Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್ಗೆ ಕರೆದೊಯ್ಯುತ್ತದೆ. ಅಲ್ಲದೇ, ಇಂಥವರಿಗೆ ಮಕ್ಕಳಾಗುವುದು ಕೂಡ ಕಷ್ಟವೇ. ಇದಕ್ಕೆ ಕಾರಣವೇನು ಅಂತಾ ಡಾ.ಚಂದ್ರಿಕಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಯಾಕೆ ಪಿಸಿಓಎಸ್ ಇದ್ದವರು ಮಕ್ಕಳು ಪಡೆಯುವುದು ಕಷ್ಟ ಅಂದ್ರೆ, ಈ ಸಮಸ್ಯೆ ಇರುವವರ ಹೊಟ್ಟೆಯಲ್ಲಿ ಮೊಟ್ಟೆ ನಿಲ್ಲುವುದು ಕಷ್ಟ. ಇಂಥವರ ಹೊಟ್ಟೆಯಲ್ಲಿ ಮೊಟ್ಟೆ ಉತ್ಪತ್ತಿಯಾಗುವುದಿಲ್ಲ. ಗಂಡಿನ ವೀರ್ಯ ಹೆಣ್ಣಿನ ದೇಹ ಸೇರಿ, ಅಲ್ಲಿ ಮೊಟ್ಟೆ ಉತ್ಪತ್ತಿಯಾದ ಬಳಿಕವೇ ಮಕ್ಕಳಾಗುತ್ತದೆ. ಆದರೆ ಪಿಸಿಓಎಸ್ ಸಮಸ್ಯೆ ಇದ್ದರೆ, ಮೊಟ್ಟೆಯಾಗುವುದನ್ನು ತಡೆಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರಿಗೆ ಮಕ್ಕಳಾಗುವುದು ಕಷ್ಟ.
ಅಲ್ಲದೇ, ಪಿಸಿಓಎಸ್ ಇದ್ದವರು ಗರ್ಭಿಣಿಯಾದರೂ ಅವರ ಹೊಟ್ಟೆಯಲ್ಲಿರುವ ಮೊಟ್ಟೆಯ ಕ್ವಾಲಿಟಿ ಉತ್ತಮವಾಗಿರುವುದಿಲ್ಲ. ಹಾಗಾಗಿ ಇಂಥ ಸಂದರ್ಭದಲ್ಲಿ ತಾಯಿಯಾಗುವವರು, ತಮ್ಮೆಲ್ಲ ಸಮಯವನ್ನು ಮಕ್ಕಳಿಗಾಗಿ ಮೀಸಲಿಟ್ಟು, ಜಾಗೃತೆಯಿಂದ ಮಗುವಿನ ಬೆಳವಣಿಗೆಯ ಕಡೆ ಗಮನ ಹರಿಸಬೇಕು. ಯಾಕಂದ್ರೆ ಇಂಥ ಸಂದರ್ಭದಲ್ಲಿ ಅಬಾರ್ಷನ್ ರಿಸ್ಕ್ ಇರುತ್ತದೆ. ಹಾಗಾಗಿ ಪಿಸಿಓಎಸ್ ಇರುವವರು ಮಕ್ಕಳನ್ನು ಪಡೆಯುವುದು ಕಷ್ಟ ಎನ್ನುತ್ತಾರೆ ವೈದ್ಯರು. ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..