Saturday, January 18, 2025

Latest Posts

ಬೀಟ್ರೂಟ್ನಿಂದ ಈ ಸ್ವಾದಿಷ್ಟಕರ ತಿಂಡಿ ಮಾಡಬಹುದು ನೋಡಿ..

- Advertisement -

ಬೀಟ್‌ರೂಟ್‌ನಿಂದ ಮಾಡುವ ಎಲ್ಲ ಪದಾರ್ಥವೂ ರುಚಿರವಾಗಿರತ್ತೆ. ಬೀಟ್‌ರೂಟ್‌ ಪಲ್ಯ, ಬೀಟ್‌ರೂಟ್‌ ಸಾಂಬಾರ್, ರಸಂ, ಸೂಪ್, ಹಲ್ವಾ, ಸಲಾಡ್ ಎಲ್ಲವೂ ಸೂಪರ್‌ ಆಗಿರತ್ತೆ. ಅದೇ ರೀತಿ ನಾವಿವತ್ತು ಬೀಟ್ರೂಟ್‌ನಿಂದ ಮಾಡುವ ಸ್ವಾದಿಷ್ಟಕರ ತಿಂಡಿಯೊಂದರ ರೆಸಿಪಿ ಹೇಳಲಿದ್ದೇವೆ.ಹಾಗಾದ್ರೆ ಇದನ್ನ ಮಾಡೋದು ಹೇಗೆ..? ಇದನ್ನ ಮಾಡಲು ಏನೇನು ಸಾಮಗ್ರಿ ಬೇಕು..? ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ : ಒಂದು ಕಪ್ ತುರಿದ ಬೀಟ್ರೂಟ್ ಮತ್ತು ಕ್ಯಾರೆಟ್, ಎರಡು ಬೇಯಿಸಿ, ಸ್ಮ್ಯಾಶ್ ಮಾಡಿದ ಬಟಾಟೆ, ಅರ್ಧ ಕಪ್ ಬೇಯಿಸಿದ ಬಟಾಣಿ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಧನಿಯಾಪುಡಿ, ಜೀರಿಗೆ ಪುಡಿ, ಕೊಂಚ ಅರಿಶಿನ, ಅರ್ಧ ಸ್ಪೂನ್ ಸಕ್ಕರೆ, ಸಣ್ಣಗೆ ಕೊಚ್ಚಿದ ಕೊತ್ತೊಂಬರಿ ಸೊಪ್ಪು, ಬ್ರೆಡ್ ಕ್ರಂಬ್ಸ್, ಒಂದು ಸ್ಪೂನ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು. ಕರಿಯಲು ಎಣ್ಣೆ.

ಮಾಡುವ ವಿಧಾನ : ಮೊದಲು ತುರಿದ ಕ್ಯಾರೆಟ್, ಬೀಟ್‌ರೂಟ್, ಬಟಾಟೆ, ಬಟಾಣಿ ಎಲ್ಲವನ್ನೂ ಒಂದು ಬೌಲ್‌ಗೆ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ಕೊತ್ತೊಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲೆ, ಅರಿಶಿನ, ಉಪ್ಪು, ಧನಿಯಾ ಪುಡಿ, ಜೀರಿಗೆ ಪುಡಿ, ಸಕ್ಕರೆ ಇವೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿ. ಈಗ ಕಾರ್ನ್‌ ಫ್ಲೋರ್ ಮತ್ತು ಕೊಂಚ ನೀರು ಮಿಕ್ಸ್ ಮಾಡಿ, ಬೀಟ್‌ರೂಟ್ ಮಿಶ್ರಣವನ್ನು ವಡೆಯ ಶೇಪ್‌ ಮಾಡಿ, ಕಾರ್ನ್‌ ಫ್ಲೋರ್‌ ಪೇಸ್ಟ್‌ನಲ್ಲಿ ಅದ್ದಿ, ಬ್ರೆಡ್‌ ಕ್ರಂಬ್ಸ್ ಅಥವಾ ರವಾದಲ್ಲಿ ಅದ್ದಿ, ಎಣ್ಣೆಯರಿ ಕರಿದರೆ, ಬೀಟ್‌ರೂಟ್ ವಡೆ ರೆಡಿ.

ಶವರ್ ಬಳಸಿ ಸ್ನಾನ ಮಾಡಿದ್ರೆ ಆರೋಗ್ಯಕ್ಕೆ ಆಗತ್ತೆ ಇಂಥ ನಷ್ಟ..

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 2

ಸಕ್ಕರೆ ಖಾಯಿಲೆಯನ್ನು ಕಂಟ್ರೋಲ್ ಮಾಡೋದು ಹೇಗೆ..? ಭಾಗ 1

- Advertisement -

Latest Posts

Don't Miss