Friday, November 22, 2024

Latest Posts

ಮುಖದ ಸೌಂದರ್ಯಕ್ಕಾಗಿ ಆಯುರ್ವೇದಿಕ್ ಟಿಪ್ಸ್..!

- Advertisement -

Beauty tips:

ಇತ್ತೀಚೆಗೆ ಸ್ಕಿನ್‌ಕೇರ್ ಸ್ಪೆಷಲಿಸ್ಟ್(SDSS) ಅಧ್ಯಯನದ ವರದಿ ಪ್ರಕಾರ ಶೇಕಡ 88ರಷ್ಟು ,ಮಹಿಳೆಯರಿಗೆ ತಮ್ಮ ಚರ್ಮದ ಸುರಕ್ಷತೆಗೆ ಉತ್ತಮವಾದ ಪ್ರಾಡಕ್ಟ್ ಯಾವುದು ಎಂಬುದೇ ತಿಳಿದಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಕೇವಲ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳು ಮಾತ್ರವಲ್ಲದೆ ಮನೆಯಲ್ಲೇ ತಮ್ಮ ಚರ್ಮದ ರಕ್ಷಣೆ ಮಾಡಬಹುದು. ಆದರೆ ಅವುಗಳನ್ನು ಬಳಸಿಕೊಳ್ಳುವ ವಿಧಾನ ನಿಮಗೆ ತಿಳಿದಿರಬೇಕು. ಹಲವು ಕಾರಣಗಳಿಂದ ನಿಮ್ಮ ಸ್ಕಿನ್ ಮತ್ತು ದೇಹದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತಿದೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರವನ್ನು ತಿಳಿದುಕೊಳ್ಳೋಣ.

ಚರ್ಮದ ಅಂದವನ್ನು ಕಾಪಾಡಲು ಆಯುರ್ವೇದ ಜೀವನ ಶೈಲಿ ಅತ್ಯುತ್ತಮವಾದದ್ದು. ಇದು ನೈಸರ್ಗಿಕವಾಗಿ ಸ್ಫೂರ್ತಿದಾಯಕವಾಗಿದೆ .ಕೇವಲ ಗಿಡಮೂಲಿಕೆಗಳ ಪರಿಹಾರ ಮಾತ್ರವಲ್ಲದೇ ನಿಮ್ಮ ಜೀವನಶೈಲಿಯೂ ಅತ್ಯುತ್ತಮವಾಗಿರಬೇಕು. ಹಾಗಾದರೆ ನಿಮ್ಮ ಸಹಜ ಸೌಂದರ್ಯಕ್ಕಾಗಿ ವಿಶೇಷವಾಗಿ ಚರ್ಮದ ಅಂದವನ್ನು ಕಾಪಾಡುವ ಕೆಲವು ಸಲಹೆಗಳನ್ನು ತಿಳಿದುಕೊಳ್ಳೋಣ.

ನಿದ್ರೆ:
ರಾತ್ರಿ ಬೇಗ ನಿದ್ದೆ ಮಾಡುವುದರಿಂದ ಆರೋಗ್ಯ ಮತ್ತು ಜ್ಞಾಪಕ ಶಕ್ತಿ ಉತ್ತಮವಾಗಿರುವುದಲ್ಲದೇ, ನಿಮ್ಮ ಸೌಂದರ್ಯವನ್ನು ಇದು ಕಾಪಾಡುತ್ತದೆ. ತಡವಾಗಿ ನಿದ್ರೆ ಮಾಡುವುದರಿಂದ ಚರ್ಮದ ಕಾಂತಿ ಕಡಿಮೆಯಾಗಿ ಹೆಚ್ಚು ವಯಸ್ಸಾದಂತೆ ಕಾಣುತ್ತಾರೆ.

ಹೊಂದಾಣಿಕೆ ಅಲ್ಲದ ಆಹಾರವನ್ನು ಮಿಕ್ಸ್ ಮಾಡಿ ತಿನ್ನಬೇಡಿ:
ಆಹಾರ ಹೊಟ್ಟೆ ತುಂಬಲು ಮಾತ್ರವಲ್ಲದೇ ನಿಮ್ಮ ದೇಹಕ್ಕೆ ಮೆಡಿಸನ್ ಕೂಡ ಹೌದು. ಆದರೆ ಹೊಂದಾಣಿಕೆಯಲ್ಲದ ಆಹಾರ ಕ್ರಮವನ್ನು ಅನುಸರಿಸಿದರೆ ಅದು ವಿಷವಾಗಿ ಪರಿವರ್ಥನೆ ಯಾಗುತ್ತದೆ .

1.ಹಣ್ಣು ಮತ್ತು ಹಾಲು – ಇವೆರಡರ ಕಾಂಬಿನೇಷನ್ ಯೋಗ್ಯ ಆಹಾರವಲ್ಲ. ಕಾರಣ ಹಣ್ಣುಗಳು ಬೇಗ ಜೀರ್ಣವಾಗುತ್ತದೆ ಹಾಲು ಜೇರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗೂ ನೀವು ಹಣ್ಣು ಮತ್ತು ಹಾಲು ಮಿಶ್ರಿತವಾಗಿ ಸೇವನೆ ಮಾಡಿದರೆ ಅಸಿಡಿಟಿಗೆ ಕಾರಣವಾಗುತ್ತದೆ.

2. ಕೂಲ್ ಡ್ರಿಂಕ್ಸ್ – ಊಟದ ನಂತರ ಕೂಲ್ ಡ್ರಿಂಕ್ಸ್ ಮತ್ತು ಐಸ್ ಐಟೆಮ್‌ಗಳನ್ನು ಸೇವಿಸದ್ದಿದ್ದರೆ ಒಳ್ಳೆಯದು ಇದು ನಿಮ್ಮ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುವುದಲ್ಲದೇ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ  ದಾರಿ ಮಾಡಿಕೊಡುತ್ತದೆ .

3. ತುಪ್ಪ ಮತ್ತು ಜೇನುತುಪ್ಪ – ಇವೆರಡು ದೇಹದಲ್ಲಿ ಪರಸ್ಪರ ವಿರೋಧಾತ್ಮಕ ಪ್ರಕ್ರಿಯೆಗಳನ್ನು ಉಂಟುಮಾಡುತ್ತವೆ. ತುಪ್ಪ ದೇಹವನ್ನು ತಂಪಾಗಿ ಇಟ್ಟರೆ, ಜೇನುತುಪ್ಪ ಉಷ್ಣತೆಯನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ಆರೋಗ್ಯ ಸ್ಥಿತಿ ಸಮತೋಲನ ಕಳೆದುಕೊಳ್ಳುತ್ತದೆ .

ಟೀ ಸೇವನೆ: ನೀರು ಮತ್ತು ಹರ್ಬಲ್ ಟೀ ಸೇವನೆ ಮಾಡಿ. ಗಿಡಮೂಲಿಕೆಗಳ ಟೀ ಗಳಾದ ಶುಂಠಿ, ನಿಂಬೆಹಣ್ಣು, ಮತ್ತು ಕ್ಯಾಮೋಮೈಲ್ ಟೀ ಅನ್ನು ಮಧ್ಯಾಹ್ನದ ವೇಳೆ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿರುವಿಕೆಗಗೆ ಮತ್ತು ಚರ್ಮದ ಕಾಂತಿಗೆ ಒಳ್ಳೆಯದು.

ಹೆಚ್ಚು ನೀರಿನಂಶ ಇರುವ ತರಕಾರಿಗಳನ್ನು ಸೇವಿಸಿ :
ನಿಮ್ಮ ದೇಹಕ್ಕೆ ನೀರಿನ ಅಂಶ ಇರುವ ಆಹಾರ ಸೇವಿಸಿದರೆ ಒಳ್ಳೆಯದು. ನೀರಿನಂಶ ಹೆಚ್ಚಾಗಿ ಇರುವ ಆಹಾರಗಳು ಸುಲಭವಾಗಿ ಜೀರ್ಣವಾಗುತ್ತದೆ. ಕ್ಯಾರಟ್, ಮೂಲಂಗಿ, ಸೌತೆಕಾಯಿ, ಸೊಪ್ಪು, ಈ ತರಹದ ಆಹಾರಗಳನ್ನು ಸೇವಿಸುವುದರಿಂದ ಇದು ನಿಮ್ಮ ದೇಹವನ್ನು ಶುದ್ದಿ ಗೊಳಿಸುತ್ತದೆ. ಇವುಗಳನ್ನು ಬೇಯಿಸಿ ಅಥವಾ ಸಾಲಡ್ ಮಾಡಿ ಸೇವಿಸಿ ಕನಿಷ್ಟ 3-5 ತರಕಾರಿಗಳನ್ನು ಮಿಶ್ರ ಮಾಡಿ ಸೇವಿಸಿ. ಇದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ .

ವ್ಯಾಯಾಮ ಮಾಡಿ :
ವ್ಯಾಯಾಮ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ, ದೇಹದ ಅರೋಗ್ಯಕ್ಕೆ ಮಾತ್ರವಲ್ಲದೇ, ಚರ್ಮದ ಸೌಂದರ್ಯವನ್ನು ಸಹ ಹೆಚ್ಚಿಸುತ್ತದೆ. ಮತ್ತು ಚರ್ಮ ಹೊಳೆಯುವಂತೆ ಮಾಡುತ್ತದೆ. ಚರ್ಮದ ಕೋಶಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ, ಮತ್ತು ಹಾನಿಕಾರಕ ಜೀವಾಣುಗಳನ್ನು ಹೊರಹಾಕಿ ಸಂಪೂರ್ಣ ದೇಹವನ್ನು ಕಾಪಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾದಲ್ಲಿ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಲ್ಲದು. ಆದರೆ ದೀರ್ಘಕಾಲದ ಉಸಿರಾಟ ವ್ಯಾಯಾಮ ಮಾಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ .

ಧ್ಯಾನ ಮಾಡಿ :
ಧ್ಯಾನ ಮಾಡುವುದರಿಂದ ನಿಮ್ಮ ಚರ್ಮದ ಕಾಂತಿಯಲ್ಲಾಗುವ ಬದಲಾವಣೆಯನ್ನು ನೋಡಿ ನೀವೆ ಆಶ್ಚರ್ಯ ಪಡುವಲ್ಲಿ ಯಾವುದೇ ಸಂಶಯವಿಲ್ಲ. ಉತ್ತಮವಾದ ಧ್ಯಾನ ಮನಸ್ಸನ್ನು ಶಾಂತಗೊಳಿಸುವುದಲ್ಲದೇ, ದೇಹದಲ್ಲಿ ಎನರ್ಜಿ ಹೆಚ್ಚಿಸುತ್ತದೆ.

ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಿ :
ಹೆಚ್ಚು ನೀರು ಕುಡಿಯುವುದರಿಂದ ಚರ್ಮದ ತೇವಾಂಶವನ್ನು ಕಾಪಾಡಿಕೊಂಡು ಹೈಡ್ರೇಟೆಡ್ ಆಗಿ ಇರಿಸಿಕೊಳ್ಳುವುದು ಬಹುಮುಖ್ಯ. ಎಣ್ಣೆ ಮಸಾಜ್ ಮತ್ತು ಅಭ್ಯಾಂಗ ಆಯುರ್ವೇದಿಕ್ ಸ್ಕಿನ್ ಕೇರ್ ನ ಒಂದು ಕ್ರಮ. ಗಿಡಮೂಲಿಕೆಗಳ ಆಯಿಲ್ ಮಸಾಜ್ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡುವುದಲ್ಲದೇ, ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಕಾಳುಗಳ ಸೇವನೆ :
ನಾವು ದಿನನಿತ್ಯ ಆಹಾರದಲ್ಲಿ ಕಾಳುಗಳ ಸೇವನೆ ಮಾಡಿದರೆ ಅದು ನಮ್ಮ ಚರ್ಮದ ಸುರಕ್ಷತೆಯನ್ನು ಕಾಪಾಡುತ್ತದೆ. ಹೊಳೆಯುವ ಚರ್ಮಕ್ಕಾಗಿ ಸೂರ್ಯಕಾಂತಿ ಬೀಜಗಳು, ಬಾದಾಮಿ, ಪಿಸ್ತಾ ಮತ್ತು ಅಗಸೆ ಬೀಜಗಳನ್ನು ನಿಯಮಿತವಾಗಿ ಸೇವಿಸಿ.

ಸಕ್ಕರೆ ಮತ್ತು ಉಪ್ಪಿನಂಶವನ್ನು ಕಡಿಮೆ ಬಳಕೆ ಮಾಡಿ :
ಹೆಚ್ಚಿನ ಉಪ್ಪಿನಂಶ ಸೇವನೆಯಿಂದ ರಕ್ತದ ಒತ್ತಡ ಹೆಚ್ಚಾಗುತ್ತದೆ, ಅಲ್ಲದೇ ಹೃದಯನಾಳ ರೋಗವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಮಾಣದ ಶುಗರ್ ಮತ್ತು ಉಪ್ಪು ಸೇವನೆಯಿಂದ Collagen ಮತ್ತು Elastin ಡ್ಯಾಮೇಜ್ ಗೆ ಕಾರಣವಾಗುತ್ತದೆ.

ವಿಪರೀತ ಸೂರ್ಯನ ಶಾಖಕ್ಕೆ ಚರ್ಮವನ್ನು ಒಡ್ಡದಿರಿ :
ಬೆಳಗಿನ ವೇಳೆ ಸೂರ್ಯನ ಶಾಖಕ್ಕೆ ಚರ್ಮ ಒಡ್ಡುವುದು ವಿಟಮಿನ್ ಡಿ ಅಗತ್ಯಕ್ಕಾಗಿ. ಆದರೆ ಅತೀ ಹೆಚ್ಚಾಗಿ ಸೂರ್ಯನ ಯುವಿ ಕಿರಣಗಳಿಗೆ ಚರ್ಮ ಒಡ್ಡುವುದರಿಂದ ಟ್ಯಾನಿಂಗ್, ಸನ್ ಬರ್ನ್, ಹೈಪರ್ಪಿಗ್ಮೆಂಟೇಶನ್, ಮತ್ತು ಸುಕ್ಕುಗಳನ್ನು ಉಂಟುಮಾಡಬಹುದು. ಅತಿಯಾದ ಬಿಸಿಲಿನ ವೇಳೆ ಹೊರಗೆ ಹೋದರೆ ಛತ್ರಿ, ಟೋಪಿ, ಸ್ಕ್ರಾಫ್ ಅನ್ನು ಸ್ಕಿನ್ ಸುರಕ್ಷತೆಗಾಗಿ ಬಳಸಲು ಮರೆಯದಿರಿ.

ಕಪ್ಪು ತುಟಿಗಳನ್ನು ಕೆಂಪಗೆ ಮಾಡಲು ಹೀಗೆ ಮಾಡಿ…!

ರಾತ್ರಿ ಮಲಗುವ ಮುನ್ನ ಹೀಗೆ ಮಾಡಿದರೆ ನಿಮ್ಮ ತ್ವಚೆ ಹೊಳೆಯುವುದು ಗ್ಯಾರೆಂಟಿ..!

ಸದಾ ಆರೋಗ್ಯವಾಗಿರಲು ಈ ನಿಯಮವನ್ನು ಫಾಲೋ ಮಾಡಿ..

 

- Advertisement -

Latest Posts

Don't Miss