Saturday, June 21, 2025

Latest Posts

ಪಿಸಿಓಎಸ್ ಇರುವವರು ಈ 5 ಕೆಲಸಗಳನ್ನು ಮಾಡಬಾರದು..

- Advertisement -

Health Tips: ಪಿಸಿಓಎಸ್ ಅನ್ನೋದು ಇಂದಿನ ಹೆಣ್ಣು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಖಾಯಿಲೆ. ಜನ ಇದನ್ನು ಖಾಯಿಲೆ ಎಂದರೆ ಒಪ್ಪುವುದಿಲ್ಲ. ಆದರೆ ಈ ಸಮಸ್ಯೆಯ ಬಗ್ಗೆ ನೀವು ಹೆಚ್ಚು ಗಮನ ವಹಿಸದೇ, ನಿರ್ಲಕ್ಷಿಸಿದರೆ, ಇದು ನಿಮ್ಮನ್ನು ಡಿಪ್ರೆಶನ್‌ಗೆ ಕರೆದೊಯ್ಯುತ್ತದೆ. ಹಾಗಾಗಿ ಪಿಸಿಓಎಸ್ ಇದ್ದವರು ಯಾವ 5 ಕೆಲಸ ಮಾಡಬಾರದು ಅಂತಾ ವೈದ್ಯೆಯಾದ ಡಾ.ಚಂದ್ರಿಕಾ ವಿವರಿಸಿದ್ದಾರೆ. ಆ 5 ಕೆಲಸ ಯಾವುದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ಕೆಲ ಕೆಟ್ಟ ಜೀವನಶೈಲಿ ಅನುಸರಿಸಬೇಡಿ. ಕೂತಲ್ಲೇ ಕುರುವುದು. ದೇಹವನ್ನು ದಂಡಿಸದೇ, ಸುಮ್ಮನೆ ಕುಳಿತುಕೊಳ್ಳುವುದು, ಬರೀ ಮೊಬೈಲ್ ನೋಡುವುದು. ಆಲಸ್ಯದ ಜೀವನ ಮಾಡುವುದೇ, ಕೆಟ್ಟ ಜೀವನಶೈಲಿ. ಇಂಥ ಜೀವನಶೈಲಿಯನ್ನು ಅನುಸರಿಸದೇ, ಮನೆಗೆಲಸ ಮಾಡಬೇಕು. ಅಥವಾ ವ್ಯಾಯಾಮ ಮಾಡಬೇಕು.

ಹೊತ್ತಿಗೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸಿ. ಊಟ ತಿಂಡಿಯ ವಿಷಯದಲ್ಲಿ ನೀವು ಎಷ್ಟು ಕಾಳಜಿ ವಹಿಸುತ್ತೀರೋ ಅಷ್ಟು ಉತ್ತಮ. ಹೊತ್ತಿಗೆ ಸರಿಯಾಗಿ ತಿಂಡಿ, ಊಟ ಮಾಡಬೇಕು. ಬೀದಿ ಬದಿ ತಿಂಡಿ, ಬೇಕರಿ ತಿನಿಸು, ಸಕ್ಕರೆ ಪದಾರ್ಥ, ಕರಿದ ಪದಾರ್ಥಗಳು, ಮಸಾಲೆಭರಿತ ಪದಾರ್ಥ, ಹೆಚ್ಚು ಮಾಂಸಾಹಾರದ ಸೇವನೆ ಮಾಡಿದ್ದಲ್ಲಿ, ಪಿಸಿಓಎಸ್‌ ಸಮಸ್ಯೆ ಹೆಚ್ಚಾಗುತ್ತದೆ.

ಸರಿಯಾದ ಸಮಯಕ್ಕೆ ನಿದ್ರಿಸಬೇಕು. ರಾತ್ರಿ ಲೇಟಾಗಿ ಮಲಗುವುದು, ಮಲಗುವ ತನಕವೂ ಮೊಬೈಲ್ ನೋಡುವುದು. ಸರಿಯಾದ ಸಮಯಕ್ಕೆ ನಿದ್ರಿಸದೇ. ಸರಿಯಾದ ಸಮಯಕ್ಕೆ ಏಳದೇ, ಮನಬಂದಂತೆ ನಿದ್ರಿಸಿದರೆ, ಪಿಸಿಓಎಸ್ ಸಮಸ್ಯೆ ಹೆಚ್ಚಾಗುತ್ತದೆ. ಏಕೆಂದರೆ, ದೇಹಕ್ಕೆ ಒಂದೇ ರೀತಿಯ ಜೀವನಶೈಲಿಯ ಅಗತ್ಯವಿರುತ್ತದೆ. ಅದು ಅದೇ ರೀತಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಪ್ರತಿದಿನ ಬೇಗ ಮಲಗಿ, ಬೇಗ ಏಳಿ.

ನಾಲ್ಕನೇಯದಾಗಿ ಹೆಚ್ಚು ಕಾಸ್ಮೆಟಿಕ್ಸ್, ಪ್ಲಾಸ್ಟಿಕ್ ಬಳಕೆ ಮಾಡಬಾರದು. ಮೇಕಪ್ ಮಾಡಿಕೊಂಡರೆ, ಅದನ್ನು ಕ್ಲೀನ್ ಆಗಿ ತೊಳೆದುಕೊಳ್ಳಬೇಕು. ಸುಮ್ಮನೆ ಮುಖ ತೊಳೆದು ಬಿಟ್ಟುಬಿಡಬಾರದು. ಲೋಶನ್ ಅಥವಾ ಎಣ್ಣೆಯಿಂದ ಪೂರ್ತಿ ಮೇಕಪ್ ಕ್ಲೀನ್ ಮಾಡಬೇಕು. ಪ್ಲಾಸ್ಟಿಕ್ ತಟ್ಟೆ, ಲೋಟ, ಬಾಟಲಿಗಳ ಬಳಕೆ ಮಾಡಬೇಡಿ.

ಐದನೇಯದಾಗಿ ಜೀವನದಲ್ಲಿ ಹೆಚ್ಚು ಒತ್ತಡವಿರದಂತೆ ನೋಡಿಕೊಳ್ಳಿ. ಆರಾಮವಾಗಿ, ಖುಷಿಯಾಗಿ ಇರುವುದನ್ನು ಕಲಿತುಕೊಳ್ಳಿ. ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವುದು. ಸಣ್ಣಪುಟ್ಟ ವಿಚಾರಕ್ಕೂ ಅಳುವುದು, ಸಿಟ್ಟು ಮಾಡಿಕೊಳ್ಳುವುದೆಲ್ಲ ಮಾಡಬೇಡಿ. ಇದು ಕೂಡ ಆರೋಗ್ಯಕ್ಕೆ ಉತ್ತಮವಲ್ಲ.

- Advertisement -

Latest Posts

Don't Miss