Movie News: ಹೆಬ್ಬುಲಿ ನಟಿ ಅಮಲಾ ಪೌಲ್ ಸಂಪ್ರದಾಯದ ಪ್ರಕಾರ ಸೀಮಂತ ಮಾಡಿಕೊಂಡಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಮಲಾ ಪೌಲ್, ಗುಜರಾತ್‌ನ ಸೂರತ್‌ನಲ್ಲಿ ತಮ್ಮ ಸೀಮಂತ ಮಾಡಿಕೊಂಡಿದ್ದಾರೆ.
ಸೀಮಂತದ ಫೋಟೋವನ್ನು ಅಮಲಾಪೌಲ್ ಶೇರ್ ಮಾಡಿಕೊಂಡಿದ್ದು, ಅಮಲಾ ಮುದ್ದುಮುದ್ದಾಗಿ ಕಾಣುತ್ತಿದ್ದಾರೆ. ಕೆಂಪು ಬಾರ್ಡರ್ ಬಿಳಿ ಸೀರೆ ಉಟ್ಟಿರುವ ಅಮಲಾ, ಗುಜರಾತಿ ಶೈಲಿಯಲ್ಲಿ ರೆಡಿಯಾಗಿದ್ದಾರೆ. ಪತಿ ಜಗತ್ ದೇಸಾಯಿ ಬಿಳಿ ಕುರ್ತಾದಲ್ಲಿ ಮಿಂಚಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ ವಿವಾಹವಾಗಿದ್ದ ಅಮಲಾ ಪೌಲ್, ತಿಂಗಳು ತುಂಬುವುದರಲ್ಲೇ ತಾವು ಗರ್ಭಿಣಿ ಎಂಬ ವಿಷಯವನ್ನು ಹಂಚಿಕೊಂಡಿದ್ದರು. ಹೀಗಾಗಿ ಹಲವರು ಅಮಲಾ ಪೌಲ್, ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದರೆಂದು ಹಲವರು ಅಂದಾಜಿಸಿದ್ದಾರೆ. ಇನ್ನು ಕೆಲವರು ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದು, ತಾಯಿಯಾದ ಬಳಿಕ ವಿವಾಹವಾಗಿದ್ದಾರೆಂದು ಹೇಳಿದ್ದಾರೆ.
ಆರ್‌ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ದರ್ಶನ್ ಫ್ಯಾನ್ಸ್: ನೆಟ್ಟಿಗರು ಗರಂ
ಮಗು ದತ್ತು ಪಡೆದ ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು..