Horoscope: ನಾವು ಈಗಾಗಲೇ ನಿಮಗೆ ಒಂದೊಂದು ರಾಶಿಯವರ ಒಂದೊಂದು ಸ್ವಭಾವನನ್ನು ಹೇಳಿದ್ದೇವೆ. ಸದಾ ನಗು ನಗುತ್ತಲೇ ಇರುವವರು, ಸಿಡುಕು ಸ್ವಭಾವದವರು, ಅಳುಮುಂಜಿಗಳು, ಆತ್ಮವಿಶ್ವಾಸ ಕಡಿಮೆ ಇರುವವರು ಹೀಗೆ ಹಲವು ಗುಣಗಳಿರುತ್ತದೆ. ಅದೇ ರೀತಿ ಕೋಪ ಬಂದಾಗ, ಮನಸ್ಸಿಗೆ ನೋವಾಗುವ ಹಾಗೆ ಮಾತನಾಡುವ ರಾಶಿಯ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ವೃಷಭ: ವೃಷಭ ರಾಶಿಯವರು ಅಷ್ಟು ಬೇಗ ಕೋಪ ಮಾಡಿಕೊಳ್ಳುವುದಿಲ್ಲ. ಅವರು ಸ್ವಲ್ಪ ತಾಳ್ಮೆ ತೆಗೆದುಕೊಳ್ಳುತ್ತಾರೆ. ಆದರೆ, ಇವರಿಗೆ ಕೋಪ ಬಂದರೆ, ಎದುರುಗಡೆ ಇರುವವರು ಕಣ್ಣೀರು ಹಾಕುವುದು ಖಚಿತ. ಆ ರೀತಿಯ ಕಹಿ ಮಾತುಗಳು ಇವರಿಂದ ಕೇಳಬೇಕಾಗುತ್ತದೆ. ಅಪರೂಪಕ್ಕೆ ಕೋಪ ಮಾಡಿಕೊಳ್ಳುವ ಇವರು, ಆ ಸಂದರ್ಭದಲ್ಲಿ ತಾವೇನು ಮಾತನಾಡುತ್ತಿದ್ದೇವೆ ಎಂಬ ಪರಿವಿಲ್ಲದೇ ಮಾತನಾಡುತ್ತಾರೆ.
ಸಿಂಹ: ಸಿಂಹ ಹೇಗೆ ಕಾಡಿನ ರಾಜನೋ, ಅದೇ ರೀತಿ ಸಿಂಹ ರಾಶಿಯವರು ರಾಜನಂತೆ ಇರಲು ಬಯಸುವವರು. ನಾಯಕತ್ವದ ಗುಣ ಹೊಂದಿರುವ ಇವರು, ಸದಾಕಾಲ ನಂಬರ್ ಒನ್ ಸ್ಥಾನದಲ್ಲಿರಲು ಬಯಸುತ್ತಾರೆ. ಆದರೆ ಇವರಿಗೆ ಕೋಪ ಮತ್ತು ಹಠ ಹೆಚ್ಚು. ಇವರ ಕೋಪವೇ ಇವರಿಗೆ ಮುಳ್ಳು ಅಂತಾ ಹೇಳಬಹುದು. ಕೋಪ ಕಡಿಮೆ ಮಾಡಿ, ಯಶಸ್ಸು ಸಾಧಿಸುವ ಹಠ ಇವರಲ್ಲಿದ್ದರೆ ಉತ್ತಮ.
ಕನ್ಯಾ: ಕನ್ಯಾ ರಾಶಿಯ ಜನರು ಬುದ್ಧಿವಂತರು. ಇವರಿಗೆ ಯಾರಾದರೂ ಮನಸ್ಸು ನೋವಾಗುವಂತೆ ಮಾತನಾಡಿದರೆ ಅಳುವೇ ಬರುತ್ತದೆ. ಆದರೆ ಇವರು ಮಾತ್ರ ಸದಾ ಕಾಲ ಇನ್ನೊಬ್ಬರ ಮನಸ್ಸಿಗೆ ನೋವಾಗುವಂತೆ ಮಾತನಾಡುತ್ತಾರೆ. ಯಶಸ್ವಿಯಾಗಲು ಇವರು ಜೀವನದಲ್ಲಿ ಹಲವು ಕಷ್ಟ ಪಡುತ್ತಾರೆ. ಆದರೆ ಇವರ ಮಾತು ಇವರ ವಿರುದ್ಧವಾಗಿ ಕೆಲಸ ಮಾಡಿ, ಇವರ ಯಶಸ್ಸನ್ನು ಹಿಮ್ಮೆಟ್ಟಿಸುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಕಾಳಜಿ ಸ್ವಭಾವದವರು. ಸಂಬಂಧ ಮತ್ತು ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಆದರೆ ಇವರಿಗೆ ಬಹಳ ಬೇಗ ಕೋಪ ಬರುತ್ತದೆ. ತಾಳ್ಮೆ ಸ್ವಲ್ಪ ಕಡಿಮೆ ಅಂತಲೇ ಹೇಳಬಹುದು. ವೃಶ್ಚಿಕ ರಾಶಿಯವರು, ತಮ್ಮ ಕೋಪದಿಂದಲೇ, ಸಂಬಂಧ, ಗೆಳೆತನ ಎಲ್ಲವನ್ನೂ ಕಳೆದುಕೊಳ್ಳಬಹುದು.




