Special Story: ಇಂದಿನ ಕಾಲದ ಸ್ವಾರ್ಥ ಜೀವನದಲ್ಲಿ ನಿಮಗೆ ಸಮಾಜ ಸೇವೆ ಮಾಡುವವರು ಸಿಗೋದು ತುಂಬಾನೆ ಅಪರೂಪ. ಹಾಗೆ ಸಿಗುವ ಅಪರೂಪದ ವ್ಯಕ್ತಿಗಳಲ್ಲಿ ಕನ್ನಿಕಾ ಅವರು ಕೂಡ ಒಬ್ಬರು.
ಈ ಫೋಟೋದಲ್ಲಿ ಕಾಣುತ್ತಿರುವ ಕನ್ನಿಕಾ ಅವರು, ಕಳೆದ 28 ವರ್ಷಗಳಿಂದ ನವೋದಯ ತರಬೇತಿ ಕೋಚಿಂಗ್ ಕೊಡುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಮೆಚ್ಚಿ ಸರ್ಕಾರ ಕಳೆದ ವರ್ಷ ನವೆಂಬರ್ 14ರಂದು ಪ್ರಶಸ್ತಿ ನೀಡಿತ್ತು. ಆ ಪ್ರಶಸ್ತಿಯಿಂದ ಬಂದ ಹಣವನ್ನು ಏನು ಮಾಡಬೇಕು ಎಂದು ಯೋಚಿಸಿದಾಗ, ಇವರಿಗೆ ಶಾಲೆಗಳಲ್ಲಿ ಭಿತ್ತಿ ಚಿತ್ರಗಳನ್ನು ಬಿಡಿಸಲು ಈ ಹಣ ಬಳಸಬೇಕು ಎಂದು ಅನ್ನಿಸಿತ್ತಂತೆ.
ಹಾಗಾಗಿ ಕನ್ನಿಕಾ ಅವರು ಶಾಲೆಯಲ್ಲಿ ತಾವೇ ಹಣ ಖರ್ಚು ಮಾಡಿ, ಭಿತ್ತಿ ಚಿತ್ರಗಳನ್ನು ಬರೆಸಿದ್ದಾರೆ. ಅಲ್ಲದೇ, ಬಣ್ಣ ಅಳೆದು ಹೋಗಿರುವ ಶಾಲೆಗಳಿಗೆ ಪೇಂಟ್ ಕೂಡ ಮಾಡಿಸಿದ್ದಾರೆ. ಪ್ರಶಸ್ತಿಯಲ್ಲಿ ಸಿಕ್ಕ 25 ಸಾವಿರ ಹಣದೊಂದಿಗೆ ತಮ್ಮ 10 ಸಾವಿರ ರೂಪಾಯಿಯನ್ನು ಸೇರಿಸಿ, ಕನ್ನಿಕಾ ಅವರು ಈ ಉತ್ತಮ ಕೆಲಸ ಮಾಡಿದ್ದಾರೆ.
ಇದೇ ರೀತಿ ಒಂದೊಂದು ವರ್ಷ, ಒಂದೊಂದು ಶಾಲೆಗೆ ಪೇಂಟಿಂಗ್ ಮಾಡಿಸಬಾರದು ಅಂತಾ ಯೋಚಿಸಿ, ನಿರ್ಧಾರ ಕೈಗೊಂಡ ಕನ್ನಿಕಾ, ತಮ್ಮ ಬರ್ತಡೇಯಂದೇ, ಒಂದು ಸರ್ಕಾರಿ ಶಾಲೆಗೆ ಪೇಂಟ್ ಮಾಡಿಸಬೇಕೆಂದಿದ್ದಾರೆ. ಈ ವರ್ಷ, ಮಂಡ್ಯದ ಸರ್ಕಾರಿ ಶಾಲೆಯೊಂದಕ್ಕೆ ಕನ್ನಿಕಾ ಅವರು ಬಣ್ಣ ಹಚ್ಚಿಸಬೇಕೆಂದು ನಿರ್ಧರಿಸಿದ್ದರು. ಈಗಾಗಲೇ ಕೆಲಸವೂ ಶುರುವಾಗಿದೆ.
ಕನ್ನಿಕಾ ಅವರಿಗೆ 19 ವರ್ಷವಿದ್ದಾಗ, ಅವರು ನವೋದಯ ತರಬೇತಿ ಮಾಡಬೇಕು ಎಂದು ನಿರ್ಧರಿಸಿದ್ದು. ಮೊದಲು ಸ್ವಲ್ಪ ಸ್ವಲ್ಪ ಮಕ್ಕಳಿಗೆ ಫ್ರೀಯಾಗಿ ತರಬೇತಿ ನೀಡುತ್ತಿದ್ದರು. ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ, ಶಿಕ್ಷಕರ ಅವಶ್ಯಕತೆ ಇದೆ ಎನ್ನಿಸಿ, ಫೀಸ್ ಇರಿಸಿ, ತರಬೇತಿ ನೀಡಲಾಯಿತು. ನವೋದಯ ಶಾಲೆಯಲ್ಲಿ ಪ್ರತೀ ವರ್ಷ 80 ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಶೇಖಡಾ 50ರಷ್ಟು ಅಂದ್ರೆ, 40ರಿಂದ 45 ಮಕ್ಕಳು ನಮ್ಮ ಕೇಂದ್ರದಿಂದಲೇ ಸೆಲೆಕ್ಟ್ ಆಗುತ್ತಿದ್ದಾರೆ.
ಈ ಕಾರಣಕ್ಕಾಗಿ ಕನ್ನಿಕಾಾ ಅವರಿಗೆ ರಾಜ್ಯ ಸರ್ಕಾರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನೂ ನೀಡಿದೆ. ಇಷ್ಟೇ ಅಲ್ಲದೇ, ಮೋರಾರ್ಜಿ ಶಾಲೆ ವಿದ್ಯಾರ್ಥಿಗಳಿಗೂ ಕನ್ನಿಕಾ ಅವರು ತರಬೇತಿ ನೀಡಿದ್ದಾರಂತೆ. ಇದರೊಂದಿಗೆ ಕನ್ನಿಕಾ ಸಾಹಿತ್ಯ ಕೃಷಿಯನ್ನು ಸಹ ಮಾಡಿದ್ದಾರೆ. ಈವರೆಗೆ ಅವನರ 18 ಪುಸ್ತಕಗಳು ಬಿಡುಗಡೆಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಕನ್ನಿಕಾ ಅವರು ಭಾಗವಹಿಸಿದ್ದಾರೆ. ನಗರ ಸಮ್ಮೇಳನ ಸರ್ವಾಧ್ಯಕ್ಷೆಯಾಗುವ ಅವಕಾಶ ಕೂಡ ಕನ್ನಿಕಾ ಅವರಿಗೆ ಸಿಕ್ಕಿದೆ.
ಇಷ್ಟೇ ಅಲ್ಲದೇ, ಕನ್ನಡ ಎಂಬ ಪದವನ್ನು ಪೊಸ್ಟ್ ಕಾರ್ಡ್‌ನಲ್ಲಿ ಎರಡು ಸಾವಿರ ಸಲ ಬರೆದು ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದ್ದಾರೆ. ವಿಶೇಷ ಚೇತನರಿಗಾಗಿ ಕವಿ ಗೋಷ್ಠಿ ಮತ್ತು ಮಕ್ಕಳ ಗೋಷ್ಠಿಯನ್ನು ಸಹ ನಡೆಸುತ್ತಾರೆ. ಬಡ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಸಮಾಜಕ್ಕೆ ಸಹಾಯವಾಗುವಂಥ ಹಲವು ಕೆಲಸಗಳನ್ನು ಕನ್ನಿಕಾ ಅವರು ಮಾಡಿದ್ದು, ಈ ಮೂಲಕ ಹಲವರಿಗೆ ಕನ್ನಿಕಾ ಅವರು ಮಾದರಿಯಾಗಿದ್ದಾರೆ.
ಪಾಕ್ ನಟಿಗೆ ಮೆಸೇಜ್ ಮಾಡುತ್ತಿದ್ದಾರಂತೆ ಶೋಯೇಬ್ ಮಲ್ಲಿಕ್.. 3ನೇ ಪತ್ನಿ ಸನಾ ಫುಲ್ ಟ್ರೋಲ್