆ, ಅದರಿಂದ ಸಮಸ್ಯೆಯಾಗುತ್ತದೆ. ಆ ಕಪ್ ಬ್ರೇಕ್ ಆಗು ಚಾನ್ಸ್ ಇರುತ್ತದೆ. ಹಾಗಾಗಿ ಗಾಳಿಯಾಡುವ ಬ್ಯಾಗ್‌ನಲ್ಲೇ ನೀವು ಇದನ್ನು ಹಾಕಬಹುದು. ಇನ್ನು ಇದನ್ನು ಕ್ಲೀನ್ ಮಾಡಿದ ಬಳಿಕ, ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ಅದ್ದಿ ಇಟ್ಟರೆ, ಮೆನ್್‌ಸ್ಟ್ರುವಲ್ ಕಪ್ ಸ್ವಚ್ಛವಾಗಿರುತ್ತದೆ.

ವೈದ್ಯರು ಹೇಳುವ ಪ್ರಕಾರ ನೀವು 2ರಿಂದ 3 ಮೆನ್‌ಸ್ಟ್ರುವಲ್ ಕಪ್ ಇಟ್ಟುಕೊಳ್ಳಬೇಕು. ಇನ್ನು ಇದನ್ನು ಬಳಸುವುದರಿಂದ ಆಗುವ ಲಾಭವೇನು ಎಂದರೆ, ಇದು ಸರಿಯಾಗಿ ಬಳಸಿದಾಗ, ನಿಮಗೆ ಲಿಕೇಜ್ ಪ್ರಾಬ್ಲಮ್ ಆಗುವುದಿಲ್ಲ. ಇದನ್ನು ಧರಿಸಿ, ಸ್ವಿಮಿಂಗ್, ರನ್ನಿಂಗ್ ಸೇರಿ ಹಲವು ಆ್ಯಕ್ಟಿವಿಟೀಸ್ ನೀವು ಮಾಡಬಹುದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author