Sunday, November 10, 2024

Latest Posts

COFFE: ಕಾಫಿ ಅಲ್ಲ, ಇದು ಬೆಕ್ಕಿನ *******

- Advertisement -

ಈ ಜಗತ್ತಿನಲ್ಲಿ ಎಷ್ಟೇ ವರ್ಷವಾದ್ರೂ ಕಾಫಿ ಪ್ರಿಯರಿಗೇನು ಕಡಿಮೆಯಿಲ್ಲ. ಯಾಕಂದ್ರೆ ಕೆಲವ್ರು ಕಾಫಿಯನ್ನ ಇಷ್ಟ ಪಟ್ಟು ಕುಡಿತಾರೆ ಆದ್ರೆ, ಇನ್ನೂ ಕೆಲವ್ರು ಸೆಲ್ಫ್ ರೀಚಾರ್ಜ್ ಗೋಸ್ಕರ ಕುಡೀತಾರೆ. ಕಾಫಿಯನ್ನ ಕುಡಿಯೋದು ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದೇ. ಅಂದಹಾಗೆ ಕಾಫಿಯಲ್ಲೂ ಸಾಕಷ್ಟು ವೆರೈಟಿ ಇದೆ. ಅದರಲ್ಲೂ” ಕೋಪಿ ಲುವಾಕ್” ಎಂಬ ಕಾಫಿ, ಜಗತ್ತಿನ ಶ್ರೀಮಂತರ ಮೊದಲ ಚಾಯ್ಸ್ ಆಗಿದೆ.ಹಾಗಿದ್ರೆ ವಿಶ್ವದ ದುಬಾರಿ ಕಾಫಿಯಾಗಿರುವ “ಕೋಪಿ ಲುವಾಕ್ ” ಅನ್ನ ಹೇಗೆ ತಯಾರಿಸ್ತಾರೆ ಹೇಳ್ತೀವಿ

 

ಕೋಪಿ ಲುವಾಕ್ ಎಂಬ ಕಾಫಿ ಜಗತ್ಪ್ರಸಿದ್ಧಿ ಹೊಂದಿದೆ. ಈ ಕಾಫಿಯನ್ನ ಸಿವೆಟ್ ಕಾಫಿ ಅಂತಾಲೂ ಕರೀತಾರೆ. ಪ್ರಪಂಚದಲ್ಲೇ ಅತ್ಯಂತ ಅಪರೂಪದ ಮತ್ತು ಅತ್ಯಂತ ದುಬಾರಿ ಬೆಲೆ ಈ ಕಾಫಿಗಿದೆ. ಸಿವೆಟ್ ಕಾಫಿಗೆ ಕೆಜಿಗೆ ಸಾವಿರಾರು ರೂಪಾಯಿ ಇದೆ.. ಅಚ್ಚರಿಯಂದ್ರೆ ಈ ಕಾಫಿಯನ್ನ ಸಿವೆಟ್ ಎಂಬ ಬೆಕ್ಕು ಅಥವಾ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ. ಇವುಗಳು ಹೆಚ್ಚಾಗಿ ಇಂಡೋನೇಷ್ಯಾದಲ್ಲಿ ಕಂಡುಬರುವ ಬೆಕ್ಕುಗಳ ಜಾತಿಗೆ ಸೇರಿದೆ. ಇದರ ಬಾಲ ಕೋತಿಯಂತೆ ಉದ್ದವಾಗಿರುತ್ತದೆ.

 

ಅಂದಹಾಗೆ ಈ ಲುವಾಕ್‌ ಕಾಫಿಯನ್ನ ಕುಡಿಯೋಕೆ ಶ್ರೀಮಂತರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಕಾಫಿ ಕುಡಿಯೋವಾಗ ಇದರ ರುಚಿಗೆ ಜನ ಮಾರುಹೋಗ್ತಾರೆ

ಲುವಾಕ್ ಕಾಫಿಯನ್ನು ಸಿವೆಟ್ ಕ್ಯಾಟ್ ಪೂಪ್ ನಿಂದ ತಯಾರಿಸಲಾಗುತ್ತದೆ. ಮುಖ್ಯವಾಗಿ ಇದಕ್ಕಾಗಿ ಬೆಕ್ಕಿಗೆ ಮೊದಲು ಕಚ್ಚಾ ಕಾಫಿ ಬೀಜಗಳನ್ನು ನೀಡಲಾಗುತ್ತದೆ. ಸಿವೆಟ್ ಬೆಕ್ಕುಗಳು ಕಾಫಿ ಬೀಜಗಳನ್ನು ಇಷ್ಟಪಟ್ಟು ತಿನ್ನುತ್ತವೆ. ಈ ಬೆಕ್ಕುಗಳು ಕಾಫಿ ಬೀಜಗಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಆಗದೆ ಕಾಫಿ ಬೀಜ ಮಾತ್ರ ಬೆಕ್ಕಿನ ಮಲದೊಂದಿಗೆ ಹೊರಬರುತ್ತದೆ. ನಂತರ ಅದೇ ಕಾಫಿ ಬೀಜವನ್ನು ಸಂಸ್ಕರಿಸಿ ಕಾಫಿ ಪೌಡರ್ ತಯಾರಿಸ್ತಾರೆ

 

ಬೆಕ್ಕಿನ ಕರುಳಿನ ಮೂಲಕ ಹಾದುಹೋದ ನಂತರ ಕಾಫಿ ಹೆಚ್ಚು ಟೇಸ್ಟಿ ಆಗುತ್ತದೆ ಎಂದು ಕಾಫಿ ಪ್ರಿಯರು ಹೇಳುತ್ತಾರೆ. ಈ ಬೆಕ್ಕಿನ ಸ್ಟೂಲ್‌ ನಿಂದ ಕಾಫಿ ಬೀಜ ಬೇರ್ಪಡಿಸಿ, ಎಲ್ಲಾ ರೀತಿಯ ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸಲಾಗುತ್ತದೆ. ನಂತರ ನಡೆಯೋ ಸಂಸ್ಕರಣೆ ಪ್ರಕ್ರಿಯೆಯಲ್ಲಿ ಬೀಜಗಳನ್ನು ತೊಳೆದು ಹುರಿದು ಪುಡಿ ಮಾಡಲಾಗುತ್ತೆ ಆಗ ಕಾಫಿ ಸಿದ್ಧವಾಗುತ್ತದೆ.

ಕರ್ನಾಟಕದ ಕೊಡಗಿನಲ್ಲೂ ಈ ಲುವಾಕ್ ಕಾಫಿ ಸಿಗುತ್ತೆ. ಈ ಕಾಫಿ ಪೌಡರ್ ಒಂದು ಕೆಜಿಗೆ 20 ರಿಂದ 25 ಸಾವಿರ ರೂಪಾಯಿ ಆಗಿದೆ. ಅಂದಹಾಗೇ ನೀವು ಏನಾದ್ರೂ ಕಾಫಿ ಪ್ರಿಯರಾಗಿದ್ರೆ ಒಮ್ಮೆ ಲುವಾಕ್ ಕಾಫಿಯನ್ನ ಟ್ರೈಮಾಡಿ.

- Advertisement -

Latest Posts

Don't Miss