Health Tips: ಮೊದಲೆಲ್ಲ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ದಿನಚರಿ ಮುಗಿಸಿ, ರಾತ್ರಿ 9 ಗಂಟೆಗಂದ್ರೆ ನಿದ್ದೆ ಮಾಡಿ ಬಿಡುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ಊಟಕ್ಕೆ, ನಿದ್ರೆಗೆ ಸರಿಯಾದ ಸಮಯವಿಲ್ಲ. ಬೇಕಾದಾಗ ಊಟ ಮಾಡುತ್ತಾರೆ, ಬೇಕಾದಾಗ ಮಲಗುತ್ತಾರೆ. ಇವೆರಡರ ಮಧ್ಯೆ ಮೊಬೈಲ್ಗಾಗಿ ಒಂದೆರಡು ತಾಸು ಕೊಡುತ್ತಾರೆ. ಆದರೆ ರಾತ್ರಿ ಲೇಟಾಗಿ ಊಟ ಮಾಡೋದು ಎಷ್ಟು ತಪ್ಪು ಅಂತಾ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಆಹಾರ ತಜ್ಞರಾದ ಡಾ.ಪ್ರೇಮಾ ಅವರು ವಿವರಿಸಿದ್ದಾರೆ ನೋಡಿ..
ಗ್ಯಾಸ್ಟ್ರಿಕ್ ಆಗಲು ಅನೇಕ ಕಾರಣಗಳಿದೆ. ಅವುಗಳಲ್ಲಿ ರಾತ್ರಿ ಲೇಟಾಗಿ ಊಟ ಮಾಡೋದು ಕೂಡ ಒಂದು. ಇನ್ನೊಂದು ನಾವು ಸೇವಿಸುವ ಆಹಾರದ ಆಯ್ಕೆ ಸರಿಯಾಗಿಲ್ಲ. ಮೊದಲೆಲ್ಲ ತಿನ್ನಲು ಏನು ಸಿಗುತ್ತಿತ್ತೋ, ಅದನ್ನೇ ನಾವು ಸೇವಿಸುತ್ತಿದ್ದೆವು. ಏಕೆಂದರೆ, ಊಟ, ತಿಂಡಿಗೆ ಕಡಿಮೆ ಆಯ್ಕೆ ಇತ್ತು. ಆದರೆ ಈಗ ತರಹೇವಾರಿ ಆಯ್ಕೆ ಇದೆ. ಆದರೆ ಅವುಗಳಲ್ಲಿ ಹಲವು ಅನಾರೋಗ್ಯಕರವಾಗಿದೆ. ಜನ ಹೆಚ್ಚು ಅವುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಾಗಾಗಿ ಅನಾರೋಗ್ಯಕ್ಕೀಡಾಗುತ್ತಾರೆ.
ಗ್ಯಾಸ್ಟ್ರಿಕ್ ಆಗಲು ಇನ್ನೊಂದು ಮುಖ್ಯ ಕಾರಣ ಅಂದ್ರೆ, ನಮ್ಮ ಜೀವನ ಶೈಲಿ. ಸರಿಯಾದ ಸಮಯಕ್ಕೆ ಆರೋಗ್ಯಕರ ಆಹಾರ ಸೇವಿಸುವುದು. ಟಿವಿ ನೋಡಿಕೊಂಡು, ಮೊಬೈಲ್ ನೋಡಿಕೊಂಡು ಊಟ ಮಾಡೋದು, ಸರಿಯಾಗಿ ಬೇಯಿಸದ ಆಹಾರವನ್ನು ಸೇವಿಸೋದು. ಬೇಕಾದಾಗ ನಿದ್ರಿಸೋದು. ಹೀಗೆ ಇಂಥ ಜೀವನ ಶೈಲಿಯಿಂದಲೇ ನಮಗೆ ಗ್ಯಾಸ್ಟ್ರಿಕ್ನಂಥ ಸಮಸ್ಯೆ ಉದ್ಭವಿಸುತ್ತಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..




