Friday, June 20, 2025

Latest Posts

ಅಮ್ಮ- ಅಪ್ಪನಾಗುವ ಖುಷಿಯಲ್ಲಿ ಬಾಲಿವುಡ್ ನಟಿ ದೀಪಿಕಾ- ರಣ್ವೀರ್ ಸಿಂಗ್‌

- Advertisement -

Bollywood News: ಬಾಲಿವುಡ್ ಸ್ಟಾರ್ ರಣ್ವೀರ್ ಸಿಂಗ್ ಮತ್ತು ಕನ್ನಡತಿ ದೀಪಿಕಾ ಪಡುಕೋಣೆ ತಂದೆ ತಾಯಿಯಾಗುವ ಖುಷಿಯಲ್ಲಿದ್ದಾರೆ. ನಟ ರಣ್ವೀರ್ ಈ ಬಗ್ಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು, ಅಪ್ಪ ಅಮ್ಮನಾಗುತ್ತಿದ್ದೇವೆ, ಸೆಪ್ಟೆಂಬರ್‌ಗೆ ಮಗು ಬರಲಿದೆ ಎಂದು ಬರೆದುಕೊಂಡಿದ್ದಾರೆ.

2018ರಲ್ಲಿ ಇಟಲಿಯಲ್ಲಿ ಲವ್ ಮ್ಯಾರೇಜ್ ಆಗಿ ದೀಪಿಕಾ ಮತ್ತು ರಣ್ವೀರ್, ಕೊಂಕಣಿ ಬ್ರಾಹ್ಮಣ ಮತ್ತು ಸಿಂಗ್ ಸಮುದಾಯದ ಪದ್ಧತಿಯಂತೆ ವಿವಾಹವಾಗಿದ್ದರು. ಬಳಿಕ ಸಿನಿ ಇಂಡಸ್ಟ್ರಿಯಲ್ಲಿ ಒಂದಿಷ್ಟು ಬ್ಯುಸಿಯಾಗಿದ್ದರು. ಇದೀಗ ದೀಪಿಕಾ ಸಿನಿಮಾ ಇಂಡಸ್ಟ್ರಿಯಿಂದ ಬ್ರೇಕ್ ಪಡೆದು ತಾಯಿಯಾಗುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಪ್ರಸವವಾಗಲಿದೆ ಎಂಬ ಸುದ್ದಿ ಇದೆ.

ಇನ್ನು ಕೆಲ ದಿನಗಳಲ್ಲಿ ದೀಪಿಕಾ ಫೋಟೋ, ವೀಡಿಯೋ ಶೇರ್ ಆಗುತ್ತಿದ್ದಾಗ, ದೀಪಿಕಾಳ ಟಮ್ಮಿ ದೊಡ್ಡದಾಗಿ ಕಾಣುತ್ತಿದೆ. ಅಲ್ಲದೇ, ಆಕೆ ಹೊಟ್ಟೆ ಕಾಣದಂತೆ ಬಟ್ಟೆ ಹಾಕುತ್ತಿದ್ದಾರೆ. ಸೀರೆ ಉಡುತ್ತಿದ್ದಾರೆ. ಢಾಳವಾದ ಬಟ್ಟೆ ಹಾಕುತ್ತಿದ್ದಾರೆ. ಬೇಬಿ ಬಂಪ್ ಕಾಣಬಾರದು ಅಂತಾ ಹೀಗೆ ಮಾಡುತ್ತಿರಬಹುದು. ಆಕೆ ಗರ್ಭಿಣಿಯಾಗಿರಬಹುದು ಎಂದು ಹಲವರು ಊಹಿಸಿದ್ದರು. ಅಭಿಮಾನಿಗಳ ಊಹೆ ನಿಜವಾಗಿದೆ.

ಆರ್ಸಿಬಿ ಆಟಗಾರ್ತಿಗೆ ಪ್ರಪೋಸ್ ಮಾಡಿದ ಅಭಿಮಾನಿ..

ಮೆಟ್ರೋ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ

ಮದುವೆಯಾದ್ರಾ ಕಾರ್ತಿಕ್ ಮತ್ತು ನಮೃತಾ..? ಇಲ್ಲಿದೆ ನೋಡಿ ರಿಯಾಲಿಟಿ..

- Advertisement -

Latest Posts

Don't Miss