Health Tips: ಡಯಟ್ ಮಾಡುವ ಹಲವರಿಗೆ ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎಂಬ ಅನಿಸಿಕೆ ಇರುತ್ತದೆ. ಹಾಗಾದ್ರೆ ಅನ್ನ ತಿನ್ನುವುದರಿಂದ ನಿಜಕ್ಕೂ ತೂಕ ಹೆಚ್ಚಾಗುತ್ತದೆಯಾ..? ಅಥವಾ ಇದು ಭ್ರಮೆಯಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..
ವೈದ್ಯರಾದ ಪವನ್ ಕುಮಾರ್ ಈ ಬಗ್ಗೆ ವಿವರಿಸಿದ್ದಾರೆ. ಅನ್ನ ತಿನ್ನುವುದು ಕೆಟ್ಟದ್ದು ಅಂತಾ ಬಿಂಬಿಸುವುದು ತಪ್ಪು ಅಂತಾರೆ ವೈದ್ಯರು. ಏಕೆಂದರೆ ಅನ್ನ ದೇಹಕ್ಕೆ ಉತ್ತಮ. ಎಷ್ಟು ಅನ್ನ ತಿನ್ನಬೇಕೋ, ಅಷ್ಟು ಅನ್ನ ತಿಂದರೆ, ದೇಹದ ತೂಕ ಹೆಚ್ಚುವುದಿಲ್ಲ. ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್, ಫೈಬರ್ ಇರುತ್ತದೆ. ನಮ್ಮ ದೇಹಕ್ಕೆ ಇನ್ಸ್ಟಂಟ್ ಎನರ್ಜಿ ಬೇಕಾಗಿದ್ದಲ್ಲಿ, ನಾವು ಅನ್ನದ ಸೇವನೆ ಮಾಡಿದ್ದಲ್ಲಿ, ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. ಹಾಗಾಗಿ ಅನ್ನದ ಸೇವನೆ ಆರೋಗ್ಯಕ್ಕೆ ಒಳ್ಳೆಯದು.
ಆದರೆ ದೇಹಕ್ಕೆ ಎಷ್ಟು ಅನ್ನದ ಅಗತ್ಯವಿದೆಯೋ, ಅಷ್ಟೇ ಅನ್ನ ತಿನ್ನಬೇಕು ಅಂತಾರೆ ವೈದ್ಯರು. ಇನ್ನು ಅನ್ನದ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ಇನ್ನು ನಾವು ಸರಿಯಾಗಿ ಮಲವಿಸರ್ಜನೆ ಮಾಡಿದಾಗ, ನಮ್ಮ ದೇಹದ ತೂಕ ಸರಿಯಾಗಿ ಇರುತ್ತದೆ. ಆದರೆ ಅನ್ನದ ಸೇವನೆಯ ಒಂದೇ ಒಂದು ಸಮಸ್ಯೆ ಅಂದ್ರೆ, ಅನ್ನ ಬೇಗ ಜೀರ್ಣವಾಗುತ್ತದೆ.
ಅನ್ನ ಊಟ ಮಾಡಿ 2ರಿಂದ 3ಗಂಟೆಯೊಳಗೆ ಮತ್ತೆ ಹಸಿವಾಗುತ್ತದೆ. ಅವಾಗ ಮತ್ತೇನಾದರೂ ತಿನ್ನಬೇಕು ಎನ್ನಿಸುತ್ತದೆ. ಅಥವಾ ಈ ಕಾರಣಕ್ಕೆ ಹೆಚ್ಚು ಅನ್ನವನ್ನ ತಿನ್ನುತ್ತೇವೆ. ಆಗ ಸಮಸ್ಯೆ ಉದ್ಭವಿಸುತ್ತದೆ. ಹಾಗಾಗಿ ದೇಹಕ್ಕೆ ಎಷ್ಟು ಅಗತ್ಯವೋ, ಅಷ್ಟೇ ಅನ್ನ ಊಟ ಮಾಡಿದರೆ ಏನೂ ಸಮಸ್ಯೆ ಇಲ್ಲ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.




