ಅತಿಯಾದ ಕೂದಲು ಉದುರುವಿಕೆಗೆ ಇಲ್ಲಿದೆ ಪರಿಹಾರ..

Health Tips: ಇಂದಿನ ಯುವ ಪೀಳಿಗೆಯವರ ಆರೋಗ್ಯ ಮತ್ತು ಸೌಂದರ್ಯ ಸಮಸ್ಯೆ ಅಂದ್ರೆ ಅದು ಅತಿಯಾದ ಕೂದಲು ಉದುರುವಿಕೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ತರಹೇವಾರಿ ಪ್ರಾಡಕ್ಟ್ಸ್ ಬಂದರೂ, ಅದನ್ನು ಬಳಸಿದರೂ ಅಷ್ಟೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ವೈದ್ಯರು ಅತಿಯಾದ ಕೂದಲು ಉದುರುವಿಕೆಗೆ ಏನು ಪರಿಹಾರ ಮಾಡಬೇಕು ಎಂದು ಹೇಳಿದ್ದಾರೆ ನೋಡಿ..

ವೈದ್ಯರಾದ ಡಾ.ದೀಪಿಕಾ ಈ ಬಗ್ಗೆ ವಿವರಿಸಿದ್ದು, ತುಂಬಾ ಕೂದಲು ಉದುರುತ್ತಿದ್ದರೆ ಅದಕ್ಕಿರುವ ಒಂದೇ ಒಂದು ಪರಿಹಾರ ಅಂದ್ರೆ ಹೇರ್ ಟ್ರಾನ್ಸ್‌ಪ್ಲಾಂಟ್. ಈ ಚಿಕಿತ್ಸೆ ಬಗ್ಗೆ ವೈದ್ಯರು ವಿವರಿಸಿದ್ದಾರೆ. ತಲೆಯ ಹಿಂದಿನ ಭಾಗದಲ್ಲಿ ಅಷ್ಟೇ ಕೂದಲಿರುತ್ತದೆ. ಮುಂದಿನ ಭಾಗದಲ್ಲಿ ಕೂದಲಿರುವುದಿಲ್ಲ. ಮದುವೆ ವಯಸ್ಸಿಗೆ ಬಂದಾಗ ಕೂದಲು ಉದುರುವುದೆಲ್ಲ ಆದಾಗ, ಅಂಥವರಿಗೂ ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ.

ಈ ಚಿಕಿತ್ಸೆ ಕೊಡುವಾಗ, ಕೆಲ ರೋಗಗಳು ಇದೆಯಾ, ಅಥವಾ ವಯಸ್ಸೆಷ್ಟಾಗಿದೆ. ಡ್ರಗ್ಸ್ ಸೇವನೆ ಮಾಡುತ್ತಿದ್ದಾರಾ ಹೀಗೆ ಹಲವು ವಿಚಾರಗಳ ಬಗ್ಗೆ ತಪಾಸಣೆ ನಡೆಸಿದ ಬಳಿಕವೇ, ಚಿಕಿತ್ಸೆ ಕೊಡಿಸಲಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author