Wednesday, December 4, 2024

Latest Posts

ಮೊಬೈಲ್ಗೆ ಅಡಿಕ್ಟ್ ಆಗಿದ್ದೀರಾ..? ಎಚ್ಚರ ಎಚ್ಚರ..

- Advertisement -

Health Tips: ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡದಿದ್ದರೂ, ಮೊಬೈಲ್‌ ಮಾತ್ರ ಸದಾಕಾಲ ನಮ್ಮೊಂದಿರಬೇಕು. ಅದಕ್ಕೂ ತಿಂಗಳಿಗೊಮ್ಮೆ ಸರಿಯಾಗಿ ರಿಚಾರ್ಜ್ ಮಾಡಿಸುವ ಮೂಲಕ ಊಟ ಮಾಡಿಸಬೇಕು. ಯಾವುದನ್ನೂ ಬಿಟ್ಟಿದ್ದರೂ, ಮೊಬೈಲ್ ಬಿಟ್ಟು ಇರದಷ್ಟು ಇಂದಿನ ಜನ ಅದಕ್ಕೆ ಅಡಿಕ್ಟ್ ಆಗಿದ್ದಾರೆ. ಇದರೆಂದು ಏನೇನು ಹಾನಿಯಾಗುತ್ತದೆ ಅನ್‌ನೋ ಬದ್ದೆ ಮನೋವೈದ್ಯರಾದ ಶ್ರೀಧರ್ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ.

ಇಂದಿನ ಕಾಲದಲ್ಲಿ ಹಿರಿಯರು ಹೇಳುವುದು ಏನೆಂದರೆ, ಊಟ ಬಿಟ್ಟು ಉಪವಾಸ ಮಾಡುವ ಬದಲು, ಮೊಬೈಲ್ ಬಿಟ್ಟು ಉಪವಾಸ ಮಾಡಿ ಎಂದು. ಮೊದಲೆಲ್ಲ ಇನ್ನೊಬ್ಬರಿಗೆ ಕಾಲ್ ಮಾಡಲು ಮಾತ್ರ, ಮೊಬೈಲ್ ಉಪಯೋಗಿಸುತ್ತಿದ್ದರು. ಆದರೆ ಈಗ ತರಹೇವಾರಿ ಆ್ಯಪ್‌ಗಳು ಬಂದಿದೆ. ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಎಲ್ಲವೂ ಇದೆ. ಇದರಲ್ಲಿ ಒಂದೊಂದು ಖಾತೆ ತೆರೆದು, ಅದರಲ್ಲಿ ಬರುವ ಪೋಸ್ಟ್‌ಗಳನ್ನು ನೋಡುತ್ತಾ, ಸ್ವೈಪ್ ಮಾಡುತ್ತಿದ್ದರೆ, ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ.

ಇನ್ನು ಕೆಲವರು ಡ್ರೈವ್ ಮಾಡುತ್ತಾ, ಮೊಬೈಲ್‌ನಲ್ಲಿ ಮಾತನಾಡುತ್ತಾ ಹೋಗುತ್ತಾರೆ. ಎಷ್ಟೋ ಕೇಸ್‌ಗಳಲ್ಲಿ ಅಪಘಾತವಾಗಿರುವುದೇ ಈ ಕಾರಣಕ್ಕೆ. ಹಾಗಾಗಿ ವಾಹನ ಚಲಾಯಿಸುವಾಗ, ಮೊಬೈಲ್ ಬಳಸಬಾರದು ಅಂತಾ ಹೇಳಲಾಗುತ್ತದೆ. ಇನ್ನು ಮೊಬೈಲ್ ಬಳಕೆ ಕೂಡ ಕೆಟ್ಟ ಚಟವಾಗಿದೆ. ಇಂದಿನ ಕಾಲದಲ್ಲಿ ಯಾರೂ ಕೂಡ ಸ್‌ಮಾರ್ಟ್ ಫೋನ್ ಇಲ್ಲದೇ, ಜೀವನ ಮಾಡುವುದೇ ಇಲ್ಲ. ಎಷ್ಟೋ ವೃದ್ಧರೂ ಕೂಡ, ಮೊಬೈಲ್ ಹಾಳಾದ ತಕ್ಷಣ, ಅಥವಾ ಕಳೆದು ಹೋದಲ್ಲಿ, ಹೊಸ ಮೊಬೈಲ್ ತೆಗೆದುಕೊಳ್ಳಲೇಬೇಕೆಂದು ಚಡಪಡಿಸುತ್ತಾರೆ. ಆದರೆ ಇದು ಕೆಟ್ಟ ಚಟವಾಗಿ ಪರಿಣಮಿಸುತ್ತದೆ. ಇದು ನಮ್ಮ ಉತ್ತಮ ಗುಣಗಳನ್ನು, ನಮ್ಮ ಸಮಸ್ಯೆಗೆ ಪರಿಹಾರಗಳನ್ನು ಮುಚ್ಚಿಹಾಕಿ, ನಮ್ಮ ಸಮಯ ಹಾಳು ಮಾಡಲು ಇದು ಅನಾನುಕೂಲ ಮಾಡಿಕೊಡುತ್ತದೆ ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

ಈ ಚಟ್ನಿ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ..

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 1

ಸೀಬೆ ಹಣ್ಣಿನ ಸೇವನೆಯಿಂದ ಎಂಥೆಂಥ ಅತ್ಯುತ್ತಮ ಆರೋಗ್ಯ ಲಾಭಗಳಾಗುತ್ತದೆ ಗೊತ್ತಾ..? ಭಾಗ 2

- Advertisement -

Latest Posts

Don't Miss