Health Tips: ನೀವು ನೋಡಿರಬಹುದು. ಕೆಲ ಮಕ್ಕಳು ಯಾವಾಗ ನೋಡಿದರೂ ಮೂಗಿನಲ್ಲಿ ಗೊಣ್ಣೆ ಇಟ್ಟುಕೊಂಡೇ ಓಡಾಡುತ್ತಿರುತ್ತದೆ. ಆದರೆ ಅಪ್ಪ ಅಮ್ಮನಿಗೆ ಮಗುವಿಗೆ ಯಾಕೆ ಪದೇ ಪದೇ ಶೀತ, ಕೆಮ್ಮು ಆಗತ್ತೆ ಅನ್ನೋದಕ್ಕೆ ಕಾರಣವೇ ಗೊತ್ತಿರುವುದಿಲ್ಲ. ಹಾಗಾದರೆ ಮಕ್ಕಳಲ್ಲಿ ಪದೇ ಪದೇ ಶೀತ, ಕೆಮ್ಮು ಕಾಣಿಸಿಕೊಳ್ಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮಕ್ಕಳು ಸೇವಿಸುವ ಆಹಾರ ಮತ್ತು ಮಗು ಗರ್ಭದಲ್ಲಿ ಇರುವಾಗ ತಾಯಿ ಸೇವಿಸುವ ಆಹಾರವೂ ಇದಕ್ಕೆ ಕಾರಣವಾಗುತ್ತದೆ. ತಾಯಿ ಗರ್ಭಿಣಿಯಾಗಿದ್ದಾಗ, ಹೆಚ್ಚು ತಂಪು ತಂಪಾದ ಆಹಾರ, ಹಣ್ಣುಗಳನ್ನು ತಿಂದಿದ್ದರೆ, ಮಗುವಿಗೆ ಪದೇ ಪದೇ ಜ್ವರ, ಶೀತ, ನೆಗಡಿ, ಕೆಮ್ಮು ಬರುತ್ತಲೇ ಇರುತ್ತದೆ. ಉದಾಹರಣೆಗೆ ಗರ್ಭಿಣಿಯರು ಪಚ್ಚ ಬಾಳೆಹಣ್ಣು ತಿನ್ನಬಾರದು ಅನ್ನುತ್ತಾರೆ. ಯಾಕಂದ್ರೆ ಪಚ್ಚಬಾಳೆ ಹಣ್ಣು ತಿಂದರೆ, ಹುಟ್ಟುವ ಮಗುವಿಗೆ ಪದೇ ಪದೇ ಜ್ವರ, ನೆಗಡಿ ಬರುತ್ತದೆ. ಮತ್ತು ಅದರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ ಅಂತಾ.
ಇನ್ನು ಮಗು ಹುಟ್ಟಿದ ಬಳಿಕ, ತಾಯಿ ಸರಿಯಾಗಿ ಎದೆ ಹಾಲು ಕುಡಿಸಿರಬೇಕು. ಬಳಿಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ, ಸೊಪ್ಪು, ತರಕಾರಿ, ಬೇಳೆ, ಕಾಳು, ಹಣ್ಣುಗಳನ್ನು ತಿನ್ನಲು ಕೊಡಬೇಕು. ಮಗುವಿಗೆ ಸದಾ ಆರೋಗ್ಯಕರ ಆಹಾರವನ್ನೇ ನೀಡಬೇಕು. ಹೊರಗಿನ ತಿಂಡಿಯನ್ನು ಹೆಚ್ಚು ತಿನ್ನಲು ಕೊಡಕೂಡದು.
ಇನ್ನು ನೀರು ಕುಡಿಯುವ ವಿಷಯ ನೋಡುವುದಾದರೆ, ಕುದಿಸಿ, ಆರಿಸಿದ ನೀರನ್ನು ಮಕ್ಕಳಿಗೆ ಕುಡಿಯಲು ಕೊಟ್ಟರೆ ಉತ್ತಮ. ತುಪ್ಪ, ಹಾಲು, ಮಜ್ಜಿಗೆ, ಮೊಸರು, ಹಣ್ಣು-ತರಕಾರಿ, ಕಾಳು, ಸೊಪ್ಪು ಎಲ್ಲವನ್ನೂ ಮಕ್ಕಳಿಗೆ ತಿನ್ನಿಸಲು ಅಭ್ಯಾಸ ಮಾಡಿಸಬೇಕು. ಇದರಿಂದ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಪದೇ ಪದೇ ಶೀತ, ಕೆಮ್ಮು ಬರದೇ, ಮಕ್ಕಳು ಆರೋಗ್ಯವಾಗಿರುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ.