ಲಖನೌ: ಇತ್ತೀಚಿನ ದಿನಗಳಲ್ಲಿ ಮದುವೆ ಮನೆಗಳಲ್ಲಿ ಸಂಪ್ರದಾಯ, ಸಂಬಂಧಗಳಿಗಿಂತ ಹೆಚ್ಚು ಪ್ರೆಸ್ಟೀಜ್‌ಗೆ ಬೆಲೆ ಕೊಡಲಾಗುತ್ತಿದೆ. ಎಲ್ಲ ಸಂಬಂಧಿಕರನ್ನು ಕರೆದು ಫೋಟೋಶೂಟ್ ಮಾಡುವುದು. ನಾವು ಕೊಟ್ಟಷ್ಟೇ ದುಡ್ಡು, ಅಥವಾ ಆ ದುಡ್ಡಿಗೆ ಬೆಲೆಬಾಳುವ ಗಿಫ್ಟ್ ಕೊಡಲೇಬೇಕು ಎನ್ನುವುದು. ಇತ್ಯಾದಿಗಳು ಇಂದಿನ ಸಂಬಂಧಗಳ ಬೆಲೆಯನ್ನ ಕಡಿಮೆ ಮಾಡಿದೆ.
ಯಾಕಂದ್ರೆ ಇಂದಿನ ಕಾಲದ ಜನ ಸಂಬಂಧಗಳ ಬೆಲೆ ಮರೆಯುತ್ತಿದ್ದಾರೆ. ಅವರು ನಮ್ಮ ಮದುವೆಗೆ ಬರಲಿಲ್ಲ, ಹಾಗಾಗಿ ನಾವು ಅವರ ಮನೆ ಫಂಕ್ಷನ್ನಿಗೂ ಹೋಗಬಾರದು. ಹೀಗೆಲ್ಲ ಮಾಡುವವರೂ ಇದ್ದಾರೆ. ಇದನ್ನೆಲ್ಲ ಸಂಬಂಧ ನಿಭಾಯಿಸುವುದು ಅನ್ನುವುದಿಲ್ಲ. ಬದಲಾಗಿ ವ್ಯಾಪಾರ ಮಾಡುವುದು ಎಂದು ಹೇಳುತ್ತಾರೆ. ಇಂಥ ಮನಸ್ಥಿತಿಯಿಂದಲೇ, ಇಂದಿನ ಕಾಲದ ಹಲವು ಸಂಬಂಧಗಳು ಮುರಿದು ಬೀಳುತ್ತಿರುವುದು.
ಇದೇ ರೀತಿ ಫೋಟೋಶೂಟ್ ವಿಚಾರವಾಗಿ, ಆಗ್‌ರಾದ ಶಾಹಗಂಜ್‌ನ ಮದುವೆ ಮನೆಯೊಂದರಲ್ಲಿ ಗಲಾಟೆ ನಡೆದಿದೆ. ಮದುವೆ ವೇಳೆ ಸ್ಟೇಜ್ ಮೇಲೆ ಬಂದು, ವಧು ವರರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ವಿಚಾರವಾಗಿ, ಮತ್ತು ಡಾನ್ಸ್ ಮಾಡು ವಿಚಾಾರವಾಗಿ ಗಲಾಟೆ ನಡೆದಿದ್ದು, ಕೈ ಕೈ ಮಿಲಾಯಿಸುವತನಕ ಹೋಗಿದೆ. ಇವರ ಜಗಳಕ್ಕೆ ಸ್ಟೇಜ್ ಅಲುಗಾಡಿದ್ದು, ಈ ದೃಷ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಕೆಲ ದಿನಗಳ ಹಿಂದಷ್ಟೇ ಮದುವೆ ಮನೆಯಲ್ಲಿ ಬಿಸಿ ಬಿಸಿ ಪೂರಿ ಕೊಡದ ಕಾರಣಕ್ಕೆ, ವರನ ಕಡೆ ಗೆಳೆಯರು ಮತ್ತು ಸಂಬಂಧಿಕರು ಗಲಾಟೆ ಮಾಡಿ, ಹೊಡೆದಾಡಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡುವ ಮಟ್ಟಕ್ಕೆ ಜಗಳ ಹೋಗಿತ್ತು.
— K.RAJ. 🇮🇳🚩 (@Kulwant70838898) May 5, 2023
‘ನಾರಾಯಣಮೂರ್ತಿ ಡ್ಯಾಶಿಂಗ್ ಹೀರೋ ಥರ ಇರ್ತಾರೆ ಅಂದ್ಕೊಂಡಿದ್ದೆ.. ಆದ್ರೆ..’
ಉತ್ತರಪ್ರದೇಶದಲ್ಲಿ ‘ದಿ ಕೇರಳ ಸ್ಟೋರಿ’ ನೋಡಲು ಕೊಡಬೇಕಾಗಿಲ್ಲ ತೆರಿಗೆ: ಯೋಗಿ ಆದೇಶ



