Saturday, July 5, 2025

Latest Posts

ಬ್ಯೂಟಿಫುಲ್ ಕಾವ್ಯಾ ಶಾ ಫಾಲೋ ಮಾಡುವ ಬ್ಯೂಟಿ ಟಿಪ್ಸ್ ಏನು ಗೊತ್ತಾ..?

- Advertisement -

ನಿನ್ನೆ ತಾನೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ, ನಿರೂಪಕಿ, ಕಾವ್ಯಾ ಶಾ ನಮ್ಮ ಕರ್ನಾಟಕ ಟಿವಿ ಜೊತೆ ಮಾತನಾಡುತ್ತಾ, ಕೆಲ ಬ್ಯೂಟಿ ಟಿಪ್ಸ್‌ಗಳನ್ನ ಹಂಚಿಕೊಂಡಿದ್ದಾರೆ. ದಿನನಿತ್ಯ ತಾವು ಯಾವ ಬ್ಯೂಟಿ ಟಿಪ್ಸ್ ಅನುಸರಿಸುತ್ತಾರೆ., ಅವರ ತ್ವಚೆ ಇಷ್ಟು ಚೆಂದವಾಗಿರಲು ಕಾರಣವೇನು ಅಂತಾ ಕಾವ್ಯಾ ಶಾ ವಿವರಿಸಿದ್ದಾರೆ. ಹಾಗಾದ್ರೆ ಕಾವ್ಯಾ ಕೊಟ್ಟಿರುವ ಬ್ಯೂಟಿ ಟಿಪ್ಸೇನು ಅಂತಾ ನೋಡೋಣ ಬನ್ನಿ..

ನಾವು ನಮ್ಮ ವಾಹನವನ್ನ ಹುಷಾರಾಗಿ, ಸ್ಕ್ರ್ಯಾಚ್ ಬೀಳದ ಹಾಗೆ, ಚಂದ ಮಾಡಿ ಇಡುತ್ತೇವೋ, ಅದು ಸ್ವಲ್ಪ ಹಾಳಾದರೂ ಎಷ್ಟು ಬೇಸರ ಪಟ್ಟುಕೊಳ್ತೀವೋ, ಹಾಗೆ ನಮ್ಮ ತ್ವಚೆ ಎನ್ನುತ್ತಾರೆ ಕಾವ್ಯಾ. ನಮ್ಮ ತ್ವಚೆ ಕೂಡ ನ್ಯಾಚುರಲ್ ಪೇಂಟ್ ಇದ್ದ ಹಾಗೆ, ಅದನ್ನ ಕೂಡ ನಾವು ಚೆಂದವಾಗಿ ಇಟ್ಟುಕೊಳ್ಳಬೇಕು. ಅದು ಹಾಳಾದರೂ ನಮ್ಮ ಸೌಂದರ್ಯ ಕುಂದುಹೋಗುತ್ತದೆ. ಹಾಗಾಗಿ ನಾವು ನಮ್ಮ ತ್ವಚೆಯ ಆರೈಕೆ ಖಂಡಿತ ಮಾಡಬೇಕು ಅಂತಾರೆ ಕಾವ್ಯಾ.

ನಮ್ಮ ದೇಹದ 70% ಭಾಗ ನ್ಯಾಚುರಲ್ ಬ್ಯೂಟಿ ಮೆಂಟೇನ್ ಮಾಡಲು ಸಹಕಾರಿಯಾಗಿದೆ. ಇದನ್ನ ಆರೋಗ್ಯಕರ ಊಟ, ತಿಂಡಿ ತಿಂದು ನಾವು ಮೆಂಟೇನ್ ಮಾಡ್ಬೇಕು. ಮತ್ತು ಉಳಿದ ಶೇ.30ರಷ್ಟು ನಾವು ಮೇಕಪ್, ಕ್ರೀಮ್, ಲೋಶನ್ ಬಳಸಿ, ಅಂದ ಹೆಚ್ಚಿಸಿಕೊಳ್ಳುತ್ತೇವೆ. ನಾವು ಜೀವವಿಲ್ಲದ ವಸ್ತುವನ್ನ ಹೇಗೆ ಕಾಳಜಿಯಿಂದ ಕಾಣುತ್ತೇವೋ, ಹಾಗೆ ಜೀವವಿರುವ ನಮ್ಮ ತ್ವಚೆಯ ಆರೈಕೆಯನ್ನ ಕೂಡ ನಾವು ಮಾಡಬೇಕು ಅನ್ನೋದು ಕಾವ್ಯಾ ಮಾತು.

ಇನ್ನು ಕಾವ್ಯಾ ಐಸ್ ಫೇಶಿಯಲ್ ಮಾಡಿಕೊಳ್ಳೋದು ಉತ್ತಮ ಅನ್ನೋ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ದೊಡ್ಡ ದೊಡ್ಡ ನಟಿಯರೆಲ್ಲ ಇದೇ ಬ್ಯೂಟಿ ಟಿಪ್ಸ್ ಅನುಸರಿಸುತ್ತಿದ್ದು, ಐಸ್ ಫೇಶಿಯಲ್ ಅಥವಾ ಐಸ್ ಕ್ಯೂಬ್ಸ್‌ನಿಂದ ಮುಖವನ್ನ ರಬ್‌ ಮಾಡಿಕೊಳ್ಳುವುದು ಬೆಟರ್. ಇನ್ನು ನಾವು ಬರೀ ಹೊರಗಡೆ ಹೋಗುವಾಗಷ್ಟೇ ಅಲ್ಲ. ಬದಲಾಗಿ, ಮನೆಯಲ್ಲಿದ್ದಾಗಲೂ ಸನ್‌ಸ್ಕ್ರೀಮ್ ಲೋಶನ್ ಹಚ್ಚಿಕೊಳ್ಳಬೇಕು. ಇನ್ನು ಈ ಲೋಶನ್ ಬಳಸುವಾಗ ನಿಮ್ಮ ತ್ವಚೆ ಯಾವ ರೀತಿಯದ್ದು..? ಅದಕ್ಕೆ ಯಾವ ರೀತಿಯ ಕ್ರೀಮ್ ಬಳಸಿದರೆ ಉತ್ತಮ ಅನ್ನೋದನ್ನ ತಿಳಿದು ಬಳಸಿ ಅಂತಾ ಕಾವ್ಯಾ ಟಿಪ್ಸ್ ನೀಡಿದ್ದಾರೆ.

- Advertisement -

Latest Posts

Don't Miss