Saturday, July 27, 2024

Latest Posts

ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು..

- Advertisement -

Movie news: 8 ವರ್ಷದ ಬಾಲಕಿಯನ್ನು ದತ್ತು ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡನನ್ನು ಪೊಲೀಸರು ಬಂಧಿಸಿ, ಕೆಲ ದಿನಗಳ ಕಾಲ ಜೈಲಿನಲ್ಲಿ ಇರಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಸಿಕ್ಕಿದೆ. ಇಂದು ಅಥವಾ ನಾಳೆ ಸೋನುಗೌಡ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಮಗುವನ್ನು ದತ್ತು ಪಡೆಯುವ ವಿಷಯಕ್ಕೆ ಸಂಬಂಧಿಸಿದಂತೆ ಸೋನುಗೌಡ, ಕಾನೂನು ಪಾಲನೆ ಮಾಡದೇ ದತ್ತು ಪಡೆದಿದ್ದರು. ಆ ಮಗುವಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದಿದ್ದರು. ಆ ಮಗುವಿನೊಂದಿಗೆ ವ್ಲಾಗ್ ಮಾಡುತ್ತ, ನಾನಿಂದು ಆ ಮಗುವಿಗೆ ಅದನ್ನು ತೆಗೆಸಿಕೊಟ್ಟೆ, ಇದನ್ನು ತೆಗೆಸಿಕೊಟ್ಟೆ, ಏನೇನು ಕಲಿಸಿದೆ ಎಂಬ ಬಗ್ಗೆ ವ್ಲಾಗ್ ಮಾಡುತ್ತಿದ್ದರು.

ಅಲ್ಲದೇ, ಈ ಮಗುವಿನಿಂದಾಗಿ, ನನಗೆ ಪಾಸಿಟಿವ್ ಕಾಮೆಂಟ್ಸ್ ಬರುತ್ತಿದೆ ಎಂದೆಲ್ಲ ಹೇಳಿದ್ದರು. ಆದರೆ ಈ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಹೋಗಿದ್ದು, ಆಕೆ ಮಗುವನ್ನು ಪೋಷಕರಿಂದ ತೆಗೆದುಕೊಳ್ಳುವ ವೇಳೆ, ಕಾನೂನು ಪಾಲನೆ ಮಾಡಿಲ್ಲವೆಂದು ತಿಳಿದು ಬಂದಿದೆ. ಅಲ್ಲದೇ, ಹೀಗೆ ದತ್ತು ಪಡೆದ ಮಗುವನ್ನು ಎಲ್ಲಿಯೂ ತೋರಿಸುವಂತಿಲ್ಲ. ಆ ಮಗುವಿಗೆ ತಕ್ಕ ವಯಸ್ಸಾದಾಗ, ಮಾತ್ರ ಅದನ್ನು ಸಮಾಜಕ್ಕೆ ಪರಿಚಯಿಸಬೇಕು. ಇಲ್ಲದಿದ್ದರೆ, ಅದರಿಂದ ಆ ಮಗುವಿಗೆ ತೊಂದರೆಯಾಗುತ್ತದೆ ಎಂದು ಹೇಳಲಾಗಿದೆ.

ಹೀಗಾಗಿ ಈ ಎಲ್ಲ ಕ್ರಮ ಪಾಲಿಸದಿದ್ದಕ್ಕೆ ಸೋನು ಗೌಡಗೆ ಜೈಲು ಶಿಕ್ಷೆಯಾಗಿತ್ತು. ಬಾಲಕಿಯ ಊರಾದ ಬಾಗಲಕೋಟೆಯ ಕಾಚಾಪುರಕ್ಕೆ ಸೋನುವನ್ನು ಕರೆದೊಯ್ದು, ವಿಚಾರಣೆ ನಡೆಸಲಾಗಿತ್ತು. ಆದರೆ ಆಕೆಯ ಪೋಷಕರು ನಾವು ನಮ್ಮ ಮಗಳನ್ನು ದತ್ತು ನೀಡಿರಲಿಲ್ಲ. ಸ್ವಲ್ಪ ದಿನ ಆಕೆಯೊಂದಿಗೆ ಇರಲು ಬಿಟ್ಟಿದ್ವಿ ಅಷ್ಟೇ ಎಂದಿದ್ದಾರೆ. ಇದೀಗ ಸೋನು ಗೌಡಗೆ ಜಾಮೀನು ಸಿಕ್ಕು, ಆಕೆಗೆ ಜೈಲಿನಿಂದ ಮುಕ್ತಿ ಸಿಗಲಿದೆ.

ಬಾಲಿವುಡ್ ಖಾನ್‌ಗಳ ಬಗ್ಗೆ ತಮಾಷೆ ಮಾಡಿದ ಪಾಕ್ ನಟಿ..

ನಟಿ ಶರಣ್ಯ ವಿರುದ್ಧ ಕೊ*ಲೆ ಬೆದರಿಕೆ ಆರೋಪ: ಪ್ರಕರಣ ದಾಖಲು

- Advertisement -

Latest Posts

Don't Miss