Summer Special: ಬಾಳೆಹಣ್ಣು, ಆ್ಯಪಲ್‌ ಮಿಲ್ಕ್ ಶೇಕ್ ರೆಸಿಪಿ

Recipe: ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸುವುದು ತುಂಬಾ ಮುಖ್ಯ. ಎಳನೀರು, ಮಜ್ಜಿಗೆ, ಶರ್ಬತ್, ಹೀಗೆ ತರಹೇವಾಗಿ ಪೇಯಗಳನ್ನು ನಾವು ಸೇವಿಸಬಹುದು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ಮತ್ತು ಶಕ್ತಿ ನೀಡುವ ಬಾಳೆಹಣ್ಣು ಮತ್ತು ಆ್ಯಪಲ್ ಮಿಲ್ಕ್ ಶೇಕ್ ರೆಸಿಪಿ ಹೇಳಲಿದ್ದೇವೆ.

ಒಂದು ಬಾಳೆಹಣ್ಣು, ಒಂದು ಆ್ಯಪಲ್, ನೆನೆಸಿದ ನಾಲ್ಕು ಕಾಜು, ಬಾದಾಮ್, ದ್ರಾಕ್ಷಿ, ಅಖ್ರೋಟ್, ಅಂಜೂರ, ಪಿಸ್ತಾ, ಖರ್ಜೂರ, ಅವಶ್ಯಕತೆ ಇದ್ದಲ್ಲಿ ಬೆಲ್ಲ ಅಥವಾ ಸಕ್ಕರೆ, ಹಾಲು. ಐಸ್ ಕ್ಯೂಬ್ಸ್.

ಮೊದಲು ಆ್ಯಪಲನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಒಂದು ಜ್ಯೂಸರ್‌ಗೆ ತುಂಡರಿಸಿದ ಬಾಳೆಹಣ್ಣು, ಅರ್ಧ ಸೇಬು, ನೆನೆಸಿಟ್ಟ ಡ್ರೈಫ್ರೂಟ್ಸ್ (ಬಾದಾಮಿ ಬಳಸುವಾಗ ಸಿಪ್ಪೆ ತೆಗೆದು ಬಳಸಿ). ಬೆಲ್ಲ, ಹಾಲು, ಐಸ್‌ಕ್ಯೂಬ್ಸ್ ಸೇರಿಸಿ, ಬ್ಲೆಂಡ್ ಮಾಡಿದ್ರೆ, ಮಿಲ್ಕ್ ಶೇಕ್ ರೆಡಿ. ನೀವು ಇದಕ್ಕೆ ಬೇಕಾದರೆ ಇನ್ನಷ್ಟು ಹಾಲು ಸೇರಿಸಿಕೊಳ್ಳಬೇಕು. ರುಚಿಗಾಗಿ ಇದನ್ನು ಸೇವಿಸುವುದಿದ್ದರೆ, ಐಸ್‌ಕ್ರೀಮ್‌ ಕೂಡ ಬಳಸಬಹುದು.

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಕ್ಯಾರೆಟ್‌ -ಕಿಶ್‌ಮಿಶ್ ಸ್ಯಾಲೆಡ್

Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್

ಅತ್ಯುತ್ತಮ ಡ್ರೈಫ್ರೂಟ್ಸ್, ವೆರೈಟಿ ಖರ್ಜೂರ ಬೇಕಂದ್ರೆ, ಬೆಂಗಳೂರಿನ ಈ ಅಂಗಡಿಗೆ ಹೋಗಿ..

About The Author