Friday, November 22, 2024

Latest Posts

ಈ 5 ವಿಚಾರಗಳನ್ನು ಅರಿತುಕೊಂಡರೆ ಸುಖದಾಂಪತ್ಯ ನಿಮ್ಮದಾಗುತ್ತದೆ..

- Advertisement -

Health Tips: ಹೆಣ್ಣಿನ ಜೀವನ ಇತ್ಯರ್ಥವಾಗುವುದೇ ವಿವಾಹದ ಬಳಿಕ. ಏಕೆಂದರೆ ಮದುವೆಯಾಗುವವರೆಗೂ ಆಕೆ ಅಪ್ಪ ಅಮ್ಮನೊಂದಿಗೆ ತನಗೆ ಹೇಗೆ ಬೇಕೋ, ಹಾಗೆ ಇರುತ್ತಾಳೆ. ಆದರೆ ವಿವಾಹದ ಬಳಿಕ, ಪತಿಯ ಮನೆಯಲ್ಲಿ, ಅತ್ತೆ ಮಾವ, ನಾದಿನಿ, ಮೈದುನ ಎಲ್ಲರೊಂದಿಗೂ ಹೊಂದಿಕೊಂಡು ಹೋಗಬೇಕಾಗುತ್ತದೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಹೊಂದಿಕೊಳ್ಳಬೇಕಾಗಿದ್ದು, ಪತಿಯ ಜೊತೆ. ಹಾಗಾಗಿ ನಾವಿಂದು ಯಾವ 5 ವಿಚಾರಗಳನ್ನು ಅರಿತುಕೊಂಡರೆ ಸುಖದಾಂಪತ್ಯ ನಿಮ್ಮದಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಮೊದಲನೇಯ ವಿಚಾರ, ಮಾತುಕತೆ. ಎಲ್ಲ ಜಗಳ ಶುರುವಾಗುವುದೇ ಮಾತಿನಿಂದ. ನಿಮ್ಮ ಮನಸ್ಸು ಚೆನ್ನಾಗಿದ್ದರೂ, ನಿಮ್ಮ ಸಮಯ ಚೆನ್ನಾಗಿಲ್ಲವೆಂದಲ್ಲಿ, ನೀವು ಏನು ಮಾತಾಡಿದರೂ, ಅದರಿಂದ ಜಗಳವಾಗುತ್ತದೆ. ಹಾಗಾಗಿ ಏನೇ ಜಗಳವಾದರೂ, ಏನೇ ಸಮಸ್ಯೆ ಬಂದರೂ, ಮಾತುಕತೆಯ ಮೂಲಕ ಅದನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ. ಆದರೆ ಅದು ಮಾತುಕತೆಯಾಗಿರಬೇಕೆ ಹೊರತು, ವಾದವಾಗಬಾರದು. ಮಾತು ಕತೆ ಗೆಲ್ಲಬಹುದು. ಆದರೆ ವಾದ ಗೆಲ್ಲುವುದಿಲ್ಲ. ಒಂದೊಮ್ಮೆ ವಾದ ಗೆದ್ದರೂ, ಅಲ್ಲಿ ಪ್ರೀತಿ ಗೆಲ್ಲುವುದಿಲ್ಲ. ಬದಲಾಗಿ ಅಹಂ ಗೆಲ್ಲುತ್ತದೆ.

ಎರಡನೇಯ ವಿಚಾರ. ಪ್ರೀತಿ ಇರಲಿ. ಈಗಿನವರಿಗೆ ಮೊದಲು ಅವರೇ ಬಂದು ಪ್ರೀತಿ ಮಾಡಲಿ ಎಂಬ ಈಗೋ ಸಮಸ್ಯೆ ಇದೆ. ಮೊದಲು ಪತ್ನಿಯೇ ಮಾತನಾಡಿದಲಿ, ಪ್ರೀತಿ ಮಾಡಲಿ. ಅಥವಾ ಪತಿಯೇ ಪ್ರೀತಿ ಮಾಡಲಿ ಎಂಬ ಈಗೋ ಇರುತ್ತದೆ. ಆದರೆ ಈ ಈಗೋವನ್ನು ಬಿಟ್ಟು ಪ್ರೀತಿ ಮಾಡಿದರೆ, ಜೀವನ ಉತ್ತಮವಾಗಿರುತ್ತದೆ. ಪ್ರೀತಿಯ ಜೊತೆ ಕ್ಷಮೆ ಕೇಳುವ ವಿಷಯದಲ್ಲೂ ನೀವು ಹೀಗೆ ಮಾಡಬೇಕು. ಮೊದಲು ಅವನೇ ಬಂದು ಕ್ಷಮೆ ಕೇಳಲಿ, ಅಥವಾ ಅವಳೇ ಬಂದು ಕ್ಷಮೆ ಕೇಳಲಿ ಎಂಬ ಮನೋಭಾವ ಬೇಡ. ನೀವಾಗೇ ಹೋಗಿ ಕ್ಷಮೆ ಕೇಳಿ. ದಾಂಪತ್ಯದಲ್ಲಿ ಈ ನಡುವಳಿಕೆ ಇದ್ದಲ್ಲಿ ಮಾತ್ರ ನೆಮ್ಮದಿಯ ಜೀವನ ಮಾಡಲು ಸಾಧ್ಯ.

ಮೂರನೇಯ ವಿಚಾರ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ನಂಬಿಕೆ ಇರಲಿ. ಪ್ರಾಮಾಣಿಕತೆಯೇ ಒಂದು ದಾಂಪತ್ಯವನ್ನು ಕಾಪಾಡುತ್ತದೆ. ಪತಿ-ಪತ್ನಿ ಮಧ್ಯೆ ಮೂರನೇಯವರು ಎಂದಿಗೂ ಬಾರದಂತೆ ನೋಡಿಕೊಳ್ಳಿ. ಇಬ್ಬರ ಪ್ರಾಮಾಣಿಕತನವೂ ನಿಮ್ಮ ದಾಂಪತ್ಯ ಜೀವನವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲದೇ, ಇಬ್ಬರ ಮಧ್ಯವೂ ನಂಬಿಕೆ ಎನ್ನುವ ಸೇತುವೆ ಗಟ್ಟಿಯಾಗಿರಲಿ. ಏನಾದರೂ ಕನ್ಫ್ಯೂಸ್ ಇದ್ದಲ್ಲಿ, ಅನುಮಾನ ಪಡುವ ಬದಲು, ನೇರವಾಗಿ ಕೇಳಿಬಿಡಿ. ಮಾತುಕತೆಯ ಮೂಲಕ ಅನುಮಾನ ಬಗೆಹರಿಸಿಕೊಳ್ಳಿ.

ನಾಲ್ಕನೇಯ ವಿಚಾರ. ಪರಸ್ಪರ ಗೌರವ ನೀಡಿ. ಪತಿಗೆ ಮತ್ತು ಪತಿಯ ಮನೆಯವರಿಗೆ ಪತ್ನಿ ಗೌರವಿಸಬೇಕು. ಅದೇ ರೀತಿ ಪತಿಯೂ ಕೂಡ ಪತ್ನಿಯನ್ನು ಮತ್ತು ಆಕೆಯ ಮನೆಯವರನ್ನು ಗೌರವಿಸಬೇಕು. ಯಾವಾಗ ಪತಿ- ಪತ್ನಿಯ ಇಬ್ಬರೂ ಪರಸ್ಪರ ಅವಮಾನಿಸುವುದು ಅಥವಾ ಅವರ ಮನೆಯವರನ್ನು ಹೀಯಾಳಿಸುವ ಪರಿಸ್ಥಿತಿ ಬರುತ್ತದೆಯೋ, ಆವಾಗಲೇ, ದಾಂಪತ್ಯದಲ್ಲಿ ಬಿರುಕು ಬರುತ್ತದೆ.

ಐದನೇಯ ವಿಚಾರ ಸೂಕ್ಷ್ಮತೆಯನ್ನು ಗಮನಿಸಿ, ಮಾತನಾಡುವುದನ್ನು ಕಲಿಯಿರಿ. ಹಲವು ಮನೆಗಳಲ್ಲಿ ಜಗಳವಾಗುವುದೇ, ಸಣ್ಣ ಸಣ್ಣ ಸೂಕ್ಷ್ಮತೆಯನ್ನು ಗಮನಿಸದೇ, ಮಾತನಾಡುವುದರಿಂದ. ನಿಮ್ಮ ಮಾತಿನಿಂದ ಇನ್ನೊಬ್ಬರ ಮನಸ್ಸು ನೋವಾಗಬಹುದು ಎಂಬುದನ್ನು ಗಮನದಲ್ಲಿಟ್ಟು ಮಾತನಾಡಿ. ಪತ್ನಿಗೆ ಸಪೋರ್ಟ್ ಮಾಡಿ ಮಾತನಾಡುವುದು, ನಿಮ್ಮ ತಾಯಿಗೆ ಹಿಡಿಸದೇ ಇರಬಹುದು. ಅಥವಾ ತಾಯಿಗೆ ಸಪೋರ್ಟ್ ಮಾಡಿ, ತನ್ನನ್ನು ತಮಾಷೆ ಮಾಡುವುದು ಪತ್ನಿಗೆ ಹಿಡಿಸದಿರಬಹುದು. ಹಾಗಾಗಿ ಅಂಥ ದುಸ್ಸಾಹಸಕ್ಕೆ ಕೈ ಹಾಕದೇ, ಇಬ್ಬರನ್ನೂ ನಿಭಾಯಿಸಿಕೊಂಡು ಹೋಗುವುದನ್ನು ಕಲಿಯಿರಿ.

ನುಗ್ಗೆಸೊಪ್ಪನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲ ಅತ್ಯುತ್ತಮ ಲಾಭಗಳೇನು..?

ಪುದೀನಾ ಎಲೆಯಲ್ಲೂ ಇದೆ ಆರೋಗ್ಯಕರ ಗುಣಗಳು..

ಬೇಧಿ ಶುರುವಾದಾಗ ಯಾವ ಆಹಾರ ತಿಂದರೆ ಉತ್ತಮ..?

- Advertisement -

Latest Posts

Don't Miss