Health Tips: ಪಿಸಿಓಎಸ್ ಇಂದಿನ ಕಾಲದ ಹಲವು ಹೆಣ್ಣು ಮಕ್ಕಳಿಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇದನ್ನು ನಿರ್ಲಕ್ಷಿಸದೇ, ತಕ್ಕ ಪಥ್ಯವನ್ನು ಮಾಡುವುದು ತುಂಬಾ ಮುಖ್ಯವಾಗಿದೆ. ಹಾಗಾದ್ರೆ ಪಿಸಿಓಎಸ್ ಇರುವವರು ಯಾವ ಆಹಾರವನ್ನು ಸೇವಿಸಬಾರದು ಅಂತಾ ವೈದ್ಯರು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ..
ವೈದ್ಯೆಯಾದ ಡಾ. ಚಂದ್ರಿಕಾ ಆನಂದ್ ಹೇಳುವ ಪ್ರಕಾರ, ಪಿಸಿಓಎಸ್ ಎಂದರೆ, ಜೀವನ ಪೂರ್ತಿ ಇರುವ ಆರೋಗ್ಯ ಸಮಸ್ಯೆ. ಪಿಸಿಓಎಸ್ ಇದ್ದವರಿಗೆ ಶುಗರ್, ವೇಟ್ ಗೇನ್ ಆಗುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಕೊಲೆಸ್ಟ್ರಾಲ್ ಹೆಚ್ಚಾಗಿ, ತರಹೇವಾರಿ ರೋಗ ಬರುವ ಸಾಧ್ಯತೆಯೂ ಇದೆ. ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗಿದ್ದು ಬಹಳ ಮುಖ್ಯ ಅಂತಾರೆ ವೈದ್ಯರು.
ಪಿಸಿಓಎಸ್ ಇದ್ದವರು, ನಾನು ಇಂಥ ಆಹಾರವನ್ನು ತ್ಯಜಿಸಿದರೆ ನನ್ನ ಆರೋಗ್ಯ ವೃದ್ಧಿಸುತ್ತದೆ ಅಂತಾ ಅರಿತುಕೊಳ್ಳಬೇಕು. ಅವರ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡರೆ, ಅವರ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.
ಹಾಲು ಮತ್ತು ಹಾಲಿನಿಂದ ಮಾಡಿದ ಪದಾರ್ಥಗಳಾದ ಬೆಣ್ಣೆ, ಮೊಸರು, ಚೀಸ್, ಪನೀರ್ ಇಂಥ ಆಹಾರಗಳ ಸೇವನೆ ಕಡಿಮೆ ಮಾಡಬೇಕು. ಹೊಟೇಲ್ಗೆ ಹೋಗಿ ತಿನ್ನುವುದನ್ನು ಕಂಟ್ರೋಲ್ ಮಾಡಬೇಕು. ಹೊಟೇಲ್ ತಿಂಡಿ, ಬೀದಿಬದಿ ತಿಂಡಿ, ಬೇಕರಿ ತಿಂಡಿ, ಐಸ್ಕ್ರೀಮ್ ಸೇರಿ ಜಂಕ್ ಫುಡ್ಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ತುಂಬಾ ಉತ್ತಮ.
ಇನ್ನು ಕರಿದ ಪದಾರ್ಥಗಳನ್ನು ಮನೆಯಲ್ಲೇ ತಯಾರಿಸಿದ್ದರೂ ಕೂಡ, ಅದರ ಸೇವನೆ ಕಂಟ್ರೋಲಿನಲ್ಲಿರಬೇಕು. ಮೊಳಕೆ ಕಾಳು, ಮನೆಯಲ್ಲೇ ತಯಾರಿಸಿದ ಹಣ್ಣಿನ ಜ್ಯೂಸ್, ಎಳನೀರು ಇಂಥ ಆಹಾರಗಳ ಸೇವನೆ ಉತ್ತಮ. ಹೆಚ್ಚು ಎಣ್ಣೆ, ತುಪ್ಪ, ಖಾರಾ, ಮಸಾಲೆ ಪದಾರ್ಥ ಮಾಡದೇ, ಬಳಸಿದ ಅಡುಗೆ ಊಟ ಮಾಡಬೇಕು. ಅಲ್ಲದೇ, ಸಿಹಿ ತಿಂಡಿಯ ಸೇವನೆ ಕಡಿಮೆ ಮಾಡಿದರೆ ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..