Saturday, July 12, 2025

Latest Posts

ಮಂಗನಬಾವು ಬಂದಲ್ಲಿ ಕಿವುಡರಾಗುವ ಸಾಧ್ಯತೆ ಇದೆಯಾ..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರೋಗ ಅಂದ್ರೆ ಮಂಗನಬಾವು. ಇದನ್ನು ಕೆಲವು ಕಡೆ ಕೆಪ್ಪಟ್‌ ರಾಯ ಅಂತಾರೆ. ಈ ಖಾಯಿಲೆ ಹರಡುವ ಖಾಯಿಲೆಯಾಗಿದ್ದು, ಶಾಲೆಯಲ್ಲಿ ಒಬ್ಬರಿಗೆ ಈ ರೋಗ ಬಂದರೆ, ಹಲವು ಮಕ್ಕಳಿಗೆ ಇದು ತಗುಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದು, ಮಂಗನಬಾವು ಬಂದರೆ, ಏನೆಲ್ಲ ಸಮಸ್ಯೆಗಳಾಗುತ್ತದೆ ಅಂತಾ ವಿವರಿಸಿದ್ದಾರೆ.

ಶಾಲೆ, ಹಾಸ್ಟೇಲ್‌ಗಳಲ್ಲಿ ಮಂಗನ ಬಾವು ಒಬ್ಬರಿಗೆ ಬಂದರೆ, ಮತ್ತೊಬ್ಬರಿಗೆ ಬಂದೇ ಬರುತ್ತದೆ. ಇದೊಂಥರಾ ಅಂಟು ರೋಗವಿದ್ದ ಹಾಗೆ. ಕೆಮ್ಮಿದಾಗ, ಕೆಮ್ಮು, ಸೀನಿದಾಗ ನೆಗಡಿ ಹೇಗೆ ಇನ್ನೊಬ್ಬರಿಗೆ ಹರಡುತ್ತದೆಯೋ, ಅದೇ ರೀತಿ, ಕೆಮ್ಮು ಮತ್ತು ಸೀನು ಬಂದಾಗ, ಅದರ ವೈರಸ್ ಇನ್ನೊಬ್ಬರಿಗೆ ಹೋಗಿ, ಮಂಗನ ಬಾವು ಹರಡುತ್ತದೆ.

ಇಂಥ ರೋಗವೆಲ್ಲ ಬರಬಾರದು ಅಂದ್ರೆ, ಮಕ್ಕಳಿಗೆ ಕೊಡುವ ಮದ್ದುಗಳನ್ನು ಕೊಡಿಸಬೇಕು. 9 ತಿಂಗಳು ತುಂಬಿದ ಬಳಿಕ, 15 ತಿಂಗಳು ತುಂಬಿದ ಬಳಿಕ, 5 ವರ್ಷವಾಗುವ ಮುನ್ನ 3 ಡೋಸ್ ಔಷಧಿ ನೀಡಲಾಗುತ್ತದೆ. ಈ ಮದ್ದುಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡರೆ, ಮಂಗನಬಾವು ಬರುವುದಿಲ್ಲ. ಇನ್ನು ನೀವು ಮಂಗನಬಾವು ಕಾಮನ್ ಅಂತಾ ಸುಮ್ಮನಿದ್ದರೆ, ಮಗುವಿಗೆ ಬ್ರೇನ್ ಫಿವರ್ ಬರಬಹುದು. ಭವಿಷ್ಯದಲ್ಲಿ ಕಿವಿ ಕೇಳಿಸದೆಯೂ ಇರಬಹುದು. ಹಾಗಾಗಿ ಮಂಗನ ಬಾವಿಗೆ ಬೇಕಾದ ಚಿಕಿತ್ಸೆ ಪಡಿಯಲೇಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ..

- Advertisement -

Latest Posts

Don't Miss