Movie News: ಯೂಟ್ಯೂಬ್ನಲ್ಲಿ ಚಿತ್ರ ವಿಚಿತ್ರವಾಗಿ ಅರಚಾಡುತ್ತ. ಸಿಟ್ಟಿನಲ್ಲಿ ಸಿನಿಮಾ ವಿಮರ್ಷೆಯನ್ನು ಮಾಡಿ, ಇದ್ದದ್ದನ್ನು ಇದ್ದ ಹಾಗೆ ಹೇಳುತ್ತಿದ್ದ ಯೂಟ್ಯೂಬರ್ ಆ್ಯಂಗ್ರಿ ರ್ಯಾಂಟ್ಮ್ಯಾನ್ ಖಾಯಿಲೆಯಿಂದ ಬಳಲಿ ಸಾವನ್ನಪ್ಪಿದ್ದಾರೆ.
ಆ್ಯಂಗ್ರಿ ರ್ಯಾಂಟ್ಮ್ಯಾನ್ ನಿಜವಾದ ಹೆಸರು ಅಭ್ರದೀಪ್ ಸಹಾ(27). ಇವರ ಯೂಟ್ಯೂಬ್ನಲ್ಲಿ 4 ಲಕ್ಷಕ್ಕೂ ಅಧಿಕ ಸಬ್ಸ್ಕ್ರೈಬರ್ಸ್ ಇದ್ದರು. ಇವರು ಎಲ್ಲಾ ಭಾಷೆಯ ಪ್ರಸಿದ್ಧ ಸಿನಿಮಾವನ್ನು ನೋಡಿ, ಅದರ ರಿವ್ಯೂ ಹೇಳುತ್ತಿದ್ದರು. ಆದರೆ ಇವರ ಆರೋಗ್ಯ ಇದ್ದಕ್ಕಿದ್ದಂತೆ ಹಾಳಾಗಿ, ಇವರು ಕಳೆದ ಕೆಲ ತಿಂಗಳಿನಿಂದ ಹಾಸಿಗೆ ಹಿಡಿದಿದ್ದರು. ಶಸ್ತ್ರ ಚಿಕಿತ್ಸೆಯೂ ನಡೆದಿತ್ತು.
11 ದಿನಗಳಿಂದ ಅಭ್ರದೀಪ್ರನ್ನು ಐಸಿಯುನಲ್ಲಿ ಇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದೆರಡು ದಿನಗಳ ಹಿಂದೆ ಅವರನ್ನು ಸಪೋರ್ಟ್ ಸಿಸ್ಟಮ್ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ಇವರ ಸಾವಿನ ಸುದ್ದಿ ಇವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಆಗಿದ್ದು, ಇವರ ಸಾವಿಗೆ ಹಲವರು ಸಂತಾಪ ಸೂಚಿಸಿದ್ದಾರೆ.
ಮತದಾರರಿಗೆ ಹಂಚಲು ತಂದಿದ್ದ 18 ಕೋಟಿ ರೂಪಾಯಿ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು
ಅವರು ಬಂದಿದ್ದು ಗೊತ್ತಾಗಲ್ಲ, ಹೋಗಿದ್ದು ಗೊತ್ತಾಗಲ್ಲ: ರಾಹುಲ್ ರಾಜ್ಯ ಪ್ರವಾಸದ ಬಗ್ಗೆ ಪ್ರಜ್ವಲ್ ಮಾತು




