Spiritual: ಚಾಣಕ್ಯರು ನಮಗೆ ಹಲವು ಜೀವನ ಪಾಠ ಹೇಳಿದ್ದಾರೆ. ಶ್ರೀಮಂತರಾಗುವುದು ಹೇಗೆ..? ಹಣವನ್ನು ಉಳಿತಾಯ ಮಾಡುವುದು ಹೇಗೆ..? ನಾವು ಎಂಥ ಜಾಗದಲ್ಲಿ ಇರಬಾರದು..? ಜೀವನ ಸಂಗಾತಿಯನ್ನು ಹೇಗೆ ಆರಿಸಬೇಕು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಚಾಣಕ್ಯರು ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ. ಅದೇ ರೀತಿ ಮನುಷ್ಯ ತನ್ನ ಜೀವನದಲ್ಲಿ ಅಪ್ಪಿತಪ್ಪಿಯೂ ಕೆಲ ಕೆಲಸಗಳನ್ನು ಮಾಡಬಾರದು ಅಂತಾ ಹೇಳಲಾಗುತ್ತದೆ.
ಮೊದಲನೇಯ ಕೆಲಸ, ನೇರವಾಗಿ ಮಾತನಾಡಿಬಿಡಬಾರದು. ಯೋಚಿಸಿ ಮಾತನಾಡಬೇಕು. ನಾವು ಏನಾದರೂ ಮಾತನಾಡುವಾಗ, ತಾಳ್ಮೆಗೆಟ್ಟು ಎದುರುತ್ತರ ನೀಡಿಬಿಡುತ್ತೇವೆ. ಆದರೆ ಹಾಗೆ ಮಾಡುವುದು ತಪ್ಪು. ನಾವು ಏನೇ ಮಾತನಾಡುವುದಿದ್ದರೂ ಯೋಚಿಸಿ ಮಾತನಾಡಬೇಕು. ಆಗಲೇ ನಾವು ಜೀವನದಲ್ಲಿ ಉದ್ಧಾರವಾಗಲು ಸಾಧ್ಯವಾಗೋದು.
ಎರಡನೇಯ ಕೆಲಸ, ಥಟ್ಟನೆ ಸಿಟ್ಟಿಗೇಳಬಾರದು. ತಾಳ್ಮೆಯಿಂದ ಇರಬೇಕು. ಕೆಲವೊಂದು ಘಟನೆಗಳು ನಮಗೆ ಸಿಟ್ಟು ತರಿಸುತ್ತದೆ. ಎದುರಿಗೆ ಇರುವವರಿಗೆ ಸರಿಯಾಗಿ ಬೈದುಬಿಡಬೇಕು ಎಂದ ಪರಿಸ್ಥಿತಿ ಇರುತ್ತದೆ. ಆದರೆ ನಾವು ಯಾವುದೇ ಕಾರಣಕ್ಕೂ ತಾಳ್ಮೆಗೆಡದೇ, ಮೌನವಾಗಿರಬೇಕು. ಬಳಿಕ ನೀವು ಆ ಕ್ಷಣದ ಬಗ್ಗೆ ಯೋಚಿಸಿದಾಗ, ನೀವು ತಾಳ್ಮೆಯಿಂದ ಇದ್ದದ್ದು ಎಷ್ಟು ಒಳ್ಳೆಯದಾಯ್ತು ಅನ್ನೋದು ಗೊತ್ತಾಗುತ್ತದೆ.
ಮೂರನೇಯ ಕೆಲಸ, ನಮಗೆ ಗೌರವ ಸಿಗದ ಜಾಗದಲ್ಲಿ ನಾವು ಇರಬಾರದು. ನೀವು ಯಾವ ಜಾಗದಲ್ಲಿ ಇದ್ದೀರೋ, ಆ ಜಾಗದಲ್ಲಿ ನಿಮಗೆ ಗೌರವ ಸಿಗುತ್ತಿಲ್ಲ. ನೀವು ಎಷ್ಟೇ ಕೆಲಸ ಮಾಡಿದರೂ, ಎಷ್ಟೇ ದುಡಿದರೂ, ಎಷ್ಟೇ ತಾಳ್ಮೆಯಿಂದ ಇದ್ದರೂ, ನಿಮಗೆ ಆ ಜಾಗದಲ್ಲಿ ಗೌರವ ಸಿಗುತ್ತಿಲ್ಲವೆಂದಲ್ಲಿ, ಅಂಥ ಜಾಗದಿಂದ ನೀವು ದೂರವಿರುವುದು ಉತ್ತಮ.
ನಾಲ್ಕನೇಯ ಕೆಲಸ, ಯಾವುದಾದರೂ ಕೆಲಸ ಮಾಡಬೇಕು ಎಂದು ಗುರಿ ಹೊಂದಿದರೆ, ಅದನ್ನು ಅರ್ಧಕ್ಕೆ ನಿಲ್ಲಿಸಬಾರದು. ಏಕೆಂದರೆ ನೀವು ಮಾಡುವ ಕೆಲಸವನ್ನು ತಾಳ್ಮೆಯಿಂದ, ಏಕಾಗೃತೆಯಿಂದ ಮಾಡಿದ್ದಲ್ಲಿ, ಆ ಕೆಲಸದಲ್ಲಿ ನಮಗೆ ಯಶಸ್ಸು ಸಿಕ್ಕೇ ಸಿಗುತ್ತದೆ.
ಐದನೇಯ ಕೆಲಸ, ಬೇರೆಯವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಬಿಡಬೇಕು. ಮನುಷ್ಯ ಯಾವಾಗ ಸದಾ ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡುತ್ತಾನೋ, ಆಗಲೇ ಅವನ ಅವನತಿ ಶುರುವಾಗುತ್ತದೆ. ಹಾಗಾಗಿ ನಾವು ಇನ್ನೊಬ್ಬರ ಬಗ್ಗೆ ಒಳ್ಳೆಯದನ್ನು ಮಾತನಾಡಲಾಗದಿದ್ದರೂ, ಕೆಟ್ಟದ್ದನ್ನಂತೂ ಮಾತನಾಡಬಾರದು ಅಂತಾರೆ ಚಾಣಕ್ಯರು.
ಮನೆಯಲ್ಲಿ ಈ ವಸ್ತುಗಳಿದ್ದರೆ ಈಗಲೇ ತೆಗೆದು ಬಿಸಾಕಿ, ಇಲ್ಲದಿದ್ದರೆ ನೆಮ್ಮದಿ ಹಾಳಾಗೋದು ಗ್ಯಾರಂಟಿ..