ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಇದೀಗ ಬಸ್ ಪ್ರಯಾಣದರವನ್ನ ಏರಿಕೆ ಮಾಡಲು ಚಿಂತನೆ ಮಾಡಿದ್ದು, ಜೂನ್ ತಿಂಗಳಿನಿಂದ ನೂತನ ಬೆಲೆ ಜಾರಿಗೆ ಬರಲಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಪ್ರಯಾಣದರ ಇನ್ನು ಮುಂದೆ ಹೆಚ್ಚಳವಾಗಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕೆಲದಿನಗಳ ಹಿಂದೆ ಶೇ.18...
ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ 2ನೇ ಬಾರಿಗೆ ಅಧಿಕಾರ ಹಿಡಿಯಲು ನರೇಂದ್ರ ಮೋದಿ ಸಜ್ಜಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಆದ್ರೆ ಈ ಬಾರಿ ಸಂಪುಟದಲ್ಲಿ ಮೋದಿ ಯಾರನ್ನೆಲ್ಲಾ ಸೇರಿಸಿಕೊಳ್ತಾರೆ ಅನ್ನೋ ಬಗ್ಗೆ ಇದೀಗ ಬಿಸಿ ಬಿಸಿ ಚರ್ಚೆ ನಡೀತಿದೆ.
ಈ ಬಾರಿ ಮಂತ್ರಿಯಾಗೋ ಭಾಗ್ಯ ಯಾರಿಗೆ ಅಂತ ನೋಡೋದಾದ್ರೆ, ಚುನಾವಣೆಯಲ್ಲಿ...
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ
ಅಭ್ಯರ್ಥಿ ನಿಖಿಲ್ ಕುಮಾರ್ ಸೋಲಿನಿಂದ ಬೇಸರಗೊಂಡ ಅಭಿಮಾನಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋತಿರುವ ನಿಖಿಲ್ ಗೌಡ ಅಭಿಮಾನಿಯೊಬ್ಬ ನಿಖಿಲ್ ಸೋತಿದ್ದಾರೆ, ಹೀಗಾಗಿ ಅವರಿಗಾಗಿ ಮತದಾನ ಮಾಡಿ ಶಾಹಿ ಹಾಕಿಸಿಕೊಂಡ ಬೆರಳೇ ಇರಬಾರದು ಅಂತ ತಮ್ಮ ಬೆರಳನ್ನೇ ಕತ್ತರಿಸಿಕೊಂಡಿದ್ದಾನಂತೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ...
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡ ವಿರುದ್ಧ ಗೆಲುವು ಸಾಧಿಸಿರೋ
ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ಕಾರಣ ಏನು ಅನ್ನೋದನ್ನ
ಬಿಚ್ಚಿಟ್ಟಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಬಸವರಾಜು, ನನ್ನ ಗೆಲುವಿಗೆ ದೇವೇಗೌಡರು ವರವಾದ್ರು. ಒಂದುವೇಳೆ ಮುದ್ದಹನುಮೇಗೌಡರು ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು. ಆದರೆ ಗೌಡರು ಸ್ಪರ್ಧೆ ಮಾಡಿದ್ದರಿಂದ ನನಗೆ ಇನ್ನೂ ಸುಲಭವಾಯ್ತು ಅಂತ...
ಗುಜರಾತ್ : ಸೂರತ್ ನಗರದ ವಾಣಿಜ್ಯ ಸಂಕೀರ್ಣದಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಸುಮಾರು 20 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ತಕ್ಷಶಿಲಾ ಆರ್ಕೇಡ್ ನಲ್ಲಿ ಈ ಅಘಡ ನಡೆದಿದೆ. 4 ಅಂತಸ್ಥಿನ ಈ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ನಲ್ಲಿ ತೀವ್ರ ತರದ ಬೆಂಕಿ ಕಾಣಿಸಿಕೊಂಡಿದೆ. ಕ್ಷಣ ಮಾತ್ರದಲ್ಲಿ...
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಅಭಿನಂದನೆ ತಿಳಿಸಿದ್ದಾರೆ. ಇಂದು ಟ್ವೀಟ್ ಮಾಡಿರುವ ಕೊಹ್ಲಿ, “ಅಭಿನಂದನೆಗಳು ಮೋದಿಜಿ, ನಿಮ್ಮ ದೂರದೃಷ್ಟಿಯ ಮೂಲಕ ಭಾರತ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಿರಿ ಎಂದು ನಾವು ನಂಬಿದ್ದೇವೆ. ಜೈ ಹಿಂದ್” ಅಂತ ಬರೆದುಕೊಂಡಿದ್ದಾರೆ.
https://twitter.com/imVkohli/status/1131823451755425792
ಟೀಮ್...
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲನುಭವಿಸಿದ ಮೈತ್ರಿ ಪಕ್ಷಗಳಿಗೆ ಮುಖಭಂಗವಾಗಿದೆ.ಇನ್ನು ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ವಿಮರ್ಶೆ ಹೊರತುಪಡಿಸಿ ಕೆಲ ಜ್ಯೋತಿಷಿಗಳು ಹಾಗೂ ತೆಂಗಿನ ಕಾಯಿ ಕೂಡ ಭವಿಷ್ಯ ನುಡಿದಿತ್ತು. ಈ ಪೈಕಿ ತೀರಾ ಆಸಕ್ತಿ ಕೆರಳಿಸಿದ್ದೇ ದ್ವಾರಕಾನಾಥ್ ಗುರೂಜಿ ಸಿಎಂ ಕುಮಾರಸ್ವಾಮಿಗೆ ನುಡಿದಿದ್ದ ಭವಿಷ್ಯ.
ಚುನಾವಣೆಗೂ ಮುನ್ನ ಸಾಕಷ್ಟು ದೇವಸ್ಥಾನ, ಪೂಜೆ ಪುನಸ್ಕಾರಗಳನ್ನು ಮಾಡಿದ್ದ...
ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವಿನ ಹಿನ್ನೆಲೆಯಲ್ಲಿ ಸಿಎಂಗೆ ಬಿಜೆಪಿ
ಮುಖಂಡ ಸಿ.ಟಿ ರವಿ ಸಲಹೆ ನೀಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್-ಜೆಡಿಎಸ್ ಗೆ ಒಂದೊಂದು ಕ್ಷೇತ್ರದ ಸಮಪಾಲು ಅಲ್ಲ, ಸಮಪಾಲು ಮನೆಹಾಳು ಎಂಬ ಸ್ಥಿತಿಗೆ ಬಂದಿದ್ದಾರೆ. ಹೀಗಾಗಿ ಸಿಎಂ ನೈತಿಕ ಹೊಣೆ ಹೊತ್ತು, ರಾಜೀನಾಮೆ ನೀಡಬೇಕು ಎಂದು ಟೀಕೆ ಮಾಡಿದರು.
ಇನ್ನು...
ಬೆಂಗಳೂರು: ಸರ್ಕಾರ ಬಿದ್ದು ಹೋಗಲಿದೆ ಅನ್ನೋದೆಲ್ಲಾ ಸುಳ್ಳು,
ನಮ್ಮ ಸರ್ಕಾರ ಸುಭದ್ರವಾಗಿರುತ್ತೆ ಅಂತ ಡಿಸಿಎಂ ಡಾ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಎಂ,ಡಿಸಿಎಂ,ಸಚಿವರು ಜಂಟಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಫಲಿತಾಂಶ ಬಂದ ಮೇಲೆ ಸರ್ಕಾರ ಬಿದ್ದು ಹೋಗಲಿದೆ ಎಂಬ ಹೇಳಿಕೆ ಕೇಳಿಬರುತ್ತಿದೆ. ಸಿಎಂ ಆಡಳಿತದ ಬಗ್ಗೆ ಯಾವುದೇ ಅನುಮಾನ ಬೇಡ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ...
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ
ಸುಮಲತಾ ಮೇ 29ರಂದು ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ರು. ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸೋ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಹೇಳ್ತೀನಿ. ಅವತ್ತೇ ಅಂಬರೀಶ್ ಹುಟ್ಟು ಹಬ್ಬ ಇರೋದ್ರಿಂದ...