Spiritual: ಮನೆಯಲ್ಲಿ ಮಕ್ಕಳಿಗೆ 5 ವರ್ಷ ತುಂಬಿದ ಬಳಿಕ, ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅಂತಾ ಹೇಳಿಕೊಡಲಾಗುತ್ತದೆ. ಏಕೆಂದರೆ, ಮಕ್ಕಳು 5 ವರ್ಷದವರೆಗೂ ಏನೂ ಅರೆಯದವರಾಗಿದ್ದು, ದೇವರ ರೀತಿ ಅಂತಾ ಹೇಳಲಾಗುತ್ತದೆ. ಹಾಗಾಗಿ ಅವರಿಗೆ 5 ವರ್ಷ ತುಂಬಿದ ಬಳಿಕ, ಮಕ್ಕಳು ಹಿರಿಯರ ಪಾದಗಳಿಗೆ ನಮಸ್ಕರಿಸಿ, ಆಶೀರ್ವಾದ ಪಡೆಯಬೇಕು ಅಂತಾ ಹೇಳಲಾಗು್ತ್ತದೆ. ಹಾಗ್ಯಾಕೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಕೆಲವು ಹಿರಿಯರು ಮಕ್ಕಳು ಪಾದಮುಟ್ಟಿ ನಮಸ್ಕರಿಸುತ್ತಾರೆ ಅಂದರೆ, ದೂರ ನಿಲ್ಲುತ್ತಾರೆ. ನೀನು ನಮಸ್ಕಾರ ಮಾಡುವುದು ಬೇಡಪ್ಪಾ, ನಮ್ಮ ಆಶೀರ್ವಾದ ಸದಾ ನಿಮ್ಮ ಮೇಲೆ ಇರುತ್ತದೆ ಅಂತಾ ಹೇಳುತ್ತಾರೆ. ಆದರೆ, ಹಿರಿಯರ ಪಾದಸ್ಪರ್ಶ ಮಾಡುವುದರಿಂದ, ಅವರು ಮಾಡಿದ ಪುಣ್ಯವೆಲ್ಲಾ, ನಮಗೆ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾಗಿ ಹಲವರು ಪಾದಸ್ಪರ್ಶ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ.
ಇನ್ನು ಹಿರಿಯರ ಪಾದಸ್ಪರ್ಶ ಮಾಡುವುದರಿಂದ ಅವರಲ್ಲಿರುವ ಧನಾತ್ಮಕ ಶಕ್ತಿ ನಮಗೆ ಬರುತ್ತದೆ. ಇದರಿಂದ ನಾವಂದುಕೊಂಡ ಕೆಲಸ ಮಾಡಲು ಅನುಕೂಲವಾಗುತ್ತದೆ. ಹಾಗಾಗಿಯೇ ಪರೀಕ್ಷೆ ಬರೆಯುವಾಗ, ಕೆಲಸಕ್ಕೆ ಸಂದರ್ಶನಕ್ಕೆ ಹೋಗುವಾಗ, ಹಿರಿಯರಿಗೆ ಕಾಲು ಮುಗಿದು ಹೋಗಬೇಕು ಅಂತಾ ಹೇಳುತ್ತಾರೆ.
ಇನ್ನು ಹಿರಿಯರ ಕಾಲೆರಗಿ ನಮಸ್ಕಾರ ಮಾಡುವುದರಿಂದ ಮಕ್ಕಳಿಗೆ ವಿನಯತೆ, ಸಂಸ್ಕಾರ ಬರುತ್ತದೆ. ಹಾಗಾಗಿ ತಂದೆ ತಾಯಿ ಮಕ್ಕಳಿಗೆ, ಹಿರಿಯರನ್ನು ನಮಸ್ಕರಿಸು ಅಂತಾ ಹೇಳುತ್ತಾರೆ.
ಇನ್ನು ಇಂದಿನ ಕಾಲದ ಮಕ್ಕಳು ಹಿರಿಯರಿಗೆ ಸ್ಟೈಲಾಗಿ ನಮಸ್ಕರಿಸುತ್ತಾರೆ. ಹಿರಿಯರ ಮಂಡಿಗೆ ಕೈ ಹಚ್ಚಿ, ನಮಸ್ಕಾರ ಮಾಡುವುದು. ಆದರೆ ಹೀಗೆ ಮಾಡುವುದು ತಪ್ಪು, ಮಂಡಿ ನೆಲಕ್ಕೆ ತಾಗಿಸಿ, ತಲೆ ಬಾಗಿ, ಕಾಲಿಗೆರಗಿ ಸಮಸ್ಕರಿಸುವುದು ಸರಿಯಾದ ವಿಧಾನ.