Health Tips: ಡಾ.ರವಿರಾಜ್ ಅವರು ಆಯುರ್ವೇದಿಕ್ ತಜ್ಞರಾಗಿದ್ದು, ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವಾರು ಮಾಹಿತಿ ನೀಡಿದ್ದಾರೆ. ಅದರಲ್ಲೂ ಸೋರಿಯಾಸಿಸ್ ಬಂದರೆ ಏನೇನು ಲಕ್ಷಣವಿರುತ್ತದೆ. ಈ ವೇಳೆ ನಾವು ಯಾವ ರೀತಿಯ ಸ್ಕಿನ್ ಕೇರ್ ಮಾಡಬೇಕು. ಸೋರಿಯಾಸಿಸ್ ಬಂದಾಗ, ಅಂಥವರು ಹೇಗೆ ಡಿಪ್ರೆಶನ್ಗೆ ಹೋಗುವುದನ್ನು ತಪ್ಪಿಸಬೇಕು ಅನ್ನೋ ಬಗ್ಗೆ ಹೇಳಿದ್ದರು. ಇಂದು ವೈದ್ಯರು, ಸೋರಿಯಾಸಿಸ್ ಬಂದಾಗ, ಹೇಗೆ ಪಥ್ಯ ಮಾಡಬೇಕು ಅಂತಾ ತಿಳಿಸಿದ್ದಾರೆ.
ಸೋರಿಯಾಸಿಸ್ ಬಂದಾಗ, ಎಣ್ಣೆ ಪದಾರ್ಥ, ಕರಿದ ತಿಂಡಿಯನ್ನು, ಬೀದಿ ಬದಿ ತಿಂಡಿಯನ್ನು, ಬೇಕರಿ ತಿಂಡಿಯನ್ನು ಸೇವಿಸಲೇಬಾರದು. ಹೊಟ್ಟೆ ಹಸಿವಾದಾಗ ಮಾತ್ರ ಆಹಾರ ಸೇವಿಸಬೇಕು. ಹಸಿವಾಗದೇ ಇದ್ದಾಗ ಆಹಾರ ಸೇವಿಸಬಾರದು. ಅಲ್ಲದೇ, ಸರಿಯಾದ ಸಮಯಕ್ಕೆ ನಿದ್ರಿಸಿ, ಏಳಬೇಕು. ಸರಿಯಾದ ಸಮಯಕ್ಕೆ ಆರೋಗ್ಯಕರವಾದ ಆಹಾರ ಸೇವಿಸಬೇಕು.
ಇನ್ನು ಈ ರೋಗ ಬಂದಾಗ, ಮದ್ಯಪಾನ, ಧೂಮಪಾನ, ಮಾಂಸಾಹಾರ ಸೇವನೆ ಮಾಡಬಾರದು. ಆಲೂಗಡ್ಡೆ, ಬದನೇಕಾಯಿ, ಚೀಸ್, ಪನೀರ್, ಹಾಲು, ಮೊಸರು, ಹುಳಿ ಹಣ್ಣುಗಳನ್ನು ಸೇವನೆ ಮಾಡಬಾರದು. ಪದೇ ಪದೇ ಆಹಾರ ಸೇವಿಸಬಾರದು. ಹಸಿವಾದಾಗ ಮಾತ್ರ ಆಹಾರ ಸೇವಿಸಬೇಕು. ಕೆಲವರಿಗೆ ಕಡಲೆ, ಹಸಿಮೆಣಸಿನಕಾಯಿ, ಟೊಮೆಟೋ ಸೇವನೆ ಹೆಚ್ಚಾದಾಗ, ಈ ಖಾಯಿಲೆ ಉಲ್ಬಣಿಸುತ್ತದೆ. ಹಾಗಾಗಿ ಈ ಆಹಾರ ಸೇವನೆಯನ್ನು ಮಾಡಬೇಡಿ.
ಇನ್ನು ವೈದ್ಯರು ಹೇಳುವ ಪ್ರಕಾರ, ಸೋರಿಯಾಸಿಸ್ ಬಂತು ಎಂದು ಗೊತ್ತಾದ ತಕ್ಷಣವೇ, ನಾವು ಎಚ್ಚೆತ್ತುಕೊಂಡು ಪಥ್ಯ ಮಾಡಿ, ಚಿಕಿತ್ಸೆ ಪಡೆದುಕೊಳ್ಳಬೇಕು. ಏಕೆಂದರೆ ರೋಗ ಹೆಚ್ಚಾಗುತ್ತ ಹೋದರೆ, ಮತ್ತೆ ಅದನ್ನು ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..




